ಮ್ಯಾಂಗನೀಸ್ ಒಂದು ಬಹೂಪಯೋಗಿ ಲೋಹ ಮೂಲಧಾತು. ಇದನ್ನು ಪ್ರಥಮವಾಗಿ ೧೭೭೪ರಲ್ಲಿ ಸ್ವೀಡನ್ ದೇಶದ ಜೋಹನ್ ಗೋಟ್ಲ್ಯಿಬ್ ಗಾನ್ ( ) ಎಂಬವರು ಬೇರೆ ಲೋಹಗಳಿಂದ ಬೇರ್ಪಡಿಸಿದರು. ಇದು ಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾಗಿ ಬೇಕಾದ ಮೂಲವಸ್ತು. ಕೈಗಾರಿಕಾ ವಲಯದಲ್ಲಿ ಹಲವಾರು ಮಿಶ್ರ ಲೋಹಗಳ ತಯಾರಿಕೆಯಲ್ಲಿ ಇದು ಒಳಗೊಂಡಿದೆ. ಮುಖ್ಯವಾಗಿ ಉಕ್ಕು, ಬಣ್ಣಗಳು, ರಸಗೊಬ್ಬರ, ಕೃತಕ ಸಕ್ಕರೆ () ಮುಂತಾದವುಗಳ ತಯಾರಿಕೆಗೆ ಇದು ಪ್ರಮುಖ ಕಚ್ಛಾವಸ್ತುವಾಗಿದೆ.