ಮ್ಯಾಟಲ್ಯಾಬ ಒಂದು ಗಣಕ ತಂತ್ರಾಶ. ಇದನ್ನು ಮ್ಯಾಥವರ್ಕ್ಸ್ ಎಂಬ ಸಂಸ್ಥೆ ಅಭಿವೃದ್ದಿಪಡಿಸಿದೆ. ಇದರಲ್ಲಿ ಮ್ಯಾಟ್ರಿಕ್ಸಗಳ ಬದಲಾವಣೆಗಳನ್ನು, ಸಮೀಕರಣಗಳನ್ನು ಪರಿಹರಿಸುವುದು. ರೇಖಾಚಿತ್ರಗಳನ್ನು ಬಿಡಿಸುವುದು, ಕ್ರಮಾವಳಿಗಳನ್ನು ಅನುಷ್ಠಾನ ತರುವುದು ಹಾಗೂ ಇತರೇ ಗಣಿತಮಯ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಬಹುದು. ಇತರೆ ಗಣಕ ಭಾಷೆಗಳಾದ , ++, , ಮತ್ತು ಗಳಲ್ಲಿ ಬರೆದ ತಂತ್ರಾಂಶಗಳನ್ನು ಮ್ಯಾಟಲ್ಯಾಬಗೆ ಜೋಡಿಸಬಹುದು. ಪ್ರಾಥಮಿಕವಾಗಿ ಮ್ಯಾಟಲ್ಯಾಬನ್ನು ಸಂಖ್ಯಾತ್ಮಕ ಲೆಕ್ಕಾಚಾರಗಳಿಗಾಗಿ ಉದ್ದೇಶಿಸಿ ಹೊರತರಲಾಯಿತಾತದರೋ, ಇಂದು ಸಾಂಕೇತಿಕ ಲೆಕ್ಕಾಚಾರದ ಸಾಮರ್ಥ್ಯಗಳನ್ನು ಹೊಂದಿದೆ. ೨೦೦೪ರಲ್ಲಿ ಸುಮಾರು ಹತ್ತು ಲಕ್ಷ ಬಳಕೆದಾರರನ್ನು ಮ್ಯಾಟಲ್ಯಾಬ ಹೊಂದಿತ್ತು . ವಿಜ್ಞಾನ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರ ವಿಷಯದಿಂದ ಹೆಚ್ಚಿನ ಬಳಕೆದಾರರು ಇದ್ದಾರೆ. ಮ್ಯಾಟಲ್ಯಾಬನ್ನು ವ್ಯಾಪಕವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಖಾನೆಗಳ ಉದ್ಯಮಗಳು ಬಳಸಲಾಗುತ್ತದೆ. == ಇತಿಹಾಸ == ೧೯೭೦ ರಲ್ಲಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ ಕ್ಲೀವ ಮೊಲರ ಎಂಬುವರು ಮ್ಯಾಟಲ್ಯಾಬನ್ನು ಅಭಿವೃದ್ಧಿಪಡಿಸತೊಡಗಿದರು. ಅವರು ತನ್ನ ವಿದ್ಯಾರ್ಥಿಗಳಿಗೆ ಫೊರ್ಟ್ರಾನ ತಿಳಿಯದೇ ಮತ್ತು ಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದರು. ಬೇಗನೇ, ಇದರ ಕುರಿತು ಬೇರೆಬೇರೆ ವಿಶ್ವವಿದ್ಯಾಲಗಳಿಗೆ ಈ ಸುದ್ದಿ ಹರಡಿತು. ೧೯೮೩ರಲ್ಲಿ ಇದರ ವಾಣಿಜ್ಯ ಸಾಮರ್ಥ್ಯವನ್ನು ಗುರುತಿಸಿದ ಜ್ಯಾಕ್ ಲಿಟಲ್ ಎಂಬ ಅಭಿಯಂತರ ಮ್ಯಾಟಲ್ಯಾಬನ ತಂತ್ರಾಂಶವನ್ನು ಭಾಷೆಯಲ್ಲಿ ಬರೆದು ಮ್ಯಾಥವರ್ಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. == ಪದಗಳ ಜೋಡಣೆ () == ಮ್ಯಾಟಲ್ಯಾಬನ್ನು ಮ್ಯಾಟಲ್ಯಾಬ ಭಾಷೆ ಸುತ್ತಲೂ ನಿರ್ಮಿಸಲಾಗಿದೆ. ಮ್ಯಾಟಲ್ಯಾಬಗೆ ಅದರದೇ ಆದ ಬರಹ (ಸ್ಕ್ರಿಪ್ಟ) ಹಾಗು ಕಾರ್ಯಗಳಿವೆ (ಫಂಕ್ಷನ). === ಅಸ್ಥಿರ () === ಅಸ್ಥಿರಗಳಿಗೆ = ಸಂಕೇತವನ್ನು ಬಳಸಿ ವ್ಯಾಖ್ಯಾನಿಸಬಹುದು. ಅಸ್ಥಿರಗಳ ರೀತಿಯನ್ನು ಗೊತ್ತಿರದೇ ಅವುಗಳನ್ನು ಘೋಷಿಸಬಹುದು. ಆಗ ಅವುಗಳು ಕೇವಲ ಸಾಂಕೇತಿಕ ವಸ್ತುಗಳಾಗಿ ಪರಿಗಣಿಸಲ್ಪಡುತ್ತವೆ. ಬರಹದಲ್ಲಿ ಅಸ್ಥಿರಗಳಿಗೆ ಬೇರೆಬೇರೆ ರೀತಿಯ ಬೆಲೆಯನ್ನು ನೀಡಬಹುದು. ಈ ಬೆಲೆಯು ಸಂಖ್ಯೆಯಾಗಿರಬಹುದು ಅಥವಾ ಪದಗಳಾಗಿರಬಹುದು ಅಥವಾ ಯಾವುದೊ ಕಾರ್ಯವಾಗಿರಬಹುದು.