ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (: ) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.) == ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು == ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ. ಇದು ಮೀಟರ್ ಮಾಪನದ ಲೆಖ್ಖದಲ್ಲಿದೆ ೧೦೧=೧x೧೦ಮೀಟರ್ ; ೧೦-೧= ೧/೧೦ ಮೀ.ಸೆಂ.ಮೀ=೧/೧೦೦ಮೀ.(?)