ಮೈಗಾಲೊಮಾರ್ಫ ಎಂಬುದು ಕೆಲತರದ ಜಾತಿಯ ಜೇಡಗಳನ್ನು ಕೂಡಿದ ಉಪಗಣ, ಆರ್ತೊಗ್ನಾತ ಪರ್ಯಾಯ ನಾಮ. == ವಿವರ == ಈ ಗುಂಪಿಗೆ ಸೇರಿದ ಜೇಡಗಳ ಗಾತ್ರ ಹಿರಿದಾಗಿದ್ದು ಇವುಗಳಲ್ಲಿ ಶ್ವಾಸನಳಿಕೆಗಳಿರುವುದಿಲ್ಲ. ಉಸಿರಾಡಲು 2-4 ಜೊತೆ ಫುಪ್ಪುಸ ಸಂಪುಟಗಳಿವೆ. ತುಂಬ ಪ್ರಾಚೀನಕಾಲದವು ಎಂದು ಪರಿಗಣಿಸಲ್ಪಡುವ ಈ ಗುಂಪಿಗೆ ಸೇರಿದ ಜೇಡಗಳಲ್ಲಿ ಶಿರೋಕ್ಷಕವಚದ (ಕ್ಯಾರಪೆಸ್) ಮುಂಭಾಗದಲ್ಲಿ ಕಾಣಬರುವ ಕೆಲಿಸರಿ ಸಮಾಂತರವಾಗಿ ಚಲಿಸುವ ಕಾರಣ ಇವುಗಳನ್ನು ಆರ್ತೊಗ್ನಾತಗಳೆಂದು ಪರಿಗಣಿಸುತ್ತಾರೆ. ಇವುಗಳ ಉದರದ ಭಾಗಗಳಲ್ಲಿ ಯಾವಾಗಲೂ 4 ಜೊತೆಗಿಂತ ಕಡಿಮೆ ಸ್ನಾಯುಗಳಿರುತ್ತವೆ. ಬಲೆಯನ್ನು ರಚಿಸಲು ಬೇಕಾದ ಸ್ಪಿನರೆಟ್ಸ್ ದೇಹದ ಹಿಂಭಾಗದಲ್ಲಿರುತ್ತದೆ. ಮೈಗಾಲೊಮಾರ್ಫ ಜೇಡಗಳು ಆಲಿಕೆ ಆಕಾರದ ಬಲೆಯನ್ನು ಇಲ್ಲವೇ ನೆಲವನ್ನು ಕೊರೆದು ಗೂಡನ್ನು ರಚಿಸಿ ಜೀವಿಸುತ್ತವೆ. ಈ ಜೇಡಗಳು ಆಹಾರವಿಲ್ಲದೆ ಎರಡು ವರ್ಷಗಳ ಕಾಲ ಬದುಕಬಲ್ಲ ಸಾಮರ್ಥ್ಯ ಪಡೆದಿವೆ ಎಂದು ಬರ್ಗೆ ಎಂಬಾತ ವಿವರಿಸಿದ್ದಾನೆ. == ಪ್ರಸಿದ್ಧ ಪ್ರಭೇದಗಳು == ಮೈಗಾಲೊಮಾರ್ಫ ತರದ ಜೇಡಗಳಲ್ಲಿ ಬೋನಬಾಗಿಲ ಜೇಡ (ಟ್ರ್ಯಾಪ್ ಡೋರ್ ಸ್ಪೈಡರ್) ಹಾಗೂ ಟರ‍್ಯಾಂಟುಲ ಜೇಡಗಳು ಬಲು ಪ್ರಸಿದ್ಧವಾದವು. ಬೋನಬಾಗಿಲ ಜೇಡ, ಸುಮಾರು 15 ಸೆಂ.ಮೀ. ಆಳದಷ್ಟು ದೊಡ್ಡ ಸುರಂಗವನ್ನು ಕೊರೆದು ಒಳಗಡೆಗೆ ರೇಷ್ಮೆದಾರದ ಹಾಸಿಗೆಯನ್ನು ರಚಿಸಿ ಉತ್ತಮ ತರದ ಕೀಲುಗಳಿರುವ ಬಾಗಿಲನ್ನು ರೂಪಿಸಿ ವೈರಿಗಳ ಕಣ್ಣುಮರೆಸಿ, ಸೊಳ್ಳೆಗಳನ್ನು ಉಪಾಯದಿಂದ ಹಿಡಿದು ತಿನ್ನುವುದು. ಉಷ್ಣವಲಯ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಜೇಡಜಗತ್ತಿನ ರಾಕ್ಷಸನೆಂದು ಕರೆಯಲ್ಪಡುವ, ವಿಷಕಾರಿ ಟರ‍್ಯಾಂಟುಲ, ಚಿಕ್ಕಪುಟ್ಟ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡಿ ತಿನ್ನುತ್ತವೆ. ಅಮೆರಿಕದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ. ಇದರ ಕಡಿತದಿಂದ ಆಗುವ ಪರಿಣಾಮಕ್ಕೆ ಟರ‍್ಯಾಂಟಿಸಮ್ ಎಂದು ಹೆಸರು. == ಉಲ್ಲೇಖಗಳು == == ಸಾಮಾನ್ಯ ಉಲ್ಲೇಖಗಳು == , .. (1985). " : ". . 182: 1–180. , . (1993-03-23). ﻿ ()﻿ (). . , : . ://..///2246/5017/1/N3056.. == ಹೊರಗಿನ ಕೊಂಡಿಗಳು == ", ". " ". " ".