ಮೆಂಬ್ರೇಸಿಡೀ ಹೆಮಿಪ್ಟೆರಾ ಉಪಗಣಕ್ಕೆ ಸೇರಿದ ಕೀಟಗಳ ಕುಟುಂಬ. ಇದರಲ್ಲಿ ಸುಮಾರು 350 ಜಾತಿಗಳಿದ್ದು ಇವೆಲ್ಲವನ್ನೂ ಒಟ್ಟಾಗಿ ಸಾಮಾನ್ಯವಾಗಿ ಮರಜಿಗಿಗಳು (ಟ್ರೀ ಹಾಪರ್ಸ್) ಎಂದು ಕರೆಯಲಾಗುತ್ತದೆ. ಇವು ವಿಚಿತ್ರ ಆಕಾರವಾಗಿದ್ದು ಇವನ್ನು ಗುರುತಿಸುವುದು ಸುಲಭ. ಇವುಗಳ ಪ್ರೋನೋಟಮ್ ಭಾಗ ತಲೆಯನ್ನು ಸಂಪೂರ್ಣವಾಗಿ ಆವರಿಸಿದೆಯಲ್ಲದೆ ಉದರಭಾಗದ ಮೇಲೂ ವಿಸ್ತರಿಸಿದಂತಿದ್ದು ವಿವಿಧ ಆಕಾರವನ್ನು ತಳೆಯುತ್ತದೆ. ಕೆಲವು ಪ್ರಭೇದಗಳ ಬೆನ್ನುಭಾಗ ಗೂನಾಗಿದ್ದು ಇನ್ನು ಕೆಲವಲ್ಲಿ ಮುಳ್ಳು, ಕೋಡು ಮುಂತಾಗಿ ಬಾಚಿಕೊಂಡಿರುತ್ತದೆ. ರೆಕ್ಕೆಗಳು ತುಂಬ ತೆಳುವಾಗಿದ್ದು, ಪ್ರೋನೋಟಮ್ಮಿನ ಒಳಗೆ ಹುದುಗಿರುವುವು. ಗಾತ್ರದಲ್ಲಿ ಇವು ಚಿಕ್ಕವು; ದೇಹದ ಉದ್ದ 16-12 ಮಿ.ಮೀ ಮೀರದು. ದೇಹದ ಬಣ್ಣ ಹಳದಿ, ಹಸುರು, ಕಂದು, ಕಪ್ಪು ಮುಂತಾಗಿ ವೈವಿಧ್ಯಮಯ. ಇವುಗಳ ವಾಸ ಸಾಮಾನ್ಯವಾಗಿ ಮರಗಳಲ್ಲಿ ಅಥವಾ ಪೊದೆಗಳಲ್ಲಿ. ಕೆಲವು ಪ್ರಭೇದಗಳು ಮೈದಾನ ಪ್ರದೇಶಗಳಲ್ಲಿ ಬೆಳೆಯುವ ಹುಲ್ಲು, ಕಳೆಗಿಡ ಇತ್ಯಾದಿಗಳ ಮೇಲೂ ಕಾಣಬರುವುದುಂಟು. == ಸಂತಾನೋತ್ಪತ್ತಿ == ಮರಗಳ ತೊಗಟೆ, ದಾರುಭಾಗ, ಎಲೆಗಳ ಮಧ್ಯನಾಳ, ಕಾಂಡ ಮುಂತಾದ ಭಾಗಗಳಲ್ಲಿ ತಮ್ಮ ಉಳಿಯಂಥ ಅಂಡ ನಿಕ್ಷೇಪಕದ (ಓವಿಪಾಸಿಟರ್) ಸಹಾಯದಿಂದ ಮೊಟ್ಟೆಯಿಡುವುವು. ವರ್ಷದಲ್ಲಿ ಸಾಮಾನ್ಯವಾಗಿ ಎರಡು ಬಾರಿ ಸಂತಾನೋತ್ಪತ್ತಿ ಆಗುವುದು. ಮೊಟ್ಟೆಗಳಿರುವ ಕಾಂಡಭಾಗ ಒಣಗಿ ಗಿಡಗಳು ನಾಶವಾಗಬಹುದು. == ಪಿಡುಗು ಉಂಟುಮಾಡುವ ಗುಣ == ಈ ಕೀಟಗಳು ಗಿಡಮರಗಳಿಗೆ ಅಷ್ಟಾಗಿ ಹಾನಿಕರವಲ್ಲ. ಅಮೆರಿಕದಲ್ಲಿ ಸೇಬು ಗಿಡಗಳಿಗೆ ಸ್ಟಿಕ್ಟೊಸಿಫ್ಯಾಲ ಬ್ಯುಬೇಲಸ್ ಎಂಬ ಮರಜಿಗಿ (ಬಫೆಲೊ ಟ್ರೀ ಹಾಪರ್) ಕೊಂಚ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ. ಭಾರತದಲ್ಲಿ ಇವುಗಳ ಪಿಡುಗು ಗಣನೀಯವಾಗಿಲ್ಲ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == Mikó .; . (2012). " (: ) ". . 7 (1): e30137. :2012PLoSO...730137M. :10.1371/..0030137. 3260216. 22272287. , . . . , , , , . 2006. . - ( ). . : , , , , , . . . . . 2010. : , , (). .