ಮೊಜಾಂಬಿಕ್, ಅಧಿಕೃತವಾಗಿ ಮೊಜಾಂಬಿಕ್ ಗಣರಾಜ್ಯ, ([Moçambique] : {{}}: () / República Moçambique), ಪೂರ್ವ ಆಫ್ರಿಕಾದ ದಕ್ಷಿಣ ಭಾಗದ ಒಂದು ದೇಶ. ಇದರ ಪೂರ್ವಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಟಾಂಜೇನಿಯ, ವಾಯುವ್ಯಕ್ಕೆ ಮಲಾವಿ ಮತ್ತು ಜಾಂಬಿಯ, ಪಶ್ಚಿಮಕ್ಕೆ ಜಿಂಬಾಬ್ವೆ, ಮತ್ತು ನೈರುತ್ಯಕ್ಕೆ ಸ್ವಾಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ. ೧೪೯೮ರಲ್ಲಿ ವಾಸ್ಕೊ ಡ ಗಾಮನು ಇಲ್ಲಿಗೆ ಆಗಮಿಸಿ ಮುಂದೆ ೧೫೦೫ರಲ್ಲಿ ಪೋರ್ಚುಗಲ್ನ ವಸಾಹತು ಆಯಿತು. ಇಲ್ಲಿನ ಹಳೆಯ ಸುಲ್ತಾನ ಮೂಸ ಅಲೆಬೀಕ್ ಹೆಸರಿನಿಂದ ಈ ದೇಶದ ಹೆಸರು ಬಂದಿದೆ.