ಮೊಟೊರೊಲ ಒಂದು ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿಯಾಗಿತ್ತು. ಆದರೆ ೨೦೧೧ದರಲ್ಲಿ ಇದು ಮೊಟೊರೊಲ ಮೊಬಿಲಿಟಿ ಮತ್ತು ಮೊಟೊರೊಲ ಸೊಲ್ಯುಷನ್ಸ್ ಎಂಬ ಎರಡು ಸ್ವತಂತ್ರ್ಯ ಕಂಪನಿಯಾಗಿ ವಿಂಗಡನೆಯಾಯಿತು. ಮೊಟೊರೊಲ ಮೊದಲು ವೈರ್ಲೆಸ್ ನೆಟ್ವರ್ಕ್ ಸಾಧನಗಳಾದ ಸೆಲ್ಯುಲಾರ್ ಪ್ರಸರಣ ಕೇಂದ್ರ ಮತ್ತು ಸಂಕೇತ ವರ್ದಕಗಳನ್ನು ತಯಾರಿಸುತ್ತಿತ್ತು. ಮೊಟೊರೊಲ ಕಂಪನಿಯು ಸ್ವತಂತ್ರ್ಯವಾಗಿ ೭ ತಿಂಗಳು ಕಳಿದ ಬಳಿಕ ಗೂಗಲ್ , ಅದನ್ನು ೧೨.೫ ಬಿಲಿಯನ್ ಡಾಲರ್'ಗೆ ಖರೀದಿಸಿತು. ಈ ಸಮಯದಲ್ಲಿ ಮೊಟೊರೊಲ ಕಂಪನಿಯು ಗೂಗಲ್ ನೊತೆ ಸೇರಿ ಅನೇಕ ಮೊಟೊ ಸೀರೀಸ್ ಆಂಡ್ರಾಯ್ಡ್ ಮೊಬೈಲ್ ಫೋನುಗಳನ್ನು ಬಿಡುಗಡೆಗೊಳಿಸಿತು. ಈ ಫೋನುಗಳು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರ ಕೈಗೆ ಸಿಗುವಂತೆ ಇತ್ತು. ಇದು ಮೊಟೊರೊಲ ಕಂಪನಿಯ ಹೆಸರು ಮತ್ತೆ ಮೇಲೆ ಬರುವಂತೆ ಮಾಡಿತು. ಗೂಗಲ್ ಜೊತೆ ಸೇರಿ ಈ ಮೊಬೈಲ್ ಫೋನ್ ಬಿಡುಗಡೆ ಮಾಡಿದ್ದರಿಂದ ಅದಕ್ಕೆ ಹೊಸ ಆಂಡ್ರಾಯ್ಡ್ ಅಪ್ಡೇಟ್ ಕೂಡ್ ಸಿಕ್ಕಿತು. ಜನವರಿ ೨೯ ೨೦೧೪ರಲ್ಲಿ ಲೆನೊವೊ ಕಂಪನಿಯು ಮೊಟೊರೊಲ ಕಂಪನಿಯ ಹಕ್ಕನ್ನು ಗೂಗಲ್ ಇಂದ ೨.೯೧ ಬಿಲಿಯನ್ ಡಾಲರ್'ಗೆ ಖರೀದಿ ಮಾಡಿತು. == ಉಲ್ಲೇಖಗಳು ==