ಮೌಖರಿ ರಾಜವಂಶ ಆರು ತಲೆಮಾರುಗಳಿಗಿಂತ ಹೆಚ್ಚು ಕಾಲ ಉತ್ತರ ಭಾರತದ ವಿಶಾಲವಾದ ಪ್ರದೇಶಗಳನ್ನು ನಿಯಂತ್ರಿಸಿದ್ದ ಒಂದು ಭಾರತೀಯ ರಾಜವಂಶವಾಗಿತ್ತು. ಅವರು ಮುಂಚೆ ಗುಪ್ತರ ಸಾಮಂತರಾಗಿ ಸೇವೆಸಲ್ಲಿಸಿದರು, ಜೊತೆಗೆ ಹರ್ಷ ಮತ್ತು ಅವನ ಅಲ್ಪಾಯಸ್ಸಿನ ವರ್ಧನ ರಾಜವಂಶಕ್ಕೆ ಸಂಬಂಧ ಹೊಂದಿದ್ದರು. ಮೌಖರಿಗಳು ತಮ್ಮ ಸ್ವಾತಂತ್ರ್ಯವನ್ನು ೬ನೇ ಶತಮಾನದ ಅವಧಿಯಲ್ಲಿ ಕನ್ನೌಜ್‍ನಲ್ಲಿ ಸ್ಥಾಪಿಸಿದರು. ಈ ರಾಜವಂಶ ಉತ್ತರ ಪ್ರದೇಶದ ಹೆಚ್ಚಿನ ಭಾಗ ಮತ್ತು ಮಗಧದಲ್ಲಿ ಆಳ್ವಿಕೆ ನಡೆಸಿತು. ಕ್ರಿ.ಶ. ೬೦೬ರ ಸುಮಾರು, ಉತ್ತರ ಗುಪ್ತರು ಇವರ ಸಾಮ್ರಾಜ್ಯದ ದೊಡ್ಡ ಭಾಗವನ್ನು ಮತ್ತೆ ಗೆದ್ದುಕೊಂಡರು. == ರಾಜರು == ಪರಿಚಿತವಿರುವ ಮೌಖರಿ ರಾಜರಲ್ಲಿ ಈ ಕೆಳಗಿನವರು ಸೇರಿದ್ದಾರೆ: ಹರಿವರ್ಮನ್ ಆದಿತ್ಯವರ್ಮನ್ ಈಶ್ವರವರ್ಮನ್ ಈಶಾನವರ್ಮನ್ ಸು. ಕ್ರಿ.ಶ. 550-560 ಶರ್ವವರ್ಮನ್ ಸು. ಕ್ರಿ.ಶ. 560-575 ಅವಂತಿವರ್ಮನ್ ಸು. ಕ್ರಿ.ಶ. 575-600 ಗ್ರಹವರ್ಮನ್ ಸು. ಕ್ರಿ.ಶ. 600-605 ನಾಗಾರ್ಜುನಿ ಗುಹಾ ಶಾಸನಗಳು ಇನ್ನೊಂದು ಮೌಖರಿ ಶಾಖೆಯ ಅಸ್ತಿತ್ವವನ್ನು ದೃಢೀಕರಿಸುತ್ತವೆ. ಈ ಶಾಖೆ ಸಾಮಂತರಾಗಿ ಆಳಿತು, ಬಹುಶಃ ಉತ್ತರ ಗುಪ್ತರ ಸಾಮಂತರಾಗಿ. ಈ ಶಾಖೆಯ ಪರಿಚಿತವಿರುವ ರಾಜರೆಂದರೆ: ನೃಪ ಶ್ರೀ ಯಜ್ಙವರ್ಮನ್ ನೃಪ ಸಾಮಂತಚೂಡಾಮಣಿ ಶ್ರೀ ಶಾರ್ದೂಲ ವರ್ಮನ್ ಅನಂತವರ್ಮನ್ == ಉಲ್ಲೇಖಗಳು ==