ಮುಖವಾಸ ವರ್ಣರಂಜಿತ ಊಟದ ನಂತರದ ಲಘು ಆಹಾರ ಅಥವಾ ಜೀರ್ಣ ಸಹಾಯಕವಾಗಿದೆ. ಇದನ್ನು ಬಾಯಿಯನ್ನು ಶುದ್ಧಗೊಳಿಸುವ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ವಿಶೇಷವಾಗಿ ಊಟದ ನಂತರ. ಇದನ್ನು ವಿವಿಧ ಬೀಜಗಳು ಮತ್ತು ನಟ್‍ಗಳಿಂದ ತಯಾರಿಸಬಹುದು, ಉದಾಹರಣೆಗೆ ಹಲವುವೇಳೆ ಸೊಂಪು, ಸಾಲೇಯ, ಕೊಬ್ಬರಿ, ಕೊತ್ತುಂಬರಿ ಬೀಜ ಮತ್ತು ಎಳ್ಳು. ಸಕ್ಕರೆ ಮತ್ತು ಪುದೀನಾ ಎಣ್ಣೆ ಸೇರಿದಂತೆ ವಿವಿಧ ಸಾರತೈಲಗಳನ್ನು ಸೇರಿಸಿರುವುದರಿಂದ ಇದು ರುಚಿಯಲ್ಲಿ ಸಿಹಿಯಾಗಿದ್ದು ಬಹಳ ಸುವಾಸನೆಯುಕ್ತವಾಗಿರುತ್ತದೆ. ಬೀಜಗಳು ಉಪ್ಪ/ಖಾರವಾಗಿ ಅಥವಾ ಸಿಹಿಯಾಗಿರಬಹುದು—ಸಕ್ಕರೆಯಿಂದ ಲೇಪಿತವಾಗಿರುತ್ತವೆ ಮತ್ತು ಹೊಳೆಯುವ ಬಣ್ಣಗಳನ್ನು ಹೊಂದಿರುತ್ತದೆ. ಈ ಪದವು ಮುಖ (ಅಂದರೆ ಬಾಯಿ) ಮತ್ತು ವಾಸ (ಅಂದರೆ ಗಂಧ) ಗಳ ಸಂಯೋಜನೆಯಾಗಿದೆ. == ಉಲ್ಲೇಖಗಳು ==