ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳನ್ನು ಯಮವೆಂದು ಕರೆಯುತ್ತಾರೆ. ಈ ಯಮ ಮತ್ತು ನಿಯಮಗಳನ್ನು ಸಾರ್ವಭೌಮ ವ್ರತಗಳೆಂದು ಪತಂಜಲಿ ಯೋಗಶಾಸ್ತ್ರ ತಿಳಿಸುತ್ತದೆ. ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟುಮಾಡದಿರುವುದು. ಸತ್ಯವೆಂದರೆ ಇದ್ದುದನ್ನು ಇದ್ದ ಹಾಗೆಯೇ ತ್ರಿಕರಣಗಳಿಂದಲೂ ಸಾಧಿಸುವುದು. ಅಸ್ತೇಯವೆಂದರೆ ಯಾರಿಂದಲೂ ಏನನ್ನೂ ಕದಿಯದಿರುವುದು. ಬ್ರಹ್ಮಚರ್ಯವೆಂದರೆ ಜಿತೇಂದ್ರಿಯತೆ. ಅಪರಿಗ್ರಹವೆಂದರೆ ಯಾರಿಂದಲೂ ಏನನ್ನೂ ಸ್ವೀಕರಿಸದಿರುವುದು. == ಇವುಗಳನ್ನೂ ನೋಡಿ == ರಾಜಯೋಗ ಯೋಗ ಅಷ್ಟಾಂಗ ಯೋಗ