ಮೆನ್‍ಹೇಡನ್ ಕ್ಲೂಪಿಯಿಡೀ ಗುಂಪಿಗೆ ಸೇರಿದ ಬ್ರಿವೂರ್ಷಿಯ ಜಾತಿಯ ಮೀನು. ಅಮೆರಿಕದ ಅಟ್ಲಾಂಟಿಕ್ ಕರಾವಳಿಯಲ್ಲಿ ಕಾಣಬರುತ್ತದೆ. ಇದನ್ನು ಪೊಗಿ, ಮೊಸ್‌ಬಂಕರ್, ಬಗ್‌ಹೆಡ್, ಫ್ಯಾಟ್‌ಬ್ಯಾಕ್, ಬೆಎಲ್‌ವೈಫ್ ಎಂದೂ ಕರೆಯುತ್ತಾರೆ. ಸಾರ್ಡಿನ್, ಎಲ್‌ವೈಫ್, ಹರ‍್ರಿಂಗ್, ಶಾಡ್‌ಗಳಿಗೆ ಬಹಳ ಸಮೀಪದ ಸಂಬಂಧಿ. ದೊಡ್ಡ ಗುಂಪುಗಳಲ್ಲಿ ಸಂಚರಿಸುತ್ತದೆ. == ದೇಹರಚನೆ == ದೇಹದ ಉದ್ದ ಸುಮಾರು 30 - 40 ಸೆಂಮೀ, ತೂಕ 0.5 ಕೆ.ಜಿ. ದೇಹ ನೀಲಿ ಬಣ್ಣದ್ದು. ಇವು ವಲಸೆ ಹೋಗುವ ಪರಿಪಾಟ ತೋರುತ್ತವೆ. == ಸಂತಾನೋತ್ಪತ್ತಿ == ಅಧಿಕ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಟ್ಟ 2 ದಿವಸಗಳ ತರುವಾಯ ಮರಿ ಹೊರಬರುವುವು. ಮರಿಗಳ ಬೆಳೆವಣಿಗೆ ಶೀಘ್ರಗತಿಯದು, 3 ವರ್ಷಗಳಲ್ಲಿ ಪ್ರೌಢಾವಸ್ಥೆಗೆ ಬರುವುವು. == ವೈರಿಗಳು == ಕಾಡ್, ಶಾರ್ಕ್ ಮೀನುಗಳೂ, ಕಡಲಹಕ್ಕಿ ಮತ್ತು ತಿಮಿಂಗಿಲಗಳೂ ಇದರ ಸಹಜ ವೈರಿಗಳು. == ಉಪಯೋಗಗಳು == ಮೆನ್‌ಹೇಡನ್ ಮೀನಿಗೆ ವಾಣಿಜ್ಯ ಪ್ರಾಮುಖ್ಯ ಉಂಟು. ಮೀನೆಣ್ಣೆ, ಗೊಬ್ಬರ, ಸಾಬೂನು ಮತ್ತು ಮೀನಿನ ಪುಡಿ ತಯಾರಿಕೆಗೆ ಇದು ಬಳಕೆಯಾಗುತ್ತದೆ. == ಉಲ್ಲೇಖಗಳು ==