ಮುನಿರತ್ನಂ ಸುಬ್ರಮಣ್ಯ ನಾಯ್ಡು, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತಾರ. == ವಿವರ == . == ಅವಧಿ == ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂ ಶ್ರೀನಿವಾಸ್‌ರ ವಿರುದ್ಧ ಗೆದ್ದರು. ೨೦೧೮ರವರೆಗೆ ಇವರ ಸೇವಾವಧಿ. == ರಾಜಕೀಯ ಜೀವನ == ಶಾಸಕ: ೨೦೧೩-೨೦೧೮, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಪುರಪಿತೃ: ೨೦೧೦-೨೦೧೩, ಯಶವಂತಪುರ ವಾರ್ಡ್, ಬೆಂಗಳೂರು ಮಹಾನಗರಪಾಲಿಕೆ[[೧]] ಕ್ಲಾಸ್ -೧ಎ ಕಂಟ್ರಾಕ್ಟರ್, ಬೆಂಗಳೂರು ಮಹಾನಗರಪಾಲಿಕೆ: ೧೯೦೮೦-೨೦೧೦ == ಕನ್ನಡ ಚಿತ್ರರಂಗ == ಮುನಿರತ್ನ ಕನ್ನಡ ಚಿತ್ರ ನಿರ್ಮಾಪಕರಾಗಿ ದುಡಿದಿದ್ದಾರೆ. ಆಂಟಿ ಪ್ರೀತ್ಸೆ[[೨]], ಕಂಬಾಲಹಳ್ಳಿ[[೩]], ಅನಾಥರು[[೪]], ಕಠಾರಿವೀರ ಸುರಸುಂದರಾಂಗಿ[[೫]] (ಕನ್ನಡದ ಮೊದಲ ೩-ಡಿ ಚಿತ್ರ) ಈ ಚಿತ್ರಗಳನ್ನು ನಿರ್ಮಿಸಿದ್ದಾರೆ. ಮುನಿರತ್ನ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ರ ಬೀಗರೂ ಕೂಡ. ಕಂಬಾಲಪಲ್ಲಿಯ ದಲಿತರ ಹತ್ಯೆಯನ್ನು ಆಧರಿಸಿದ ಕಂಬಾಲಹಳ್ಳಿ ಚಿತ್ರಕ್ಕೆ ೨೦೦೨ರ ಸಾಲಿನ ಉತ್ತಮ ಕಥಾಲೇಖಕ ವಿಭಾಗದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ_ವಿಧಾನಸಭೆ_ಚುನಾವಣೆ,_2013