ಮುಂಡ್ಕೂರು (ಮುಂಡೇರ್, ಮುಂಡುಕೂರು, , , ) ಉಡುಪಿ ಜಿಲ್ಲೆಯ ತೆಂಕಣ ಗಡಿ ಭಾಗದ ಒಂದು ಗ್ರಾಮ. ಮುಂಡ್ಕೂರಿನ ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಂಗಳೂರು ತಾಲೂಕಿಗೆ ಸೇರಿದ ಉಳೆಪಾಡಿ, ಕರ್ನಿರೆ, ಕಲ್ಲಮುಂಡ್ಕೂರು ಇತ್ಯಾದಿ ಗ್ರಾಮಗಳು ಇವೆ. == ಮಾರ್ಗಸೂಚಿ == ಮಂಗಳೂರು ತಾಲೂಕಿನ ಕಿನ್ನಿಗೋಳಿ ಸನಿಹ ಮೂರುಕಾವೇರಿಯಿಂದ ದಾಮಸ್ಕಟ್ಟೆ ಸಂಕಲಕರಿಯದ ಮೂಲಕ ಬೆಳ್ಮಣ್ಣುಗೆ ಹೋಗುವ ರಾಜ್ಯ ರಸ್ತೆಯಲ್ಲಿ ಮುಂಡ್ಕೂರು ಗ್ರಾಮವಿದೆ. ಮೂರುಕಾವೇರಿಗೆ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಮೂಡಬಿದ್ರೆ, ಕಟೀಲು ಕಡೆಗಳಿಂದ ಹೋಗಲು ರಸ್ತೆಗಳಿವೆ. ಹಾಗೆಯೇ, ಬೆಳ್ಮಣ್ಣುಗೆ ಪಡುಬಿದ್ರಿ (ಪಡ್ಡೆದ್ರ) , ಶಿರ್ವಾ, ನಿಟ್ಟೆ, ಕಾರ್ಕಳ ಕಡೆಗಳಿಂದ ಬರಲು ರಸ್ತೆಗಳಿವೆ. ಮಂಗಳೂರಿನಿಂದ ಬರುವವರಿಗೆ (1) ಬಿಜೈ-(ಬೊಂದೆಲ್)- ಕಾವೂರು-ಬಜಪೆ- ಕಟೀಲ್-ಮೂರುಕಾವೇರಿ-ಮುಂಡ್ಕೂರು ಹತ್ತಿರದ ದಾರಿ. (2) ಪರ್ಯಾಯವಾಗಿ: ಕೂಳೂರು-ಹಳೆಯಂಗಡಿ-ಪಕ್ಷಿಕೆರೆ-ಕಿನ್ನಿಗೋಳಿ- ಮೂರುಕಾವೇರಿ-ಸಂಕಲಕರಿಯ-ಮುಂಡ್ಕೂರು ಇಲ್ಲವೆ (3) ನಂತೂರು- ಕುಲಶೇಖರ- ಕುಡುಪು-ವಾಮಂಜೂರು-ಗುರುಪುರ-ಕೈಕಂಬ- ಪೆರಾರ್- ಬಜಪೆ-ಕಟೀಲು-ಮೂರುಕಾವೇರಿ-ಮುಂಡ್ಕೂರು ರಸ್ತೆಯಿಂದ ಬರಬಹುದು. ಉಡುಪಿಯಿಂದ ಬರುವವರಿಗೆ ಉಡುಪಿ- ಕಟಪಾಡಿ- ಶಿರ್ವ ಮಂಚಕಲ್- ಬೆಳ್ಮಣ್ಣು-ಮುಂಡ್ಕೂರು ಹತ್ತಿರದ ದಾರಿ. ಕಾರ್ಕಳದಿಂದ ಬರುವವರಿಗೆ ಕಾರ್ಕಳ- ನಿಟ್ಟೆ-ಬೆಳ್ಮಣ್ಣು -ಮುಂಡ್ಕೂರು ಹತ್ತಿರದ ದಾರಿ. ಮೂಡಬಿದ್ರಿಯಿಂದ ಬರುವವರಿಗೆ ಮೂಡಬಿದ್ರಿ -ಅಲಂಗಾರು- ಪುತ್ತಿಗೆ- ಕೊಡ್ಯಡ್ಕ-ಕಡಂದಲೆ-ಪಾಲ್ಡಡ್ಕ-ಸಚ್ಚೇರಿಪೇಟೆ-ಮುಂಡ್ಕೂರು ಹತ್ತಿರದ ದಾರಿ. ಪರ್ಯಾಯವಾಗಿ (2)ಮೂಡಬಿದ್ರಿ- ಕಲ್ಲಮುಂಡ್ಕೂರು-ಮೂರುಕಾವೇರಿ-ಮುಂಡ್ಕೂರು, ಇಲ್ಲವೆ (3) ಮೂಡಬಿದ್ರಿ-ಮಿಜಾರು-ಗಂಜಿಮಠ-ಕೈಕಂಬ- ಬಜಪೆ-ಕಟೀಲು- ಮೂರುಕಾವೇರಿ-ಮುಂಡ್ಕೂರು ದಾರಿಯಿಂದ ಬರಬಹುದಾಗಿದೆ. === ಭೌಗೋಳಿಕ ನಿರ್ದೆಶಾಂಕಗಳು === ಮುಂಡ್ಕೂರು ಗ್ರಾಮದ (ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದ) ಭೌಗೋಳಿಕ ನಿರ್ದೇಶಾಂಕಗಳು ಡಿಗ್ರಿ-ಮಿನಿಟ್-ಸೆಕೆಂಡುಗಳಲ್ಲಿ ಹೀಗಿವೆ: ಅಕ್ಷಾಂಶ: 13° 07' 42.18" ರೇಖಾಂಶ: 74° 52' 00.61" == ದುರ್ಗಾಪರಮೇಶ್ವರಿ ದೇವಸ್ಥಾನ == == ವಿಠೋಬ ದೇವಸ್ಥಾನ == == ಗರೋಡಿ == == ಉಲ್ಲೇಖ == , . (1969) . , . . 31+ 184 , . (1975,2014) .( 2014), ,, ( 1975).. 457+ ++ . ://..//11933303 ://.//...2015.129914/2015.129914.-----Culture_djvu.