ಮೈಲುತುತ್ತ (ಕಾಪರ್ ಸಲ್ಫೇಟ್) < ="">4</>(H2O) ( ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ ( = 5) ಅತ್ಯಂತ ಸಾಮಾನ್ಯ ರೂಪವಾಗಿದೆ. ಇದರ ಪೆಂಟಾಹೈಡ್ರೇಟ್ (CuSO4·5H2O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ. == ಉಪಯೋಗಗಳು == ಕಾಪರ್ ಸಲ್ಫೇಟ್ ಪೆಂಟಾಹೈಡ್ರೇಟನ್ನು ಶಿಲೀಂಧ್ರನಾಶಕವಾಗಿ ಬಳಸಲಾಗುತ್ತದೆ. ಕಾಪರ್ ಸಲ್ಫೇಟ್ (CuSO4) ಮತ್ತು ಕ್ಯಾಲ್ಷಿಯಂ ಹೈಡ್ರಾಕ್ಸೈಡ್ (()2) ಸಸ್ಪೆಂಷನ್ನಾಗಿರುವ ಬಾರ್ಡೋ ಮಿಶ್ರಣವನ್ನು ದ್ರಾಕ್ಷಿ, ಮೆಲನ್‍ಗಳು ಮತ್ತು ಇತರ ಬೆರಿಗಳ ಮೇಲಿನ ಶಿಲಿಂಧ್ರವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಕಾಪರ್ ಸಲ್ಫೇಟ್‍ನ ನೀರಿನ ದ್ರಾವಣ ಮತ್ತು ನೀರೂಡಿಸಿದ ಸುಣ್ಣದ ಸಸ್ಪೆಂಷನ್ನನ್ನು ಮಿಶ್ರಣಮಾಡಿ ಇದನ್ನು ತಯಾರಿಸಲಾಗುತ್ತದೆ. == ಉಲ್ಲೇಖಗಳು ==