ಮೇಘ ಸ್ಫೋಟವೆಂದರೆ ಅತಿ ದೊಡ್ಡ ಗಾತ್ರದ ನೀರಿನ ಮೋಡ ಭೂಮಿಯ ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುವುದು. ಈ ಸುರಿಯುವಿಕೆಗೆ ಕಾರಣವೆಂದರೆ, ಗುಡುಗು, ಸಿಡಿಲುಗಳಿಂದ ಹಾಗೂ ಕೆಲವು ಬಾರಿ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆ. ಸಾಮಾನ್ಯವಾಗಿ ಈ ರೀತಿಯ ಮಳೆ ಬೀಳುವುದು ಕೆಲವೇ ನಿಮಿಷಗಳು. ಆದರೆ ಇದರ ಪರಿಣಾಮ ಮಾತ್ರ ಭಾರಿ ಭೀಕರ. ಕೆಲವೇ ನಿಮಿಷಗಳ ಸುರಿಯುವಿಕೆಯಿಂದ ಇದು ಭಾರೀ ಪ್ರವಾಹದ ಪರಿಣಾಮ ಉಂಟುಮಾಡಬಲ್ಲುದು. ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬರುವ, ಸ್ವಲ್ಪವೇ ಕಾಲ ಇರುವ ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘ ಸ್ಫೋಟ ಎನ್ನಲಾಗುತ್ತದೆ. == ಲಕ್ಷಣಗಳು == ಹವಾಮಾನ ತಜ್ಞರ ಪ್ರಕಾರ ಒಂದು ಘಂಟೆಯಲ್ಲಿ ೧೦೦ ಮಿಮೀ (೩.೯೪ ಇಂಚು)ಗಿಂತ ಹೆಚ್ಚಿನ ಮಳೆ ಬರುತ್ತದೆ . ಈ ಮಳೆ ಸುರಿಸುವ ಮೋಡದ ಎತ್ತರ ಭೂಮಿಯಿಂದ ೧೪ ಕಿಮಿ ವರೆಗೂ ಇರುತ್ತದೆ. ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ ೨೦ಮಿಮೀ ಗಿಂತ ಹೆಚ್ಚಿನ ಮಳೆ ಸುರಿಯುತ್ತದೆ. ಇದರಿಂದಾಗಿ ನಿಮಿಷಗಳಲ್ಲೇ ಭಾರೀ ಪ್ರವಾಹದ ವಾತಾವರಣ ಉಂಟಾಗುವುದು. == ಮೇಘ ಸ್ಫೋಟದ ಪ್ರಕರಣಗಳು == ಒಂದು ಅಂಗುಲ()=೨೫.೪ ಮಿ.ಮೀ. ಉಲ್ಲೇಖ