ಮುನ್ನಾರ್ (ಮಲಯಾಳಂ:മൂന്നാർ) ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1,600 (5,200 ) ಎತ್ತರದಲ್ಲಿದೆ. == ವ್ಯುತ್ಪತ್ತಿಶಾಸ್ತ್ರ == ಮುನ್ನಾರ್ ಎಂಬ ಹೆಸರು "ಮೂರು ನದಿ"ಗಳನ್ನು ಬಿಂಬಿಸುತ್ತದೆ ಎಂದು ನಂಬಲಾಗುತ್ತದೆ, ಅಂದರೆ ಮುದಿರಪುಜ಼, ನಲ್ಲತನ್ನಿ ಮತ್ತು ಕುನ್ಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ. == ಸ್ಥಳ == ಮುನ್ನಾರ್ ನ ಭೌಗೋಳಿಕ ನಿರ್ದೇಶಾಂಕಗಳು 10°05′21″ 77°03′35″. ಮುನ್ನಾರ್ ಪಟ್ಟಣವು ಕಣ್ಣನ್ ದೆವನ್ ಬೆಟ್ಟಗಳ ದೆವಿಕುಲ್ಲಮ್ ತಾಲ್ಲೂಕಿನ ಕಣ್ಣನ್ ದೆವನ್ ಬೆಟ್ಟಗಳ ಹಳ್ಳಿಯ ಮೇಲೆ ನೆಲೆಗೊಂಡಿದೆ ಮತ್ತು ಇಡುಕ್ಕಿ ಜಿಲ್ಲೆಯ ಅತಿ ದೊಡ್ಡ ಪಂಚಾಯತ್. === ರಸ್ತೆ === ಮುನ್ನಾರ್ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿದೆ. ಮುನ್ನಾರ್ ಪಟ್ಟಣವು ಕೊಚ್ಚಿ - ಧನುಷ್ಕೋಡಿ ರಾಷ್ಟೀಯ ಹೆದ್ದಾರಿಯಲ್ಲಿ(. 49),ಕೊಚ್ಚಿಯಿಂದ ಸುಮಾರು ೧೩೦ಮೈಲಿ, ಅದಿಮಲಿಯಿಂದ ೩೧ಮೈಲಿ, ತಮಿಳುನಾಡಿನ ಉದುಮಲ್ಪೆಟ್ಟು ಇಂದ ೮೫ಮೈಲಿ ಮತ್ತು ನೆರಿಯಮನ್ಗಲಮ್ ೬೦ಮೈಲಿ ದೂರದಲ್ಲಿದೆ. ಪ್ರಮುಖ ನಗರಗಳಿಂದ ದೂರ ಕೊಚ್ಚಿ ಇಂದ- ಎರ್ನಾಕುಳಮ್ ಇಂದ- 150 === ವಿಮಾನ ನಿಲ್ದಾಣ === 110 (68 ) ದೂರದಲ್ಲಿರುವ ಕೊಚ್ಚಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣ. ಮುನ್ನಾರ್ನಿಂದ ಕೊಯಂಬತ್ತೂರು ಮತ್ತು ಮದುರೈ ವಿಮಾನ ನಿಲ್ದಾಣವು ೧೬೫km ದೂರದಲ್ಲಿದೆ. == ಆಡಳಿತ == ೧೯೬೨ ಜನವರಿ ೨೪ರಂದು ನಿರ್ಮಿತವಾದ ಮುನ್ನಾರ್ ಪಂಚಾಯತ್ ೨೧ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಉತ್ತರ ದಿಕ್ಕಿಗೆ ಕೊಯಂಬತ್ತೂರು ಜಿಲ್ಲೆಯು, ದಕ್ಷಿಣಕ್ಕೆ ಪಲ್ಲಿವಸಲ್, ಪೂರ್ವಕ್ಕೆ ದೆವಿಕುಳಮ್ ಮತ್ತು ಮರಯೂರ್ ಮತ್ತು ಮನುಕುಳಮ್, ಪಶ್ಚಿಮಕ್ಕಿ ಕುಟ್ಟಮ್ಪುಜ಼ ಪಂಚಾಯತ್ ಇದೆ. == ಆಕರ್ಷಕ ಸ್ಥಳಗಳು == ಎರವಿಕುಳಮ್ ರಾಷ್ಟೀಯ ಉದ್ಯಾನವನ ಅನ್ನಮುಡಿ ಉತ್ತುಂಗ ಮಟ್ಟುಪೆಟ್ಟಿ ಅಣೆಕಟ್ಟು ಪಲ್ಲಿವಸಲ್ ಚಿನ್ನಕನಾಲ್ ಮತ್ತು ಅನಯಿರನ್ಗಳ್ ಟಾಪ್ ಸ್ಟೇಷನ್ ಮುನ್ನಾರ್ ಟೀ ಮ್ಯೂಸಿಯಂ ಕುನ್ಡ್ಲಾ ಅಣೆಕಟ್ಟು == ಉಲ್ಲೇಖಗಳು ==