== ರಾಸಾಯನಿಕ ಮೂಲಧಾತು ಅಥವಾ ಮೂಲಧಾತು == ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ರಸಾಯನಶಾಸ್ತ್ರದ () ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು. ಪ್ರತಿಯೊಂದು ವಸ್ತುವು () ಅನೇಕ ಧಾತುಗಳಿಂದ ()ಕೂಡಿದೆ. ವಸ್ತುವನ್ನು ಮತ್ತು ಧಾತು ಅಥವಾ ಮೂಲವಸ್ತುವನ್ನು ವಿಭಜಿಸಿದಾಗ ಅದರ ಚಿಕ್ಕ ಘಟಕ 'ಅಣು'() ರೂಪದಲ್ಲಿ ಇರುವುದು ಕಂಡುಬಂದಿದೆ. ಅದನ್ನೂ ವಿಭಜಸಿದರೆ ಅದರ ಅತಿ ಚಿಕ್ಕ ಘಟಕ ಪರಮಾಣು. ಒಂದು ವಿಭಜಿಸಿದ ವಸ್ತುವಿನ ಅತಿ ಚಿಕ್ಕ ಘಟಕವಾದ ಪರಮಾಣು ಮೂಲವಸ್ತುವಿನ ಗುಣವನ್ನೇ ಹೊಂದಿರುತ್ತದೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ. ಪ್ರಸ್ತುತವಾಗಿ 118 ಧಾತುಗಳನ್ನು () 2013 ವೇಳೆಗೆ ಕಂಡುಹಿಡಿಯಲಾಗಿದೆ. ಮೂಲಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು. ಪಕ್ಕದಲ್ಲಿ ಕೊಟ್ಟಿರುವ ಮೂಲಧಾತುವಿನ ಅಂಕಣ-ಪಟ್ಟಿ ಮೂಲಧಾತುವಿನ ಗುಂಪು,ಸಂಖ್ಯೆ ಮತ್ತು ಮೂಲಧಾತುವಿನ ಇಂಗ್ಲಿಷ್‍ನ ಸಂಕೇತವನ್ನು ತೋರಿಸುತ್ತದೆ. ಅಣುತೂಕವನ್ನು ಪಟ್ಟಿಯಿಂದ ಬಿಡಲಾಗಿದೆ. ಆ ಪಟ್ಟಿಗೆ 'ಪೀರಿಯಾಡಿಕ್ ಟೇಬಲ್' ಅಥವಾ 'ಆವೃತ್ತಕೋಷ್ಠಕ' ಎಂದು ಹೆಸರು. == ಮೂಲಧಾತುಗಳ ಪಟ್ಟಿ == == ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು == ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ: == ನೋಡಿ == ಪರಮಾಣು- == ಉಲ್ಲೇಖ ==