== ಮುದಗಲ್ ಚರಿತ್ರೆ == ಡಾ.ಶರಣಪ್ಪ ಆನೆಹೊಸೂರು ಪ್ರಜಾವಾಣಿ ವರದಿಗಾರ ಮುದಗಲ್. ರಾಯಚೂರು ಜಿಲ್ಲೆ ಕೋಟೆ-ಕೊತ್ತಲುಗಳ ನಾಡು. ಲಿಂಗಸಗೂರು ತಾಲ್ಲೂಕಿನಲ್ಲಿ ಮುದಗಲ್, ಜಲದುರ್ಗ, ಗುಡಗುಂಟಿ, ಮೇಧಾವಿರಾಯನ, ಹೊನ್ನಳ್ಳಿ, ಆನೆಹೊಸೂರು ಕೋಟೆಗಳು ಸೇರಿವೆ. ಇವುಗಳಲ್ಲಿ ಜಲದುರ್ಗ ಮತ್ತು ಮುದಗಲ್ ಕೋಟೆಗಳಿಗೆ ಐತಿಹಾಸಿಕ ಮಹತ್ವವಿದೆ. ಮುದಗಲ್ಗೆ ಐತಿಹಾಸಿಕ ಮಹತ್ವ ಬಂದಿರುವುದು ಕೇವಲ ಈ ಕೋಟೆಯಿಂದಲ್ಲ. ಕ್ರಿ.ಶ 3ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಗ್ರೀಕ್ ಪ್ರವಾಸಿ ಟೆಲಾಮಿಯ ಪ್ರವಾಸ ಕಥನದಿಂದ ಹಾಗೂ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ನಿರ್ಮಿತವಾದ ಚರ್ಚನಿಂದಾಗಿ ಮುದಗಲ್ ಪ್ರಸಿದ್ಧಿ ಪಡೆದಿದೆ. ಮುದಗಲ್ ರಾಯಚೂರು ಜಿಲ್ಲೆಯಿಂದ ಪಶ್ಚಿಮಕ್ಕೆ 116 ಕಿ.ಮೀ. ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ 18 ಕಿ.ಮೀ ಅಂತರದಲ್ಲಿದೆ. ಗ್ರೀಕ್ ಪ್ರವಾಸಿ ಟಾಲೆಮಿಯ ಎ ಗೈಡ್ ಟು ಜಿಯಾಗ್ರಫಿ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದಂತೆ ಮುದಗಲ್ ಕ್ರಿ.ಪೂ. 150ರಲ್ಲಿ ಅಸ್ತಿತ್ವದಲ್ಲಿತ್ತು ಎಂದು ತಿಳಿದು ಬರುತ್ತಿದೆ. ಜಿಲ್ಲೆಯ ಕೋಟೆಗಳಲ್ಲಿ ಮುದಗಲ್ ಕೋಟೆ ತನ್ನದೆಯಾದ ಇತಿಹಾಸ ಹೊಂದಿದೆ. ಮೌರ್ಯರು, ಕಲ್ಯಾಣ ಚಾಲುಕ್ಯರು, ದೇವಗಿರಿ ಯಾದವರು, ಕದಂಬ, ಕುಮ್ಮಟ ದುರ್ಗಾದ ನಾಯಕರು, ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್ಶಾಹಿಗಳು, ಮೊಘಲರು ಹಾಗೂ ನಿಜಾಮರು ಸೇರಿ ಇನ್ನಿತರ ಅರಸರ ಆಡಳಿತದಲ್ಲಿದ್ದ ಈ ಕೋಟೆ ಸಾವಿರಾರು ವರ್ಷಗಳ ಹಿಂದೆ ಹುಟ್ಟಿದೆ. ಈ ಕೋಟೆಗಾಗಿ ಹದಿನಾರನೇ ಶತಮಾನದವರೆಗೆ 11 ಯುದ್ಧಗಳಿಂದ ತಲ್ಲಣಿಸುತ್ತ, ರಕ್ತದಲ್ಲೇ ತೇಲುತ್ತಾ ಅಭದ್ರತೆಯ ಆತಂಕದಲ್ಲಿ ಬಳಲಿತ್ತು. ಸಮುದ್ರ ಮಟ್ಟಕ್ಕಿಂತ 1311 ಅಡಿ ಎತ್ತರ ಪ್ರದೇಶದಲ್ಲಿದ್ದು, 13381-25 ಹೆಕ್ಟರ್ ಭೂ ಪ್ರದೇಶ ಹೊಂದಿದೆ. ಇಲ್ಲಿ ಬಂಡೆಗಲ್ಲಿನ, ಬಯಲು ಭೂಮಿ ಹಾಗೂ ಕಪ್ಪು ಮಣ್ಣಿನಿಂದ ಕೂಡಿದ ಒಣಹವೆ ಪ್ರದೇಶವಾಗಿದೆ. 160 120 ಉತ್ತರ ಅಕ್ಷಾಂಶ ಮತ್ತು 770 210 ಪೂರ್ವ ರೇಖಾಂಶಗಳವರೆಗೆ ವಿಸ್ತರಿಸಿದೆ., ಮುದಗಲ್ ನಮಗೆ 2000 ವರ್ಷಗಳ ಇತಿಹಾಸವನ್ನು ಬಿಚ್ಚಿಡುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲಿನ ಶಾಸನಗಳು, ಮಸೀದಿ-ಮಂದಿರಗಳು, ಕೋಟೆ ಕೊತ್ತಲುಗಳು, ಇನ್ನಿತರ ಸ್ಮಾರಕಗಳು ಇಲ್ಲಿನ ಚರಿತ್ರೆ ಅರಿಯಲು ಆಕರಗಳಾಗಿವೆ. ಮುದಗಲ್ಲ ಮೌರ್ಯರ ಅರಸ ಅಶೋಕನ ಆಡಳಿತಕ್ಕೆ ಒಳಪಟ್ಟಿತು. ಅಶೋಕ ತನ್ನ ಆಡಳಿತ ಜತೆಗೆ ಬೌದ್ಧಧರ್ಮವನ್ನು ಪ್ರಚಾರ ಮಾಡಿದ. ಕೋಟೆಯ ಒಳ ಭಾಗದಲ್ಲಿರುವ ಬಾಲಹಿಜಾರದ ಸಮೀಪದ ಕ್ರಿ.ಶ.1048 ತ್ರೈಲೋಕ್ಯಮಲ್ಲನ ತೃಟಿತಗೊಂಡ ಶಾಸನ, ಕ್ರಿ.ಶ.1046 ರ ಒಂದನೇ ಸೋಮಶ್ವರನ ಕಿಲಾರಹಟ್ಟಿ ಶಾಸನ ಸೇರಿ ಇನ್ನೂ ಹಲವಾರ ಶಾಸನಗಳು ಮುದಗಲ್ಲನಲ್ಲಿ ನಡೆಸಿದ ಕಲ್ಯಾಣ ಚಾಲುಕ್ಯರ ಆಡಳಿತದ ಬಗ್ಗೆ ತಿಳಿಸುತ್ತದೆ. ಚಾಲುಕ್ಯರ ಆಡಳಿತಾವಧಿಯಲ್ಲಿ ಅನೇಕ ಲೋಕೋಪಯೋಗಿ ಕಾರ್ಯಗಳು ನಡೆದಿವೆ. ದೇವಗಿರಿ ಯಾದವರ ವಂಶದ ಭಿಲ್ಲಮನ ಆಡಳಿತದಲ್ಲಿ ಮಹಾಮಂಡಳೇಶ್ವರನಾದ ಕದಂಬ ಕುಲದ ಬಿಜ್ಜರಸನು ಎಡದೊರೆ ನಾಡಿನ ಕರಡಿಕಲ್ಲು-300 ಮುದಗಲ್ಲನ್ನು ರಾಜಧಾನಿಯನ್ನಾಗಿ ಆಳುತ್ತಿದ್ದ ಎಂಬ ಉಲ್ಲೇಖಗಳಿವೆ. ಕರಡಿಕಲ್ಲು ಕದಂಬರ ರಾಜಧಾನಿಯಾದ ಮುದಗಲ್ಲ ಇಂದ್ರನ ಅಮರಾವತಿಗಿಂತಲೂ ಮಿಗಿಲಾಗಿತ್ತೆಂದು ಶಾಸನದಲ್ಲಿ ತಿಳಿಸುತ್ತದೆ. ಮುದಗಲ್ಲನ ಕ್ರಿ.ಶ. 1215 ರ ಶಾಸನ ದೇವಗಿರಿ ಯಾದವ ಅರಸ ಸಿಂಹಣನನ್ನು ಮತ್ತು ಅವನ ದಂಡನಾಯಕ ದಾಮೋದರನ ಕುರಿತು ಹೇಳುತ್ತಿದೆ. ಮುದಗಲ್ಲನ್ನು ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್ಶಾಹಿಗಳಿಗೆ ಪ್ರತಿಷ್ಠೆ ಕೇಂದ್ರವಾಗಿತ್ತು. ಗಡಿಭಾಗದ ಆಯಕಟ್ಟಿನ ಸೂಕ್ಷ್ಮ ಕೇಂದ್ರವಾಗಿದ್ದ ಮುದಗಲ್ ಆರ್ಥಿಕ-ವಾಣಿಜ್ಯ ವ್ಯಾಪಾರ ಕೇಂದ್ರವಾಗಿತ್ತು. ಮುದಗಲ್ಲನಾಡು ವಿಜಯನಗರ ಅರಸರ ಏಳು-ಬೀಳಿನ ಪ್ರದೇಶವಾಗಿ, ಮುಸ್ಲಿಂರಿಗೆ ಕದನ ಕಣವಾಗಿ ಮಾರ್ಪಟಿದ್ದ ಮುದಗಲ್ಲಗೆ ಮುದಗಲ್ಲನಾಡು, ಮುದಗಲ್ಲಸೀಮೆ ಎಂದು ಕರೆಯಲಾಗಿದೆ. ವಿಜಯನಗರ ಅರಸರ ರಾಯಚೂರು ಜಿಲ್ಲೆಯಲ್ಲಿ ಮೊದಲು ಉಲ್ಲೇಖತವಾದ ಶಾಸನ ಮುದಗಲ್ಲದಲ್ಲಿದೆ. ಇದು ಕ್ರಿ.ಶ.1436 ರಲ್ಲಿ ರಚಿಸಿದ್ದು, ವಿಜಯನಗರ ಅರಸರ ವೀರಪ್ರತಾಪ ದೇವರಾಯನ ಆಡಳಿತ ಬಗ್ಗೆ ತಿಳಿಸುತ್ತಿದೆ. ಕ್ರಿ.ಶ. 1443 ರಲ್ಲಿ ಅಲ್ಲಾವುದ್ದೀನ್ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಮುದಗಲ್ಲನ್ನು ವಶಪಡಿಸಿಕೊಳ್ಳುತ್ತಾನೆ. ಕ್ರಿ.ಶ.1366 ರ ವೇಳೆಗೆ ಬಹುಮನಿ ಸುಲ್ತಾನರ ಅಧೀನದಲ್ಲಿದ್ದ ಮುದಗಲ್ಲುನ್ನು ವಿಜಯನಗರದ ಅರಸ ಬುಕ್ಕರಾಯ ವಶಪಡಿಸಿಕೊಳ್ಳುತ್ತಾನೆ. ಮುದಗಲ್ ಕೋಟೆಗಾಗಿ ಕ್ರಿ.ಶ.1375-76 ರಲ್ಲಿ ವಿಜಯನಗರ ಅರಸರ ಒಂದನೇ ಬುಕ್ಕನಿಗೂ ಮತ್ತು ಬಹುಮನಿ ಸುಲ್ತಾನ ಮುಜಾಹಿದ್ ನಡುವೆ ಯುದ್ದ ನಡೆಯಿತು. ಬುಕ್ಕನ ಅಧೀನದಲ್ಲಿದ್ದ ಮುದಗಲ್ಲ ಕೋಟೆ ವಶಪಡಿಸಿಕೊಳ್ಳಲು ಮುಜಾಹಿದ್ಗೆ ಸಾಧ್ಯವಾಗಲಿಲ್ಲ. ಬುಕ್ಕನ ಮರಣ ನಂತರ ಬಹುಮನಿ ಫಿರೋಜ ಮುದಗಲ್ಲ ವಶಪಡಿಸಿಕೊಂಡನು. ಕ್ರಿ.ಶ. 1406 ರಲ್ಲಿ ವಿಜಯನಗರ ಅರಸ ಒಂದನೇ ದೇವರಾಯ ಮುದಗಲ್ಲಗಾಗಿ ಕಾದಾಟ ಮುಂದುವರಿಸಿದನು. ಒಂದನೇ ದೇವರಾಯ ಮತ್ತು ಫಿರೋಜನಿಗೂ ಯುದ್ದ ನಡೆಯಿತು. ಫಿರೋಜನು ರಣರಂಗದಿಂದ ಪಲಾಯನಗೈದನು. ಒಂದನೇ ದೇವರಾಯ ಮರಣ ನಂತರ ಇವನ ಮಗ ವಿಜಯ ಅಧಿಕಾರಕ್ಕೆ ಬಂದನು. ಇವನು ಬಹುಮನಿಯವರ ಆಡಳಿತದಲ್ಲಿದ್ದ ಯಾದಗಿರಿ ವಶಪಡಿಸಿಕೊಂಡನು. ಇದರಿಂದ ಭಯಗೊಂಡು ಬಹುಮನಿ ಸಾಮ್ರಾಜ್ಯ ಬೀದರಿಗೆ ರಾಜಧಾನಿಯಾಗಿ ವಗರ್ಾಹಿಸಿದರು. ನಂತರ ಎರಡನೇ ದೇವರಾಯ ಅಧಿಕಾರಕ್ಕೆ ಬಂದನು. ಈತನ ಆಡಳಿತಾವಧಿಯಲ್ಲಿ ಮುದಗಲ್ಲನಲ್ಲಿ ಅನೇಕ ಲೋಕೋಪಯೋಗಿ ಕಾರ್ಯಗಳು ನಡೆದಿವೆ. ಮುದಗಲ್ಲ ಕೋಟೆಗಾಗಿ ದೇವರಾಯನಿಗೂ ಮತ್ತು ಅಲ್ಲಾವುದ್ಧೀನ ನಡುವೆ ಕ್ರಿ.ಶ. 1443 - 44 ಅವಧಿಯಲ್ಲಿ ಎರಡು ಬಾರಿ ಯುದ್ಧ ನಡೆಯುತ್ತದೆ. ಮುದಗಲ್ಲನ್ನು ವಶಪಡಿಸಿಕೊಳ್ಳಬೇಕು ಎನ್ನುವ ಪ್ರಯತ್ನಗಳೆಲ್ಲವೂ ವಿಫಲಗೊಂಡವು. ಮುದಗಲ್ಲ ಕ್ರಿ.ಶ.1493 ರಲ್ಲಿ ವಿಜಯಪುರ ಯೂಸುಫ್ ಆದಿಲ್ ಖಾನನ ವಶವಾಯಿತು. ಮತ್ತೆ ಯೂಸುಫ್ ಆದಿಲ್ ಶಾಹಿ ಆಡಳಿತದಲ್ಲಿದ್ದ ಮುದಗಲ್ಲನ್ನು ತುಳುವಂಶದ ವೀರನರಸಿಂಹ ವಶಪಡಿಸಿಕೊಳ್ಳುತ್ತಾನೆ. ಕ್ರಿ.ಶ 1520 ರಲ್ಲಿ ಮುದಗಲ್ ಕೋಟೆಗಾಗಿ ವಿಜಯನಗರ ಅರಸ ಕೃಷ್ಣದೇವರಾಯ ಮತ್ತು ವಿಜಯಪುರ ಇಸ್ಮಾಯಿಲ್ ಆದಿಲ್ ಶಾಹಿ ನಡುವೆ ಭೀಕರ ಯುದ್ಧ ನಡೆಯುತ್ತದೆ. ಆಗ ಮುದಗಲ್ ಕೋಟೆ ಕೃಷ್ಣದೇವರಾಯನ ವಶಕ್ಕೆ ಬಂದಿತು. ಕ್ರಿ.ಶ. 1529 ರಲ್ಲಿ ಕೃಷ್ಣದೇವರಾಯ ಮರಣ ಹೊಂದಿದ ನಂತರ ವಿಜಯ ನಗರ ಅರಸರ ಆಂತರಿಕ ಕಚ್ಚಾಟದಲ್ಲಿ ವಿಜಯಪುರ ಇಸ್ಮಾಯಿಲ್ ಆದಿಲ್ ಶಾಹಿ ಕ್ರಿ.ಶ 1530 ರಲ್ಲಿ ಎರಡು ಬಾರಿ ದಾಳಿ ಮಾಡಿ ಮುದಗಲ್ಲ ಕೋಟೆ ವಶಪಡಿಸಿಕೊಂಡನು. ವಿಜಯಪುರ ಇಸ್ಮಾಲ್ ಆದಿಲ್ ಶಾಹಿ ಮರಣ ನಂತರ ವಿಜಯನಗರ ಅರಸ ಅಚ್ಯುತರಾಯ ಮುದಗಲ್ ಕೋಟೆ ವಶಪಡಿಸಿಕೊಂಡನು. ಕ್ರಿ.ಶ. 1551 ರಲ್ಲಿ ರಾಮರಾಯ ಮತ್ತು ಅಹಮದ್ ನಗರದ ಬುರ್ಹಾನ್ನ ನಡುವೆ ಒಪ್ಪಂದ ಮಾಡಿಕೊಂಡು ಇಬ್ರಾಹಿಮ್ ಆದಿಲ್ ಶಾಹಿ ವಶದಲ್ಲಿದ್ದ ಮುದಗಲ್ಲ ಕೋಟೆಯನ್ನು ರಾಮರಾಯ ವಶಪಡಿಸಿಕೊಳ್ಳುತ್ತಾನೆ. ರಾಮರಾಯನ ಕುಟಿಲ ನೀತಿಯಿಂದ ಐದು ಶಾಹಿ ಮನೆತನಗಳು ಒಂದಾಗಿ ವಿಜಯನಗರ ವಿರುದ್ಧ ಯುದ್ದಕ್ಕೆ ಮುಂದಾದರು. ಕ್ರಿ.ಶ.1565 ರಲ್ಲಿ ಮುದಗಲ್ಲ ಕೋಟೆಗಾಗಿಯೇ ಕಾಳಿಕೋಟೆಯುದ್ದ ನಡೆಯಿತು. ಇದರಲ್ಲಿ ವಿಜಯನಗರ ಸೈನ್ಯ ಸೋಲನ್ನು ಕಂಡಿತು. ಮುದಗಲ್ ವಿಜಯಪುರ ಆದಿಲ್ ಶಾಹಿಗಳ ವಶವಾಯಿತು. ಕ್ರಿ.ಶ.1686 ರಲ್ಲಿ ಮೊಘರ ಔರಂಗಜೇಬನ ದಾಳಿಗೆ ಆದಿಲ್ ಶಾಹಿ ಸಾಮ್ರಾಜ್ಯ ಅವನತಿ ಕಂಡಿತು. ಮುದಗಲ್ಲ ಮೊಘಲರ ವಶವಾಯಿತು. ಮೊಘಲರ ಔರಂಗಜೇಬನ ಅಧಿಕಾರಿ ಕೋಟೆ ಅಭಿವೃದ್ಧಿಪಡಿಸಿದ. ಕ್ರಿ.ಶ. 1724 ರಿಂದ 1948 ರವರೆಗೆ ಮುದಗಲ್ ಹೈದರಾಬಾದ್ ನಿಜಾಮ ವಶವಾಯಿತು. ಮುದಗಲ್ಲನ್ನು ಅತಿ ಹೆಚ್ಚು ಕಾಲ ಆಡಳಿತ ಮಾಡಿದರು. ಕ್ರಿ.ಶ 1724 ರಿಂದ 1748 ರವರೆಗೆ ಅಸಫ್ಜಾಮಿ ಕ್ರಿ.ಶ. 1748 ರಿಂದ 1751 ರವರೆಗೆ ಮುಜಫರ್ಜಂಗ್, ಕ್ರಿ.ಶ. 1751 ರಿಂದ 1761 ರವರೆಗೆ ಸಲಾಬತ್ ಖಾನ್, 1761 ರಿಂದ 1803 ವರೆಗೆ ಅಲಿಖಾನ್, ಆಡಳಿತ ಮಾಡಿದ. ಕ್ರಿ.ಶ. 1803 ರಿಂದ 1829 ರವರೆಗೆ ಅಲಿಖಾನ, ಕ್ರಿ.ಶ. 1829 ರಿಂದ 1857 ವರೆಗೆ ನಾಸಿರುದ್ದೌಲ, ಅಫ್ಜಲಿದ್ದೌಲ, ಕ್ರಿ.ಶ. 1869 ರಿಂದ 1911 ರವರೆಗೆ ಮೀರ್ ಮಹಬೂಬ್ ಅಲಿಖಾನ್, ಕ್ರಿ.ಶ. 1911 ರಿಂದ 1949 ರವರೆಗೆ ಮೀರ್ ಉಸ್ಮಾನ್ ಅಲಿಖಾನ್ ಆಡಳಿತ ಮಾಡಿದರು. ಈ ರೀತಿ ವಿವಿಧ ಪ್ರಮುಖ ಅರಸ ಚರಿತ್ರೆ ಕಂಡು ಬರುತ್ತಿದೆ. ವಿಜಯನಗರದ ಅರಸರು ಹಾಗೂ ವಿಜಯಪುರ ಸುಲ್ತಾನರ ಪ್ರತಿಷ್ಠಿತ ನೆಲೆಯಾಗಿದ್ದ ಮುದಗಲ್ ಕೋಟೆ ದೇವಗಿರಿ ಯಾದವರ ದೊರೆ ಕೃಷ್ಣ ವರ್ಧಂತಿ ನಿಮಿತ್ತ ಕ್ರಿ.ಶ 1053 ರಲ್ಲಿ ಮುದ್ದಪ್ಪ ರೆಡ್ಡಿ ಎಂಬ ಜಮೀನದಾರ ಮುದಗಲ್ ಕೋಟೆ ನಿಮರ್ಿಸಿದ. ಇದು ಎರಡು ಸುತ್ತಿನ ಕೋಟೆಯಾಗಿದ್ದು, ಆಯತ ಆಕಾರದಲ್ಲಿ ಕಟ್ಟಲ್ಪಟ್ಟಿದೆ. ಅರ್ಧ ಎತ್ತರ ಪ್ರದೇಶದಲ್ಲಿ ಇನ್ನರ್ಧ ಸಮತಟ್ಟಾದ ಪ್ರದೇಶದಲ್ಲಿ ಬಲಿಷ್ಠವಾಗಿ ನಿಮರ್ಾಣಗೊಂಡಿದೆ. ಒಳ ಕೋಟೆ ವಿಜಯ ನಗರ ಅರಸರ ಕಾಲದಲ್ಲಿ ನಿಮರ್ಾಣಗೊಂಡು, ಆದಿಲ್ ಶಾಹಿಗಳ ಕಾಲದಲ್ಲಿ ದುರಸ್ತಿ ಕಂಡಿದೆ. ಹೊರ ಕೋಟೆ ಬಲಿಷ್ಠವಾಗಿದ್ದು, ಹಾಗೂ ಎತ್ತರದಲ್ಲಿ ಕಡಿಮೆಯಿದೆ. ಕೋಟೆಯ ಹೊರಮೈ ದಪ್ಪ ಕಲ್ಲು ಬಳಕೆ ಮಾಡಿಕೊಂಡು ನಿಮರ್ಿಸಲಾಗಿದೆ. ಹೊರ ಕೋಟೆ ವಿಶಾಲವಾಗಿದ್ದು, ಒಳ ಕೋಟೆಯ ಜತೆ ಸಾಗುತ್ತದೆ. ಒಳ ಮತ್ತು ಹೊರ ಕೋಟೆ ಮಧ್ಯದಲ್ಲಿ ಸ್ವಲ್ಪ ಅಂತರ ವಿದೆ. ಕೋಟೆ ಹೊರ ಮೈ ದಪ್ಪ ಕಲ್ಲುಗಳನ್ನು ಬಳಕೆ ಮಾಡಿದರೆ, ಒಳ ಮೈಯಲ್ಲಿ ಸಣ್ಣ ಕಲ್ಲುಗಳನ್ನು ಬಳಕೆ ಮಾಡಿ ಗಾರೆಯನ್ನು ಉಪಯೋಗಿಸಿ ಕೋಟೆ ನಿಮರ್ಿಸಿದ್ದಾರೆ. ಹೊರ ಕೋಟೆ ವಿಜಯಪುರದ 2 ನೇ ಇಬ್ರಾಹಿಂ ಆದಿಲ್ ಶಾಹನ ದಂಡನಾಯಕ ಮಲಿಕ್ ಮುರಾದ ಖಾನ್ ಕಟ್ಟಿಸಿದ್ದಾನೆ ಎಂಬ ಉಲ್ಲೇಖಗಳಿವೆ. ಕೋಟೆಗಳು ಹಿಂದೂ ಹಾಗೂ ಮುಸ್ಲಿಂ ಶೈಲಿಯಲ್ಲಿ ನಿರ್ಮಾಣಗೊಂಡಿವೆ. ಹೊರ ಕೋಟೆಗೆ ಹೊಂದಿಕೊಂಡು ಕೋಟೆಯ ಮುಂಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಕೋಟೆ ಸುತ್ತಲೂ ಸುಮಾರು 300 ಅಡಿ ಅಗಲ ಹಾಗೂ 10 ಅಡಿ ಆಳವಿರುವ ಕಂದಕವಿದೆ. ಇದರಲ್ಲಿ ವರ್ಷವಿಡೀ ನೀರು ಇರುತ್ತಿದ್ದು, ವೈರಿಗಳು ಕೋಟೆಯನ್ನು ಪ್ರವೇಶಿಸದಂತೆ ತಡೆಯಲು ನೀರಿನಲ್ಲಿ ಮಸಳೆಗಳನ್ನು ಬಿಡುತ್ತಿದ್ದರು ಎಂದು ತಿಳಿದುಬರುತ್ತಿದೆ. ಒಳಗೋಡೆಯಲ್ಲಿ 24 ಚೌಕಾಕಾರದ ವೃತ್ತಗಳು ಹಿಂದೂ ಶೈಲಿಯಲ್ಲಿದ್ದರೆ, 25 ವೃತ್ತಾಕಾರದ ಕೊತ್ತಲಗಳು ಮುಸ್ಲಿಂ ಶೈಲಿಯಲ್ಲಿವೆ. ತೋಪು ಹಾಗೂ ಬಂದೂಕು ಇಡಲು ಕೋಟೆಯ ಮೇಲೆ ಕಿಂಡಿಗಳನ್ನು ಬಿಡಲಾಗಿದೆ. ಸಧ್ಯ ದೊರೆಯುವ ತೋಪುಗಳು ಪೂವರ್ಾಭಿಮುಖವಾಗಿ ಇಡಲಾಗಿದೆ. 34 ವೃತ್ತಾಕಾರದ ಕೊತ್ತಲು ಹೊರ ಕೋಟೆಯಲ್ಲಿ ಕಂಡು ಬಂದಿದ್ದು, ಇವುಗಳ ಮೇಲ್ಭಾಗದಲ್ಲಿ ತೋಪು ಹಾಗೂ ಬಂದೂಕುಗಳನ್ನು ಇಡಲು ರಂಧ್ರಗಳಿವೆ ಹೊರ ಗೋಡೆಯ ಮೇಲೆ ಸಾಲಾಗಿರ ಅಲಂಕಾರಗೊಂಡ ನಿಟುಗಳಿವೆ. ಕೋಟೆಯ ಮೇಲೆ ಇರುವ ಅನೇಕ ಶಾಸನಗಳು ನಿಟು, ಬರುಜು ಹಾಗೂ ದಿಡ್ಡಿಗಳ ಹೆಸರನ್ನು ಸೂಚಿಸುತ್ತಿವೆ. ಇಲ್ಲಿನ ಕೊತ್ತಳಗಳು ಚೌಕಾಕಾರ ಮತ್ತು ವೃತ್ತಾಕಾರದಲ್ಲಿವೆ. ಕೊತ್ತಳ ತಳಭಾಗದಲ್ಲಿ ದಿಡ್ಡಿಗಳಿಗೆ ಪರದೆಗಳು ಕಟ್ಟಿದ್ದಾರೆ. ಕೋಟೆಯ ಹೊರಗೋಡೆಯಲ್ಲಿ ಕಿರಿದಾದ ದಿಡ್ಡಿ ಬಾಗಿಲುಗಳನ್ನು ಇವೆ. ಈ ದಿಡ್ಡಿ ಬಾಗಿಲು ಒಳ ಹಾಗೂ ಹೊರ ಕೋಟೆಗೆಗಳಿಗೆ ಸಂಪರ್ಕ ಮಾರ್ಗಗಳಾಗಿವೆ. ದಿಡ್ಡಿಯ ಸುತ್ತಲು ಅರ್ಧವೃತ್ತಾಕಾರದ ಗೋಡೆಯ ಪದರನ್ನು ನಿರ್ಮಾಸಿದ್ದಾರೆ. ಎರಡು ಸುತ್ತಿನ ಕೋಟೆ ಸುಂದರವಾಗಿ ಕಾಣಲು ನಿಟುಗಳಿಂದ ಅಲಂಕಾರಗೊಂಡಿದೆ. ಇವು ಆಕರ್ಷಕವಾಗಿವೆ. ಇವು ಕೇವಲ ಆಕರ್ಷಣೆಗೆ ಮಾಡದೇ ವೈರಿಗಳಿಂದ ಸೈನಿಕರ ರಕ್ಷಣೆಗಾಗಿ ಮಾಡಲಾಗಿದೆ. ನಿಟುಗಳ ಮೇಲ್ಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿರುವುದರಿಂದ ವೈರಿಯ ಕಣ್ಣಿಗೆ ಕಾಣದಂತೆ ಸೈನಿಕರನ್ನು ರಕ್ಷಣೆ ಮಾಡುತ್ತಿವೆ. ವಿಜಯ ನಗರ ಅರಸರು ಹಾಗೂ ವಿಜಯಪುರ ಆದಿಲ್ ಶಾಹಿಗಳ ನಿಟು ಒಂದೇ ಆಕೃತಿಯನ್ನು ಹೊಂದಿವೆ. ಬಂದೂಕು ಪ್ರಯೋಗಿಸಲು ಒಳರಂದ್ರಗಳನ್ನು ಬಿಡಲಾಗಿದೆ. ಇದು ಅಲ್ಲದೇ ಬಸವನ, ವಿನಾಯಕನ ಸೇರಿ ಅನೇಕ ದಿಡ್ಡಿ ಬಾಗಿಲುಗಳಿವೆ. ಕೋಟೆಯಲ್ಲಿ ಫತ್-ಇ-ಜಂಗ್, ರಣರಂಗ ಭೈರವ, ಬಸವನ, ಅಲಿ ಬುರುಜು, ಕೊಮಾರ ಬುರುಜು, ಹನಮಂತನ ಕೊತ್ತಳ ಸೇರಿದಂತೆ ಅನೇಕ ಹೆಸರಿನ ಬುರುಜುಗಳು ದೊರೆಯುತ್ತಿವೆ. ಬಸವನ, ವಿನಾಯಕನ ಸೇರಿ ಅನೇಕ ನಿಟುಗಳು ದೊರೆಯುತ್ತಿವೆ. ಕೋಟೆಯ ಕಟ್ಟಡಕ್ಕೆ ಒಂದೇ ಅಳತೆಯ ಕಲ್ಲುಗಳನ್ನು ಬಳಸಲಾಗಿದೆ. ಕೋಟೆ 1919 ಅಡಿ ಉದ್ದ ಹಾಗೂ 24 ಅಡಿ ಎತ್ತರ ವಿದೆ. 40 ಅಡಿ ಎತ್ತರ ಹಾಗೂ 160 ಅಡಿ ಅಗಲವುಳ್ಳ 16 ಬುರುಜುಗಳಿವೆ. ಎರಡು ದೊಡ್ಡದಾದ ದ್ವಾರಗಳಿವೆ. ಪೂರ್ವ ಭಾಗದಲ್ಲಿರುವ ಬಾಗಿಲಿಗೆ ಕಾಟೇ ದರವಾಜ (ಮುಳ್ಳು ಅಗಸಿ) ಎಂದು ಕರೆಯುತ್ತಾರೆ. ಬಾಗಿಲು ಮೇಲೆ ಮುಳ್ಳಿನ ಆಕಾರದ ಕಬ್ಬಿಣದ ಮೊಳೆಗಳನ್ನು ಬಡಿಯಲಾಗಿದೆ. ಆನೆಗಳು ಗುದ್ದಿದರೂ ಮುರಿಯದಷ್ಟು ಗಟ್ಟಿಯಾಗಿವೆ. ಇದು ಹಿಂದೂ ವಾಸ್ತು ಶೈಲಿ ಹೊಂದಿದೆ. ಹೊರ ಬಾಗಿಲು ಮುಂದೆ ಎರಡು ವೃತ್ತಾಕಾರದ ಬುರುಜುಗಳಿವೆ. ವೈರಿಗಳಿಗೆ ಗೊಂದಲ ಉಂಟುಮಾಡುವ ಸಲುವಾಗಿ ಪ್ರವೇಶ ಮಾರ್ಗ ಮರೆಮಾಡುವ ಸಲುವಾಗಿ ಉತ್ತರ ದಿಕ್ಕಿನ ಕೊತ್ತಳ ಮುಂದೆ ಚಾಚಿಕೊಂಡಿದೆ. ದೂರದಿಂದ ನೋಡುಗರಿಗೆ ಇಲ್ಲಿನ ಬಾಗಿಲು ಕಾಣುವದಿಲ್ಲ. ಬಾಗಿಲು ಪಕ್ಕದಲ್ಲಿ ವಿನಾಶಗೊಂಡ ದೊಡ್ಡ ಕಬ್ಬಿಣದ ಸರಪಳಿಗಳಿವೆ. ಈ ಬಾಗಿಲಿನ ಕಟ್ಟಿಗೆ ಕದಗಳ ಮೇಲೆ ಪ್ರಾಣಿಗಳು ಹಾಗೂ ದೇವತೆಗಳ ಉಬ್ಬು ಶಿಲ್ಪಗಳಿವೆ. ಈ ಬಾಗಿಲು ಲಿಂಗಪ್ಪನ್ನು ನಾಯಕ ಮಾಡಿಸಿರುವುದಾಗಿ ತಿಳಿದು ಬರುತ್ತದೆ. ಈ ಬಾಗಿಲು ದಾಟಿ ಒಳಗೆ ಬಂದರೆ ಬಲ ಭಾಗಕ್ಕೆ ತಿರುಗಿದರೆ ಸುಂದರವಾದ ಕೆತ್ತನೆಯಿಂದ ಕೂಡಿದ ಎರಡನೇ ಅಗಸಿ ಇದೆ. ಇದರ ಪಕ್ಕದಲ್ಲಿ ಇನ್ನೋಂದು ದಕ್ಷಿಣಾಭಿಮುಖವಾಗಿರುವ ಬಾಗಿಲು ಇದೆ. ಪ್ರವೇಶದ ಇಕ್ಕೆಲಗಳಲ್ಲಿ ವಿಜಯನಗರ ಅರಸ ಕಾಲದ ಉಬ್ಬು ಶಿಲ್ಪಗಳಿವೆ. 1482 ರಲ್ಲಿ ರಾಮರಾಯನ ಮಗನಾದ ಕೃಷ್ಣಪ್ಪರಾಜನ ಅಧಿಕಾರಿಯಾದ ವೆಂಗಳಪ್ಪ ನಾಯಕ ಬಾಗಿಲು ಮಾಡಿಸಿದ್ದಾನೆ ಎಂದು ಬಾಗಿಲು ಮೇಲೆನ ಶಾಸನ ತಿಳಿಸುತ್ತದೆ. ಕರ್ನಾಟಕದಲ್ಲಿ ದೊರೆಯುವ ಪುರಾತನ ಕದಗಳಲ್ಲಿ ಇದು ಒಂದಾಗಿದೆ. ಬಾಗಿಲಿನ ಕಂಬಗಳಲ್ಲಿ, ಹಾಗೂ ಮೊಗಸಾಲಿಯಲ್ಲಿ ಗೋವರ್ಧನಧಾರಿ ಕೃಷ್ಣ, ಗಣೇಶ, ವಿಷ್ಣು, ಆನೆ, ಮೀನು, ಸಿಂಹ ಸೇರಿ ಇನ್ನಿತರ ಉಬ್ಬು ಶಿಲ್ಪಗಳಿವೆ. ಕೋಟೆಯ ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ನಾಲ್ಕು ಅಗಸಿಗಳಿವೆ. ಪಶ್ಚಿಮಕ್ಕೆ ಇರುವ ಚೆನ್ನಪ್ಪನ ಅಗಸಿ (ಫತೇದರವಾಜ)ಯಿಂದ, ವಿಜಾಪುರದ ಅಲಿ ಆದಿಲ್ಶಹಾನು ತಾಳಿಕೋಟೆ ಯುದ್ಧದಲ್ಲಿ ಗೆದ್ದನಂತರ ಇದೇ ಭಾಗಲಿನಿಂದ ಕೋಟೆಯೊಳಗೆ ಪ್ರವೇಶಿಸಿದ. ಇದರಿಂದಾಗಿ ಈ ಬಾಗಿಲಿಗೆ ವಿಜಯದ ಬಾಗಿಲು (ಫತೇದರವಾಜ) ಎಂದು ಹೇಳಲಾಗುತ್ತಿದೆ. ಹೊರ ಕೋಟೆಯಲ್ಲಿರುವ ಬಾಗಿಲುಗಳು ಪೂರ್ವ ಹಾಗೂ ಪಶ್ಚಿಮಾಭಿಮುಖವಾಗಿವೆ. ಪೂರ್ವಾಭಿಮುಖವಾದ ಬಾಗಿಲು ಸರಳವಾಗಿದೆ. ಪಶ್ಚಿಮಾಭಿಮುಖವಾಗಿರುವ ಬಾಗಿಲು ಎರಡು ವೃತ್ತಾಕಾರದ ಕೊತ್ತಳಗಳು ಮರೆಮಾಡಿದೆ. ಕೋಟೆ ಒಳಗೆ ಪ್ರವೇಶ ಮಾಡಲು ಉತ್ತರ ದಕ್ಷಿಣ ಹಾಗೂ ಪಶ್ಚಿಮದಿಂದ ಸಾಗಬೇಕಾಗಿದೆ. ಈ ಬಾಗಿಲಿನ ಸಂಕೀರ್ಣದಲ್ಲಿ ಅನೇಕ ಶಾಸನಗಳು ದೊರೆಯುತ್ತವೆ. ಇಲ್ಲಿ ಮುಸ್ಲಿಂ ಸಂಸ್ಕೃತಿ-ಕಲೆ-ಶೌಯಲ್ಸಾಹಸದ ಸಂಕೇತಗಳಾದ ರೇಖಾಚಿತ್ರಗಳಿವೆ. ದರ್ವಾಜದ ಸಂಕೀರ್ಣದ ತೊಲೆಯ ಮಗ್ಗುಲಲ್ಲಿ ಮಂಡಿಯೂರಿದ ಆಂಜನೇಯನ ಉಬ್ಬುಶಿಲ್ಪಗಳಿವೆ. ಇಲ್ಲಿನ ಪಶ್ಚಿಮದ ಬಾಗಿಲು ಆಕರ್ಷಕವಾಗಿದೆ. ಕೋಟೆ ಮಧ್ಯ ಭಾಗದಲ್ಲೊಂದು ಬೆಟ್ಟವಿದೆ. ಬೆಟ್ಟದ ಮೇಲೆ ವಿಜಯಪುರ ಸುಲ್ತಾನ ಎರಡನೇ ಅಲಿ ಆದಿಲ್ಶಹಾನು ಕಲ್ಲಿನ ಬುರುಜು ಹಾಗೂ ಚಾರಮಿನಾರ ಆಕೃತಿಯುಳ್ಳ ಕಮಾನಿನ ಗಗನ ಮಹಲ್ ಕಟ್ಟಿಸಿದ್ದಾನೆ. ಈ ಸ್ಮಾರಕಗಳು ವಿನಾಶದಂಚಿನಲ್ಲಿವೆ. ಇದು ಅಲ್ಲದೆ ತುಪಾಕಿ ಕಟ್ಟಿ, ವೀಕ್ಷಣಾ ಗೋಪುರಗಳು, ತುಪ್ಪದ ಬಾವಿ, ಮುದ್ದಿನಗಂಟಿ, ಷುಷ್ಕರಣಿ, ಏಳು ಹನುಮಪ್ಪನ ಮೂತರ್ಿ ಹಾಗೂ ಕಲ್ಲುಗಂಬಗಳಿವೆ. ಬೆಟ್ಟದ ಕೆಳ ಭಾಗದಲ್ಲಿ ಬಾಲಾಜಿ, ಆದಿಕೇಶವ, ಬೆಣ್ಣೆ ಕೃಷ್ಣ, ಅಶ್ವಥ್ ನಾರಾಯಣ, ದಿದ್ದಿರಾಯ (ಹನುಮಪ್ಪ), ರಂಗನಾಥ, ರಾಮಲಿಂಗೇಶ್ವರ, ಎಮ್ಮೆ ಬಸವಣ್ಣ, ಕೋತಿ ಹನುಮಪ್ಪ ದೇವಾಲಯಗಳು, ರಾಘವೇಂದ್ರಸ್ವಾಮಿ ಮಠ, ಹಜರತ್ ಹುಸೇನಿ ಆಲಂ ದರ್ಗಾ, ಮುತ್ಯಾನ ದರ್ಗಾ, ಗಜಶಾಲೆ, ಗರಡಿಮನೆ, ಚಾರ್ ಮಹಲ್ ಬಾವಿ, ಬಾಗಲಾ ಹಾಳುಬಾವಿ, ಮುದ್ದಿನ ಮನೆಗಳಿವೆ. ಹೀಗಾಗಿ ಮುದಗಲ್ ಭವ್ಯವಾದ ಇತಿಹಾಸ ಮತ್ತು ಸಾಂಸ್ಕೃತಿಕಗಳ ಕುರುಹಾಗಿ ಇಂದಿಗೂ ಮೈತುಂಬಿ ನಿಂತಿದ್ದು, ರಾಯಚೂರು ಜಿಲ್ಲೆಯ ಚರಿತ್ರೆ ಮತ್ತು ಸಾಂಸ್ಕೃತಿಕ ಭವ್ಯ ಕುರುಹಾಗಿ ಇಂದಿಗೂ ಅಚ್ಚಳಿಯದೆ ಉಳಿದು ಬಂದಿದೆ. ಹೀಗೆ ಮುದಗಲ್ ಕೋಟೆ ಸುಂದರವಾಗಿ ಹಾಗೂ ಸುಭದ್ರವಾಗಿ ನಿರ್ಮಾಣಗೊಂಡಿದ್ದು, ಪ್ರಸಿದ್ಧವಾದ ಚಿತ್ರದುರ್ಗ ಕೋಟೆಗಿಂತಲೂ ವಿಶಿಷ್ಟವಾಗಿದೆ. ಆದರೂ ನಮ್ಮ ಇತಿಹಾಸಕಾರರು ಇದರೆಡೆಗೆ ಗಮನ ಹರಿಸದಿರುವುದು ವಿಷಾದನೀಯವೆಂದೇ ಹೇಳಬೇಕು. ಮುದಗಲ್ ಕೋಟೆ, ದರ್ಗಾ, ಮಸೀದಿ, ಬಾಲ್ ಈಸಾರ್, ಈದ್ಗಾ, ಮದ್ದಿನ ಮನೆ, ಫತೇದರವಾಜ, ಶಿಲಾ ಶಾಸನಗಳು ಸೇರಿದಂತೆ ಇನ್ನಿತರ ಮುಸ್ಲಿಂ ಸ್ಮಾರಕಗಳು ಇಸ್ಲಾಂ ಅರಸರ ಇತಿಹಾಸ ಹೇಳುತ್ತಿವೆ. ಪಶ್ಚಿಮಕ್ಕೆ ಇರುವ ಚೆನ್ನಪ್ಪನ ಅಗಸಿಯ ಮೂಲಕ ವಿಜಾಪುರದ ಅಲಿ ಅದಿಲ್ಶಹನು ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸಾಮ್ರಾಜ್ಯ ಸೋಲಿಸಿದ ನಂತರ ಮುದಗಲ್ ಪ್ರವೇಶ ಮಾಡುವ ವೇಳೆ ಇದೇ ಬಾಗಿಲಿನಿಂದ ಕೋಟೆಯೊಳಗೆ ಪ್ರವೇಶಿಸಿದ. ಇದರಿಂದಾಗಿ ವಿಜಯದ ಬಾಗಿಲು (ಫತೇದರವಾಜ) ಸ್ಮಾರಕ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಕೋಟೆಯ ಒಳ ಭಾಗದಲ್ಲಿ ವಿವಿಧ ಅರಸರಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಶಾಸನಗಳು ದೊರೆಯುತ್ತಿವೆ. ಹೊರ ಕೋಟೆ ವಿಜಯಪುರದ 2ನೇ ಇಬ್ರಾಹಿಂ ಆದಿಲ್ ಶಾಹನ ಅಧಿಕಾರಿ ಮಲ್ಲಿಕ್ ಮುರಾದ್ ನಿರ್ಮಾಸಿದ ಎಂದು ಕೆಲ ಉಲ್ಲೇಖಗಳಿಂದ ತಿಳಿಯುತ್ತದೆ. ಈ ಕೋಟೆಯಲ್ಲಿ ಮಲ್ಲಿಕ್ ಮುರಾದ್ಗೆ ಸಂಬಂಧಿಸಿದ 80 ಬಿರುದು ಶಾಸನಗಳು ದೊರೆಯುತ್ತಿವೆ. ಲೇಖಕರು ಡಾ.ಶರಣಪ್ಪ ಆನೆಹೊಸೂರು ಪ್ರಜಾವಾಣಿ ವರದಿಗಾರರು ಮುದಗಲ್. == ಮುದಗಲ್ ಚರಿತ್ರೆ == ಡಾ.ಶರಣಪ್ಪ ಆನೆಹೊಸೂರು ಪ್ರಜಾವಾಣಿ ವರದಿಗಾರ ಮುದಗಲ್. ರಾಯಚೂರು ಜಿಲ್ಲೆ ಕೋಟೆ-ಕೊತ್ತಲುಗಳ ನಾಡು. ಲಿಂಗಸಗೂರು ತಾಲ್ಲೂಕಿನಲ್ಲಿ ಮುದಗಲ್, ಜಲದುರ್ಗ, ಗುಡಗುಂಟಿ, ಮೇಧಾವಿರಾಯನ, ಹೊನ್ನಳ್ಳಿ, ಆನೆಹೊಸೂರು ಕೋಟೆಗಳು ಸೇರಿವೆ. ಇವುಗಳಲ್ಲಿ ಜಲದುರ್ಗ ಮತ್ತು ಮುದಗಲ್ ಕೋಟೆಗಳಿಗೆ ಐತಿಹಾಸಿಕ ಮಹತ್ವವಿದೆ. ಮುದಗಲ್ಗೆ ಐತಿಹಾಸಿಕ ಮಹತ್ವ ಬಂದಿರುವುದು ಕೇವಲ ಈ ಕೋಟೆಯಿಂದಲ್ಲ. ಕ್ರಿ.ಶ 3ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಗ್ರೀಕ್ ಪ್ರವಾಸಿ ಟೆಲಾಮಿಯ ಪ್ರವಾಸ ಕಥನದಿಂದ ಹಾಗೂ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ನಿರ್ಮಿತವಾದ ಚರ್ಚನಿಂದಾಗಿ ಮುದಗಲ್ ಪ್ರಸಿದ್ಧಿ ಪಡೆದಿದೆ. ಮುದಗಲ್ ರಾಯಚೂರು ಜಿಲ್ಲೆಯಿಂದ ಪಶ್ಚಿಮಕ್ಕೆ 116 ಕಿ.ಮೀ. ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ 18 ಕಿ.ಮೀ ಅಂತರದಲ್ಲಿದೆ. ಗ್ರೀಕ್ ಪ್ರವಾಸಿ ಟಾಲೆಮಿಯ ಎ ಗೈಡ್ ಟು ಜಿಯಾಗ್ರಫಿ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದಂತೆ ಮುದಗಲ್ ಕ್ರಿ.ಪೂ. 150ರಲ್ಲಿ ಅಸ್ತಿತ್ವದಲ್ಲಿತ್ತು ಎಂದು ತಿಳಿದು ಬರುತ್ತಿದೆ. ಜಿಲ್ಲೆಯ ಕೋಟೆಗಳಲ್ಲಿ ಮುದಗಲ್ ಕೋಟೆ ತನ್ನದೆಯಾದ ಇತಿಹಾಸ ಹೊಂದಿದೆ. ಮೌರ್ಯರು, ಕಲ್ಯಾಣ ಚಾಲುಕ್ಯರು, ದೇವಗಿರಿ ಯಾದವರು, ಕದಂಬ, ಕುಮ್ಮಟ ದುರ್ಗಾದ ನಾಯಕರು, ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್ಶಾಹಿಗಳು, ಮೊಘಲರು ಹಾಗೂ ನಿಜಾಮರು ಸೇರಿ ಇನ್ನಿತರ ಅರಸರ ಆಡಳಿತದಲ್ಲಿದ್ದ ಈ ಕೋಟೆ ಸಾವಿರಾರು ವರ್ಷಗಳ ಹಿಂದೆ ಹುಟ್ಟಿದೆ. ಈ ಕೋಟೆಗಾಗಿ ಹದಿನಾರನೇ ಶತಮಾನದವರೆಗೆ 11 ಯುದ್ಧಗಳಿಂದ ತಲ್ಲಣಿಸುತ್ತ, ರಕ್ತದಲ್ಲೇ ತೇಲುತ್ತಾ ಅಭದ್ರತೆಯ ಆತಂಕದಲ್ಲಿ ಬಳಲಿತ್ತು. ಸಮುದ್ರ ಮಟ್ಟಕ್ಕಿಂತ 1311 ಅಡಿ ಎತ್ತರ ಪ್ರದೇಶದಲ್ಲಿದ್ದು, 13381-25 ಹೆಕ್ಟರ್ ಭೂ ಪ್ರದೇಶ ಹೊಂದಿದೆ. ಇಲ್ಲಿ ಬಂಡೆಗಲ್ಲಿನ, ಬಯಲು ಭೂಮಿ ಹಾಗೂ ಕಪ್ಪು ಮಣ್ಣಿನಿಂದ ಕೂಡಿದ ಒಣಹವೆ ಪ್ರದೇಶವಾಗಿದೆ. 160 120 ಉತ್ತರ ಅಕ್ಷಾಂಶ ಮತ್ತು 770 210 ಪೂರ್ವ ರೇಖಾಂಶಗಳವರೆಗೆ ವಿಸ್ತರಿಸಿದೆ., ಮುದಗಲ್ ನಮಗೆ 2000 ವರ್ಷಗಳ ಇತಿಹಾಸವನ್ನು ಬಿಚ್ಚಿಡುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲಿನ ಶಾಸನಗಳು, ಮಸೀದಿ-ಮಂದಿರಗಳು, ಕೋಟೆ ಕೊತ್ತಲುಗಳು, ಇನ್ನಿತರ ಸ್ಮಾರಕಗಳು ಇಲ್ಲಿನ ಚರಿತ್ರೆ ಅರಿಯಲು ಆಕರಗಳಾಗಿವೆ. ಮುದಗಲ್ಲ ಮೌರ್ಯರ ಅರಸ ಅಶೋಕನ ಆಡಳಿತಕ್ಕೆ ಒಳಪಟ್ಟಿತು. ಅಶೋಕ ತನ್ನ ಆಡಳಿತ ಜತೆಗೆ ಬೌದ್ಧಧರ್ಮವನ್ನು ಪ್ರಚಾರ ಮಾಡಿದ. ಕೋಟೆಯ ಒಳ ಭಾಗದಲ್ಲಿರುವ ಬಾಲಹಿಜಾರದ ಸಮೀಪದ ಕ್ರಿ.ಶ.1048 ತ್ರೈಲೋಕ್ಯಮಲ್ಲನ ತೃಟಿತಗೊಂಡ ಶಾಸನ, ಕ್ರಿ.ಶ.1046 ರ ಒಂದನೇ ಸೋಮಶ್ವರನ ಕಿಲಾರಹಟ್ಟಿ ಶಾಸನ ಸೇರಿ ಇನ್ನೂ ಹಲವಾರ ಶಾಸನಗಳು ಮುದಗಲ್ಲನಲ್ಲಿ ನಡೆಸಿದ ಕಲ್ಯಾಣ ಚಾಲುಕ್ಯರ ಆಡಳಿತದ ಬಗ್ಗೆ ತಿಳಿಸುತ್ತದೆ. ಚಾಲುಕ್ಯರ ಆಡಳಿತಾವಧಿಯಲ್ಲಿ ಅನೇಕ ಲೋಕೋಪಯೋಗಿ ಕಾರ್ಯಗಳು ನಡೆದಿವೆ. ದೇವಗಿರಿ ಯಾದವರ ವಂಶದ ಭಿಲ್ಲಮನ ಆಡಳಿತದಲ್ಲಿ ಮಹಾಮಂಡಳೇಶ್ವರನಾದ ಕದಂಬ ಕುಲದ ಬಿಜ್ಜರಸನು ಎಡದೊರೆ ನಾಡಿನ ಕರಡಿಕಲ್ಲು-300 ಮುದಗಲ್ಲನ್ನು ರಾಜಧಾನಿಯನ್ನಾಗಿ ಆಳುತ್ತಿದ್ದ ಎಂಬ ಉಲ್ಲೇಖಗಳಿವೆ. ಕರಡಿಕಲ್ಲು ಕದಂಬರ ರಾಜಧಾನಿಯಾದ ಮುದಗಲ್ಲ ಇಂದ್ರನ ಅಮರಾವತಿಗಿಂತಲೂ ಮಿಗಿಲಾಗಿತ್ತೆಂದು ಶಾಸನದಲ್ಲಿ ತಿಳಿಸುತ್ತದೆ. ಮುದಗಲ್ಲನ ಕ್ರಿ.ಶ. 1215 ರ ಶಾಸನ ದೇವಗಿರಿ ಯಾದವ ಅರಸ ಸಿಂಹಣನನ್ನು ಮತ್ತು ಅವನ ದಂಡನಾಯಕ ದಾಮೋದರನ ಕುರಿತು ಹೇಳುತ್ತಿದೆ. ಮುದಗಲ್ಲನ್ನು ಬಹುಮನಿ ಸುಲ್ತಾನರು, ವಿಜಯನಗರ ಅರಸರು, ವಿಜಯಪುರ ಆದಿಲ್ಶಾಹಿಗಳಿಗೆ ಪ್ರತಿಷ್ಠೆ ಕೇಂದ್ರವಾಗಿತ್ತು. ಗಡಿಭಾಗದ ಆಯಕಟ್ಟಿನ ಸೂಕ್ಷ್ಮ ಕೇಂದ್ರವಾಗಿದ್ದ ಮುದಗಲ್ ಆರ್ಥಿಕ-ವಾಣಿಜ್ಯ ವ್ಯಾಪಾರ ಕೇಂದ್ರವಾಗಿತ್ತು. ಮುದಗಲ್ಲನಾಡು ವಿಜಯನಗರ ಅರಸರ ಏಳು-ಬೀಳಿನ ಪ್ರದೇಶವಾಗಿ, ಮುಸ್ಲಿಂರಿಗೆ ಕದನ ಕಣವಾಗಿ ಮಾರ್ಪಟಿದ್ದ ಮುದಗಲ್ಲಗೆ ಮುದಗಲ್ಲನಾಡು, ಮುದಗಲ್ಲಸೀಮೆ ಎಂದು ಕರೆಯಲಾಗಿದೆ. ವಿಜಯನಗರ ಅರಸರ ರಾಯಚೂರು ಜಿಲ್ಲೆಯಲ್ಲಿ ಮೊದಲು ಉಲ್ಲೇಖತವಾದ ಶಾಸನ ಮುದಗಲ್ಲದಲ್ಲಿದೆ. ಇದು ಕ್ರಿ.ಶ.1436 ರಲ್ಲಿ ರಚಿಸಿದ್ದು, ವಿಜಯನಗರ ಅರಸರ ವೀರಪ್ರತಾಪ ದೇವರಾಯನ ಆಡಳಿತ ಬಗ್ಗೆ ತಿಳಿಸುತ್ತಿದೆ. ಕ್ರಿ.ಶ. 1443 ರಲ್ಲಿ ಅಲ್ಲಾವುದ್ದೀನ್ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಮುದಗಲ್ಲನ್ನು ವಶಪಡಿಸಿಕೊಳ್ಳುತ್ತಾನೆ. ಕ್ರಿ.ಶ.1366 ರ ವೇಳೆಗೆ ಬಹುಮನಿ ಸುಲ್ತಾನರ ಅಧೀನದಲ್ಲಿದ್ದ ಮುದಗಲ್ಲುನ್ನು ವಿಜಯನಗರದ ಅರಸ ಬುಕ್ಕರಾಯ ವಶಪಡಿಸಿಕೊಳ್ಳುತ್ತಾನೆ. ಮುದಗಲ್ ಕೋಟೆಗಾಗಿ ಕ್ರಿ.ಶ.1375-76 ರಲ್ಲಿ ವಿಜಯನಗರ ಅರಸರ ಒಂದನೇ ಬುಕ್ಕನಿಗೂ ಮತ್ತು ಬಹುಮನಿ ಸುಲ್ತಾನ ಮುಜಾಹಿದ್ ನಡುವೆ ಯುದ್ದ ನಡೆಯಿತು. ಬುಕ್ಕನ ಅಧೀನದಲ್ಲಿದ್ದ ಮುದಗಲ್ಲ ಕೋಟೆ ವಶಪಡಿಸಿಕೊಳ್ಳಲು ಮುಜಾಹಿದ್ಗೆ ಸಾಧ್ಯವಾಗಲಿಲ್ಲ. ಬುಕ್ಕನ ಮರಣ ನಂತರ ಬಹುಮನಿ ಫಿರೋಜ ಮುದಗಲ್ಲ ವಶಪಡಿಸಿಕೊಂಡನು. ಕ್ರಿ.ಶ. 1406 ರಲ್ಲಿ ವಿಜಯನಗರ ಅರಸ ಒಂದನೇ ದೇವರಾಯ ಮುದಗಲ್ಲಗಾಗಿ ಕಾದಾಟ ಮುಂದುವರಿಸಿದನು. ಒಂದನೇ ದೇವರಾಯ ಮತ್ತು ಫಿರೋಜನಿಗೂ ಯುದ್ದ ನಡೆಯಿತು. ಫಿರೋಜನು ರಣರಂಗದಿಂದ ಪಲಾಯನಗೈದನು. ಒಂದನೇ ದೇವರಾಯ ಮರಣ ನಂತರ ಇವನ ಮಗ ವಿಜಯ ಅಧಿಕಾರಕ್ಕೆ ಬಂದನು. ಇವನು ಬಹುಮನಿಯವರ ಆಡಳಿತದಲ್ಲಿದ್ದ ಯಾದಗಿರಿ ವಶಪಡಿಸಿಕೊಂಡನು. ಇದರಿಂದ ಭಯಗೊಂಡು ಬಹುಮನಿ ಸಾಮ್ರಾಜ್ಯ ಬೀದರಿಗೆ ರಾಜಧಾನಿಯಾಗಿ ವಗರ್ಾಹಿಸಿದರು. ನಂತರ ಎರಡನೇ ದೇವರಾಯ ಅಧಿಕಾರಕ್ಕೆ ಬಂದನು. ಈತನ ಆಡಳಿತಾವಧಿಯಲ್ಲಿ ಮುದಗಲ್ಲನಲ್ಲಿ ಅನೇಕ ಲೋಕೋಪಯೋಗಿ ಕಾರ್ಯಗಳು ನಡೆದಿವೆ. ಮುದಗಲ್ಲ ಕೋಟೆಗಾಗಿ ದೇವರಾಯನಿಗೂ ಮತ್ತು ಅಲ್ಲಾವುದ್ಧೀನ ನಡುವೆ ಕ್ರಿ.ಶ. 1443 - 44 ಅವಧಿಯಲ್ಲಿ ಎರಡು ಬಾರಿ ಯುದ್ಧ ನಡೆಯುತ್ತದೆ. ಮುದಗಲ್ಲನ್ನು ವಶಪಡಿಸಿಕೊಳ್ಳಬೇಕು ಎನ್ನುವ ಪ್ರಯತ್ನಗಳೆಲ್ಲವೂ ವಿಫಲಗೊಂಡವು. ಮುದಗಲ್ಲ ಕ್ರಿ.ಶ.1493 ರಲ್ಲಿ ವಿಜಯಪುರ ಯೂಸುಫ್ ಆದಿಲ್ ಖಾನನ ವಶವಾಯಿತು. ಮತ್ತೆ ಯೂಸುಫ್ ಆದಿಲ್ ಶಾಹಿ ಆಡಳಿತದಲ್ಲಿದ್ದ ಮುದಗಲ್ಲನ್ನು ತುಳುವಂಶದ ವೀರನರಸಿಂಹ ವಶಪಡಿಸಿಕೊಳ್ಳುತ್ತಾನೆ. ಕ್ರಿ.ಶ 1520 ರಲ್ಲಿ ಮುದಗಲ್ ಕೋಟೆಗಾಗಿ ವಿಜಯನಗರ ಅರಸ ಕೃಷ್ಣದೇವರಾಯ ಮತ್ತು ವಿಜಯಪುರ ಇಸ್ಮಾಯಿಲ್ ಆದಿಲ್ ಶಾಹಿ ನಡುವೆ ಭೀಕರ ಯುದ್ಧ ನಡೆಯುತ್ತದೆ. ಆಗ ಮುದಗಲ್ ಕೋಟೆ ಕೃಷ್ಣದೇವರಾಯನ ವಶಕ್ಕೆ ಬಂದಿತು. ಕ್ರಿ.ಶ. 1529 ರಲ್ಲಿ ಕೃಷ್ಣದೇವರಾಯ ಮರಣ ಹೊಂದಿದ ನಂತರ ವಿಜಯ ನಗರ ಅರಸರ ಆಂತರಿಕ ಕಚ್ಚಾಟದಲ್ಲಿ ವಿಜಯಪುರ ಇಸ್ಮಾಯಿಲ್ ಆದಿಲ್ ಶಾಹಿ ಕ್ರಿ.ಶ 1530 ರಲ್ಲಿ ಎರಡು ಬಾರಿ ದಾಳಿ ಮಾಡಿ ಮುದಗಲ್ಲ ಕೋಟೆ ವಶಪಡಿಸಿಕೊಂಡನು. ವಿಜಯಪುರ ಇಸ್ಮಾಲ್ ಆದಿಲ್ ಶಾಹಿ ಮರಣ ನಂತರ ವಿಜಯನಗರ ಅರಸ ಅಚ್ಯುತರಾಯ ಮುದಗಲ್ ಕೋಟೆ ವಶಪಡಿಸಿಕೊಂಡನು. ಕ್ರಿ.ಶ. 1551 ರಲ್ಲಿ ರಾಮರಾಯ ಮತ್ತು ಅಹಮದ್ ನಗರದ ಬುರ್ಹಾನ್ನ ನಡುವೆ ಒಪ್ಪಂದ ಮಾಡಿಕೊಂಡು ಇಬ್ರಾಹಿಮ್ ಆದಿಲ್ ಶಾಹಿ ವಶದಲ್ಲಿದ್ದ ಮುದಗಲ್ಲ ಕೋಟೆಯನ್ನು ರಾಮರಾಯ ವಶಪಡಿಸಿಕೊಳ್ಳುತ್ತಾನೆ. ರಾಮರಾಯನ ಕುಟಿಲ ನೀತಿಯಿಂದ ಐದು ಶಾಹಿ ಮನೆತನಗಳು ಒಂದಾಗಿ ವಿಜಯನಗರ ವಿರುದ್ಧ ಯುದ್ದಕ್ಕೆ ಮುಂದಾದರು. ಕ್ರಿ.ಶ.1565 ರಲ್ಲಿ ಮುದಗಲ್ಲ ಕೋಟೆಗಾಗಿಯೇ ಕಾಳಿಕೋಟೆಯುದ್ದ ನಡೆಯಿತು. ಇದರಲ್ಲಿ ವಿಜಯನಗರ ಸೈನ್ಯ ಸೋಲನ್ನು ಕಂಡಿತು. ಮುದಗಲ್ ವಿಜಯಪುರ ಆದಿಲ್ ಶಾಹಿಗಳ ವಶವಾಯಿತು. ಕ್ರಿ.ಶ.1686 ರಲ್ಲಿ ಮೊಘರ ಔರಂಗಜೇಬನ ದಾಳಿಗೆ ಆದಿಲ್ ಶಾಹಿ ಸಾಮ್ರಾಜ್ಯ ಅವನತಿ ಕಂಡಿತು. ಮುದಗಲ್ಲ ಮೊಘಲರ ವಶವಾಯಿತು. ಮೊಘಲರ ಔರಂಗಜೇಬನ ಅಧಿಕಾರಿ ಕೋಟೆ ಅಭಿವೃದ್ಧಿಪಡಿಸಿದ. ಕ್ರಿ.ಶ. 1724 ರಿಂದ 1948 ರವರೆಗೆ ಮುದಗಲ್ ಹೈದರಾಬಾದ್ ನಿಜಾಮ ವಶವಾಯಿತು. ಮುದಗಲ್ಲನ್ನು ಅತಿ ಹೆಚ್ಚು ಕಾಲ ಆಡಳಿತ ಮಾಡಿದರು. ಕ್ರಿ.ಶ 1724 ರಿಂದ 1748 ರವರೆಗೆ ಅಸಫ್ಜಾಮಿ ಕ್ರಿ.ಶ. 1748 ರಿಂದ 1751 ರವರೆಗೆ ಮುಜಫರ್ಜಂಗ್, ಕ್ರಿ.ಶ. 1751 ರಿಂದ 1761 ರವರೆಗೆ ಸಲಾಬತ್ ಖಾನ್, 1761 ರಿಂದ 1803 ವರೆಗೆ ಅಲಿಖಾನ್, ಆಡಳಿತ ಮಾಡಿದ. ಕ್ರಿ.ಶ. 1803 ರಿಂದ 1829 ರವರೆಗೆ ಅಲಿಖಾನ, ಕ್ರಿ.ಶ. 1829 ರಿಂದ 1857 ವರೆಗೆ ನಾಸಿರುದ್ದೌಲ, ಅಫ್ಜಲಿದ್ದೌಲ, ಕ್ರಿ.ಶ. 1869 ರಿಂದ 1911 ರವರೆಗೆ ಮೀರ್ ಮಹಬೂಬ್ ಅಲಿಖಾನ್, ಕ್ರಿ.ಶ. 1911 ರಿಂದ 1949 ರವರೆಗೆ ಮೀರ್ ಉಸ್ಮಾನ್ ಅಲಿಖಾನ್ ಆಡಳಿತ ಮಾಡಿದರು. ಈ ರೀತಿ ವಿವಿಧ ಪ್ರಮುಖ ಅರಸ ಚರಿತ್ರೆ ಕಂಡು ಬರುತ್ತಿದೆ. ವಿಜಯನಗರದ ಅರಸರು ಹಾಗೂ ವಿಜಯಪುರ ಸುಲ್ತಾನರ ಪ್ರತಿಷ್ಠಿತ ನೆಲೆಯಾಗಿದ್ದ ಮುದಗಲ್ ಕೋಟೆ ದೇವಗಿರಿ ಯಾದವರ ದೊರೆ ಕೃಷ್ಣ ವರ್ಧಂತಿ ನಿಮಿತ್ತ ಕ್ರಿ.ಶ 1053 ರಲ್ಲಿ ಮುದ್ದಪ್ಪ ರೆಡ್ಡಿ ಎಂಬ ಜಮೀನದಾರ ಮುದಗಲ್ ಕೋಟೆ ನಿಮರ್ಿಸಿದ. ಇದು ಎರಡು ಸುತ್ತಿನ ಕೋಟೆಯಾಗಿದ್ದು, ಆಯತ ಆಕಾರದಲ್ಲಿ ಕಟ್ಟಲ್ಪಟ್ಟಿದೆ. ಅರ್ಧ ಎತ್ತರ ಪ್ರದೇಶದಲ್ಲಿ ಇನ್ನರ್ಧ ಸಮತಟ್ಟಾದ ಪ್ರದೇಶದಲ್ಲಿ ಬಲಿಷ್ಠವಾಗಿ ನಿಮರ್ಾಣಗೊಂಡಿದೆ. ಒಳ ಕೋಟೆ ವಿಜಯ ನಗರ ಅರಸರ ಕಾಲದಲ್ಲಿ ನಿಮರ್ಾಣಗೊಂಡು, ಆದಿಲ್ ಶಾಹಿಗಳ ಕಾಲದಲ್ಲಿ ದುರಸ್ತಿ ಕಂಡಿದೆ. ಹೊರ ಕೋಟೆ ಬಲಿಷ್ಠವಾಗಿದ್ದು, ಹಾಗೂ ಎತ್ತರದಲ್ಲಿ ಕಡಿಮೆಯಿದೆ. ಕೋಟೆಯ ಹೊರಮೈ ದಪ್ಪ ಕಲ್ಲು ಬಳಕೆ ಮಾಡಿಕೊಂಡು ನಿಮರ್ಿಸಲಾಗಿದೆ. ಹೊರ ಕೋಟೆ ವಿಶಾಲವಾಗಿದ್ದು, ಒಳ ಕೋಟೆಯ ಜತೆ ಸಾಗುತ್ತದೆ. ಒಳ ಮತ್ತು ಹೊರ ಕೋಟೆ ಮಧ್ಯದಲ್ಲಿ ಸ್ವಲ್ಪ ಅಂತರ ವಿದೆ. ಕೋಟೆ ಹೊರ ಮೈ ದಪ್ಪ ಕಲ್ಲುಗಳನ್ನು ಬಳಕೆ ಮಾಡಿದರೆ, ಒಳ ಮೈಯಲ್ಲಿ ಸಣ್ಣ ಕಲ್ಲುಗಳನ್ನು ಬಳಕೆ ಮಾಡಿ ಗಾರೆಯನ್ನು ಉಪಯೋಗಿಸಿ ಕೋಟೆ ನಿಮರ್ಿಸಿದ್ದಾರೆ. ಹೊರ ಕೋಟೆ ವಿಜಯಪುರದ 2 ನೇ ಇಬ್ರಾಹಿಂ ಆದಿಲ್ ಶಾಹನ ದಂಡನಾಯಕ ಮಲಿಕ್ ಮುರಾದ ಖಾನ್ ಕಟ್ಟಿಸಿದ್ದಾನೆ ಎಂಬ ಉಲ್ಲೇಖಗಳಿವೆ. ಕೋಟೆಗಳು ಹಿಂದೂ ಹಾಗೂ ಮುಸ್ಲಿಂ ಶೈಲಿಯಲ್ಲಿ ನಿರ್ಮಾಣಗೊಂಡಿವೆ. ಹೊರ ಕೋಟೆಗೆ ಹೊಂದಿಕೊಂಡು ಕೋಟೆಯ ಮುಂಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಕೋಟೆ ಸುತ್ತಲೂ ಸುಮಾರು 300 ಅಡಿ ಅಗಲ ಹಾಗೂ 10 ಅಡಿ ಆಳವಿರುವ ಕಂದಕವಿದೆ. ಇದರಲ್ಲಿ ವರ್ಷವಿಡೀ ನೀರು ಇರುತ್ತಿದ್ದು, ವೈರಿಗಳು ಕೋಟೆಯನ್ನು ಪ್ರವೇಶಿಸದಂತೆ ತಡೆಯಲು ನೀರಿನಲ್ಲಿ ಮಸಳೆಗಳನ್ನು ಬಿಡುತ್ತಿದ್ದರು ಎಂದು ತಿಳಿದುಬರುತ್ತಿದೆ. ಒಳಗೋಡೆಯಲ್ಲಿ 24 ಚೌಕಾಕಾರದ ವೃತ್ತಗಳು ಹಿಂದೂ ಶೈಲಿಯಲ್ಲಿದ್ದರೆ, 25 ವೃತ್ತಾಕಾರದ ಕೊತ್ತಲಗಳು ಮುಸ್ಲಿಂ ಶೈಲಿಯಲ್ಲಿವೆ. ತೋಪು ಹಾಗೂ ಬಂದೂಕು ಇಡಲು ಕೋಟೆಯ ಮೇಲೆ ಕಿಂಡಿಗಳನ್ನು ಬಿಡಲಾಗಿದೆ. ಸಧ್ಯ ದೊರೆಯುವ ತೋಪುಗಳು ಪೂವರ್ಾಭಿಮುಖವಾಗಿ ಇಡಲಾಗಿದೆ. 34 ವೃತ್ತಾಕಾರದ ಕೊತ್ತಲು ಹೊರ ಕೋಟೆಯಲ್ಲಿ ಕಂಡು ಬಂದಿದ್ದು, ಇವುಗಳ ಮೇಲ್ಭಾಗದಲ್ಲಿ ತೋಪು ಹಾಗೂ ಬಂದೂಕುಗಳನ್ನು ಇಡಲು ರಂಧ್ರಗಳಿವೆ ಹೊರ ಗೋಡೆಯ ಮೇಲೆ ಸಾಲಾಗಿರ ಅಲಂಕಾರಗೊಂಡ ನಿಟುಗಳಿವೆ. ಕೋಟೆಯ ಮೇಲೆ ಇರುವ ಅನೇಕ ಶಾಸನಗಳು ನಿಟು, ಬರುಜು ಹಾಗೂ ದಿಡ್ಡಿಗಳ ಹೆಸರನ್ನು ಸೂಚಿಸುತ್ತಿವೆ. ಇಲ್ಲಿನ ಕೊತ್ತಳಗಳು ಚೌಕಾಕಾರ ಮತ್ತು ವೃತ್ತಾಕಾರದಲ್ಲಿವೆ. ಕೊತ್ತಳ ತಳಭಾಗದಲ್ಲಿ ದಿಡ್ಡಿಗಳಿಗೆ ಪರದೆಗಳು ಕಟ್ಟಿದ್ದಾರೆ. ಕೋಟೆಯ ಹೊರಗೋಡೆಯಲ್ಲಿ ಕಿರಿದಾದ ದಿಡ್ಡಿ ಬಾಗಿಲುಗಳನ್ನು ಇವೆ. ಈ ದಿಡ್ಡಿ ಬಾಗಿಲು ಒಳ ಹಾಗೂ ಹೊರ ಕೋಟೆಗೆಗಳಿಗೆ ಸಂಪರ್ಕ ಮಾರ್ಗಗಳಾಗಿವೆ. ದಿಡ್ಡಿಯ ಸುತ್ತಲು ಅರ್ಧವೃತ್ತಾಕಾರದ ಗೋಡೆಯ ಪದರನ್ನು ನಿರ್ಮಾಸಿದ್ದಾರೆ. ಎರಡು ಸುತ್ತಿನ ಕೋಟೆ ಸುಂದರವಾಗಿ ಕಾಣಲು ನಿಟುಗಳಿಂದ ಅಲಂಕಾರಗೊಂಡಿದೆ. ಇವು ಆಕರ್ಷಕವಾಗಿವೆ. ಇವು ಕೇವಲ ಆಕರ್ಷಣೆಗೆ ಮಾಡದೇ ವೈರಿಗಳಿಂದ ಸೈನಿಕರ ರಕ್ಷಣೆಗಾಗಿ ಮಾಡಲಾಗಿದೆ. ನಿಟುಗಳ ಮೇಲ್ಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿರುವುದರಿಂದ ವೈರಿಯ ಕಣ್ಣಿಗೆ ಕಾಣದಂತೆ ಸೈನಿಕರನ್ನು ರಕ್ಷಣೆ ಮಾಡುತ್ತಿವೆ. ವಿಜಯ ನಗರ ಅರಸರು ಹಾಗೂ ವಿಜಯಪುರ ಆದಿಲ್ ಶಾಹಿಗಳ ನಿಟು ಒಂದೇ ಆಕೃತಿಯನ್ನು ಹೊಂದಿವೆ. ಬಂದೂಕು ಪ್ರಯೋಗಿಸಲು ಒಳರಂದ್ರಗಳನ್ನು ಬಿಡಲಾಗಿದೆ. ಇದು ಅಲ್ಲದೇ ಬಸವನ, ವಿನಾಯಕನ ಸೇರಿ ಅನೇಕ ದಿಡ್ಡಿ ಬಾಗಿಲುಗಳಿವೆ. ಕೋಟೆಯಲ್ಲಿ ಫತ್-ಇ-ಜಂಗ್, ರಣರಂಗ ಭೈರವ, ಬಸವನ, ಅಲಿ ಬುರುಜು, ಕೊಮಾರ ಬುರುಜು, ಹನಮಂತನ ಕೊತ್ತಳ ಸೇರಿದಂತೆ ಅನೇಕ ಹೆಸರಿನ ಬುರುಜುಗಳು ದೊರೆಯುತ್ತಿವೆ. ಬಸವನ, ವಿನಾಯಕನ ಸೇರಿ ಅನೇಕ ನಿಟುಗಳು ದೊರೆಯುತ್ತಿವೆ. ಕೋಟೆಯ ಕಟ್ಟಡಕ್ಕೆ ಒಂದೇ ಅಳತೆಯ ಕಲ್ಲುಗಳನ್ನು ಬಳಸಲಾಗಿದೆ. ಕೋಟೆ 1919 ಅಡಿ ಉದ್ದ ಹಾಗೂ 24 ಅಡಿ ಎತ್ತರ ವಿದೆ. 40 ಅಡಿ ಎತ್ತರ ಹಾಗೂ 160 ಅಡಿ ಅಗಲವುಳ್ಳ 16 ಬುರುಜುಗಳಿವೆ. ಎರಡು ದೊಡ್ಡದಾದ ದ್ವಾರಗಳಿವೆ. ಪೂರ್ವ ಭಾಗದಲ್ಲಿರುವ ಬಾಗಿಲಿಗೆ ಕಾಟೇ ದರವಾಜ (ಮುಳ್ಳು ಅಗಸಿ) ಎಂದು ಕರೆಯುತ್ತಾರೆ. ಬಾಗಿಲು ಮೇಲೆ ಮುಳ್ಳಿನ ಆಕಾರದ ಕಬ್ಬಿಣದ ಮೊಳೆಗಳನ್ನು ಬಡಿಯಲಾಗಿದೆ. ಆನೆಗಳು ಗುದ್ದಿದರೂ ಮುರಿಯದಷ್ಟು ಗಟ್ಟಿಯಾಗಿವೆ. ಇದು ಹಿಂದೂ ವಾಸ್ತು ಶೈಲಿ ಹೊಂದಿದೆ. ಹೊರ ಬಾಗಿಲು ಮುಂದೆ ಎರಡು ವೃತ್ತಾಕಾರದ ಬುರುಜುಗಳಿವೆ. ವೈರಿಗಳಿಗೆ ಗೊಂದಲ ಉಂಟುಮಾಡುವ ಸಲುವಾಗಿ ಪ್ರವೇಶ ಮಾರ್ಗ ಮರೆಮಾಡುವ ಸಲುವಾಗಿ ಉತ್ತರ ದಿಕ್ಕಿನ ಕೊತ್ತಳ ಮುಂದೆ ಚಾಚಿಕೊಂಡಿದೆ. ದೂರದಿಂದ ನೋಡುಗರಿಗೆ ಇಲ್ಲಿನ ಬಾಗಿಲು ಕಾಣುವದಿಲ್ಲ. ಬಾಗಿಲು ಪಕ್ಕದಲ್ಲಿ ವಿನಾಶಗೊಂಡ ದೊಡ್ಡ ಕಬ್ಬಿಣದ ಸರಪಳಿಗಳಿವೆ. ಈ ಬಾಗಿಲಿನ ಕಟ್ಟಿಗೆ ಕದಗಳ ಮೇಲೆ ಪ್ರಾಣಿಗಳು ಹಾಗೂ ದೇವತೆಗಳ ಉಬ್ಬು ಶಿಲ್ಪಗಳಿವೆ. ಈ ಬಾಗಿಲು ಲಿಂಗಪ್ಪನ್ನು ನಾಯಕ ಮಾಡಿಸಿರುವುದಾಗಿ ತಿಳಿದು ಬರುತ್ತದೆ. ಈ ಬಾಗಿಲು ದಾಟಿ ಒಳಗೆ ಬಂದರೆ ಬಲ ಭಾಗಕ್ಕೆ ತಿರುಗಿದರೆ ಸುಂದರವಾದ ಕೆತ್ತನೆಯಿಂದ ಕೂಡಿದ ಎರಡನೇ ಅಗಸಿ ಇದೆ. ಇದರ ಪಕ್ಕದಲ್ಲಿ ಇನ್ನೋಂದು ದಕ್ಷಿಣಾಭಿಮುಖವಾಗಿರುವ ಬಾಗಿಲು ಇದೆ. ಪ್ರವೇಶದ ಇಕ್ಕೆಲಗಳಲ್ಲಿ ವಿಜಯನಗರ ಅರಸ ಕಾಲದ ಉಬ್ಬು ಶಿಲ್ಪಗಳಿವೆ. 1482 ರಲ್ಲಿ ರಾಮರಾಯನ ಮಗನಾದ ಕೃಷ್ಣಪ್ಪರಾಜನ ಅಧಿಕಾರಿಯಾದ ವೆಂಗಳಪ್ಪ ನಾಯಕ ಬಾಗಿಲು ಮಾಡಿಸಿದ್ದಾನೆ ಎಂದು ಬಾಗಿಲು ಮೇಲೆನ ಶಾಸನ ತಿಳಿಸುತ್ತದೆ. ಕರ್ನಾಟಕದಲ್ಲಿ ದೊರೆಯುವ ಪುರಾತನ ಕದಗಳಲ್ಲಿ ಇದು ಒಂದಾಗಿದೆ. ಬಾಗಿಲಿನ ಕಂಬಗಳಲ್ಲಿ, ಹಾಗೂ ಮೊಗಸಾಲಿಯಲ್ಲಿ ಗೋವರ್ಧನಧಾರಿ ಕೃಷ್ಣ, ಗಣೇಶ, ವಿಷ್ಣು, ಆನೆ, ಮೀನು, ಸಿಂಹ ಸೇರಿ ಇನ್ನಿತರ ಉಬ್ಬು ಶಿಲ್ಪಗಳಿವೆ. ಕೋಟೆಯ ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ನಾಲ್ಕು ಅಗಸಿಗಳಿವೆ. ಪಶ್ಚಿಮಕ್ಕೆ ಇರುವ ಚೆನ್ನಪ್ಪನ ಅಗಸಿ (ಫತೇದರವಾಜ)ಯಿಂದ, ವಿಜಾಪುರದ ಅಲಿ ಆದಿಲ್ಶಹಾನು ತಾಳಿಕೋಟೆ ಯುದ್ಧದಲ್ಲಿ ಗೆದ್ದನಂತರ ಇದೇ ಭಾಗಲಿನಿಂದ ಕೋಟೆಯೊಳಗೆ ಪ್ರವೇಶಿಸಿದ. ಇದರಿಂದಾಗಿ ಈ ಬಾಗಿಲಿಗೆ ವಿಜಯದ ಬಾಗಿಲು (ಫತೇದರವಾಜ) ಎಂದು ಹೇಳಲಾಗುತ್ತಿದೆ. ಹೊರ ಕೋಟೆಯಲ್ಲಿರುವ ಬಾಗಿಲುಗಳು ಪೂರ್ವ ಹಾಗೂ ಪಶ್ಚಿಮಾಭಿಮುಖವಾಗಿವೆ. ಪೂರ್ವಾಭಿಮುಖವಾದ ಬಾಗಿಲು ಸರಳವಾಗಿದೆ. ಪಶ್ಚಿಮಾಭಿಮುಖವಾಗಿರುವ ಬಾಗಿಲು ಎರಡು ವೃತ್ತಾಕಾರದ ಕೊತ್ತಳಗಳು ಮರೆಮಾಡಿದೆ. ಕೋಟೆ ಒಳಗೆ ಪ್ರವೇಶ ಮಾಡಲು ಉತ್ತರ ದಕ್ಷಿಣ ಹಾಗೂ ಪಶ್ಚಿಮದಿಂದ ಸಾಗಬೇಕಾಗಿದೆ. ಈ ಬಾಗಿಲಿನ ಸಂಕೀರ್ಣದಲ್ಲಿ ಅನೇಕ ಶಾಸನಗಳು ದೊರೆಯುತ್ತವೆ. ಇಲ್ಲಿ ಮುಸ್ಲಿಂ ಸಂಸ್ಕೃತಿ-ಕಲೆ-ಶೌಯಲ್ಸಾಹಸದ ಸಂಕೇತಗಳಾದ ರೇಖಾಚಿತ್ರಗಳಿವೆ. ದರ್ವಾಜದ ಸಂಕೀರ್ಣದ ತೊಲೆಯ ಮಗ್ಗುಲಲ್ಲಿ ಮಂಡಿಯೂರಿದ ಆಂಜನೇಯನ ಉಬ್ಬುಶಿಲ್ಪಗಳಿವೆ. ಇಲ್ಲಿನ ಪಶ್ಚಿಮದ ಬಾಗಿಲು ಆಕರ್ಷಕವಾಗಿದೆ. ಕೋಟೆ ಮಧ್ಯ ಭಾಗದಲ್ಲೊಂದು ಬೆಟ್ಟವಿದೆ. ಬೆಟ್ಟದ ಮೇಲೆ ವಿಜಯಪುರ ಸುಲ್ತಾನ ಎರಡನೇ ಅಲಿ ಆದಿಲ್ಶಹಾನು ಕಲ್ಲಿನ ಬುರುಜು ಹಾಗೂ ಚಾರಮಿನಾರ ಆಕೃತಿಯುಳ್ಳ ಕಮಾನಿನ ಗಗನ ಮಹಲ್ ಕಟ್ಟಿಸಿದ್ದಾನೆ. ಈ ಸ್ಮಾರಕಗಳು ವಿನಾಶದಂಚಿನಲ್ಲಿವೆ. ಇದು ಅಲ್ಲದೆ ತುಪಾಕಿ ಕಟ್ಟಿ, ವೀಕ್ಷಣಾ ಗೋಪುರಗಳು, ತುಪ್ಪದ ಬಾವಿ, ಮುದ್ದಿನಗಂಟಿ, ಷುಷ್ಕರಣಿ, ಏಳು ಹನುಮಪ್ಪನ ಮೂತರ್ಿ ಹಾಗೂ ಕಲ್ಲುಗಂಬಗಳಿವೆ. ಬೆಟ್ಟದ ಕೆಳ ಭಾಗದಲ್ಲಿ ಬಾಲಾಜಿ, ಆದಿಕೇಶವ, ಬೆಣ್ಣೆ ಕೃಷ್ಣ, ಅಶ್ವಥ್ ನಾರಾಯಣ, ದಿದ್ದಿರಾಯ (ಹನುಮಪ್ಪ), ರಂಗನಾಥ, ರಾಮಲಿಂಗೇಶ್ವರ, ಎಮ್ಮೆ ಬಸವಣ್ಣ, ಕೋತಿ ಹನುಮಪ್ಪ ದೇವಾಲಯಗಳು, ರಾಘವೇಂದ್ರಸ್ವಾಮಿ ಮಠ, ಹಜರತ್ ಹುಸೇನಿ ಆಲಂ ದರ್ಗಾ, ಮುತ್ಯಾನ ದರ್ಗಾ, ಗಜಶಾಲೆ, ಗರಡಿಮನೆ, ಚಾರ್ ಮಹಲ್ ಬಾವಿ, ಬಾಗಲಾ ಹಾಳುಬಾವಿ, ಮುದ್ದಿನ ಮನೆಗಳಿವೆ. ಹೀಗಾಗಿ ಮುದಗಲ್ ಭವ್ಯವಾದ ಇತಿಹಾಸ ಮತ್ತು ಸಾಂಸ್ಕೃತಿಕಗಳ ಕುರುಹಾಗಿ ಇಂದಿಗೂ ಮೈತುಂಬಿ ನಿಂತಿದ್ದು, ರಾಯಚೂರು ಜಿಲ್ಲೆಯ ಚರಿತ್ರೆ ಮತ್ತು ಸಾಂಸ್ಕೃತಿಕ ಭವ್ಯ ಕುರುಹಾಗಿ ಇಂದಿಗೂ ಅಚ್ಚಳಿಯದೆ ಉಳಿದು ಬಂದಿದೆ. ಹೀಗೆ ಮುದಗಲ್ ಕೋಟೆ ಸುಂದರವಾಗಿ ಹಾಗೂ ಸುಭದ್ರವಾಗಿ ನಿರ್ಮಾಣಗೊಂಡಿದ್ದು, ಪ್ರಸಿದ್ಧವಾದ ಚಿತ್ರದುರ್ಗ ಕೋಟೆಗಿಂತಲೂ ವಿಶಿಷ್ಟವಾಗಿದೆ. ಆದರೂ ನಮ್ಮ ಇತಿಹಾಸಕಾರರು ಇದರೆಡೆಗೆ ಗಮನ ಹರಿಸದಿರುವುದು ವಿಷಾದನೀಯವೆಂದೇ ಹೇಳಬೇಕು. ಮುದಗಲ್ ಕೋಟೆ, ದರ್ಗಾ, ಮಸೀದಿ, ಬಾಲ್ ಈಸಾರ್, ಈದ್ಗಾ, ಮದ್ದಿನ ಮನೆ, ಫತೇದರವಾಜ, ಶಿಲಾ ಶಾಸನಗಳು ಸೇರಿದಂತೆ ಇನ್ನಿತರ ಮುಸ್ಲಿಂ ಸ್ಮಾರಕಗಳು ಇಸ್ಲಾಂ ಅರಸರ ಇತಿಹಾಸ ಹೇಳುತ್ತಿವೆ. ಪಶ್ಚಿಮಕ್ಕೆ ಇರುವ ಚೆನ್ನಪ್ಪನ ಅಗಸಿಯ ಮೂಲಕ ವಿಜಾಪುರದ ಅಲಿ ಅದಿಲ್ಶಹನು ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸಾಮ್ರಾಜ್ಯ ಸೋಲಿಸಿದ ನಂತರ ಮುದಗಲ್ ಪ್ರವೇಶ ಮಾಡುವ ವೇಳೆ ಇದೇ ಬಾಗಿಲಿನಿಂದ ಕೋಟೆಯೊಳಗೆ ಪ್ರವೇಶಿಸಿದ. ಇದರಿಂದಾಗಿ ವಿಜಯದ ಬಾಗಿಲು (ಫತೇದರವಾಜ) ಸ್ಮಾರಕ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಕೋಟೆಯ ಒಳ ಭಾಗದಲ್ಲಿ ವಿವಿಧ ಅರಸರಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಶಾಸನಗಳು ದೊರೆಯುತ್ತಿವೆ. ಹೊರ ಕೋಟೆ ವಿಜಯಪುರದ 2ನೇ ಇಬ್ರಾಹಿಂ ಆದಿಲ್ ಶಾಹನ ಅಧಿಕಾರಿ ಮಲ್ಲಿಕ್ ಮುರಾದ್ ನಿರ್ಮಾಸಿದ ಎಂದು ಕೆಲ ಉಲ್ಲೇಖಗಳಿಂದ ತಿಳಿಯುತ್ತದೆ. ಈ ಕೋಟೆಯಲ್ಲಿ ಮಲ್ಲಿಕ್ ಮುರಾದ್ಗೆ ಸಂಬಂಧಿಸಿದ 80 ಬಿರುದು ಶಾಸನಗಳು ದೊರೆಯುತ್ತಿವೆ. ಲೇಖಕರು ಡಾ.ಶರಣಪ್ಪ ಆನೆಹೊಸೂರು ಪ್ರಜಾವಾಣಿ ವರದಿಗಾರರು ಮುದಗಲ್.