ಯಮನ್ (ಅರಬ್ಬಿ: اليمن ಆಂಗ್ಲ: ) ― ಅಧಿಕೃತವಾಗಿ ಯಮನ್ ಗಣರಾಜ್ಯ ( ). ಪಶ್ಚಿಮ ಏಷ್ಟಾದ ದೇಶ. ಇದು ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ. ಇದರ ಉತ್ತರದಲ್ಲಿ ಸೌದಿ ಅರೇಬಿಯಾ, ಈಶಾನ್ಯದಲ್ಲಿ ಒಮಾನ್, ಪಶ್ಚಿಮದಲ್ಲಿ ಕೆಂಪು ಸಮುದ್ರ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಮತ್ತು ಏಡನ್ ಕೊಲ್ಲಿಗಳಿವೆ. ಯಮನ್ ಮುಖ್ಯ ಭೂಭಾಗದ ಜೊತೆಗೆ ಸುಮಾರು ೨೦೦ ದ್ವೀಪಗಳನ್ನು ಸಹ ಹೊಂದಿದೆ. ಇದು ಅರೇಬಿಯನ್ ಪರ್ಯಾಯ ದ್ವೀಪದ ಏಕೈಕ ಗಣರಾಜ್ಯವಾಗಿದೆ.