ಯಶ್ (ನವೀನ್ ಕುಮಾರ್ ಗೌಡ ಜನ್ಮ ಹೆಸರು) ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು. ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ಅವರ ಎರಡನೆಯ ಚಿತ್ರವಾದ ಮೊಗ್ಗಿನ ಮನಸು (೨೦೦೮) ರಲ್ಲಿ, ಅವರು ರಾಧಿಕಾ ಪಂಡಿತ್ ವಿರುದ್ಧ ಪುರುಷ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಯಶಸ್ಸು ಗಳಿಸಿತು ಮತ್ತು ಅವರಿಗೆ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ಮೊದಲ ಸಲ(೨೦೧೦), ಕಿರಾತಕ (೨೦೧೧), ಡ್ರಾಮ (೨೦೧೨), ಗೂಗ್ಲಿ (೨೦೧೩), ರಾಜಾ ಹುಲಿ (೨೦೧೩), ಗಜಕೇಸರಿ (೨೦೧೪), ಮುಂತಾದ ಹಲವು ವಾಣಿಜ್ಯ ಯಶಸ್ಸಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಮಿ.ಮಿಸ್ಟರ್ ರಾಮಚಾರಿ (೨೦೧೪) ಮತ್ತು ಮಾಸ್ಟರ್ ಪೀಸ್.(೨೦೧೫) ೨೦೧೬ ಸಂತು ಸ್ಟ್ರೈಟ್ ಫಾರ್ವರ್ಡ್ (೨೦೧೮) ಕೆಜಿಎಫ್ ಚಾಪ್ಟರ್ ೧ (೨೦೨೧) ಕೆಜಿಎಫ್ ಚಾಪ್ಟರ್ ೨. ಕಿರಾತಕ, ನರ್ತನ್ ನಿರ್ದೇಶನದಲ್ಲಿ ಹೊಸ ಚಿತ್ರ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ. == ಆರಂಭಿಕ ಜೀವನ == ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳಿಗೆ ೮ ಜನವರಿ ೧೯೮೬ ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರಿಗೆ ನಂದಿನಿ ಎಂಬ ಹೆಸರಿನ ತಂಗಿ ಇದ್ದಾರೆ. ಅವರ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಹಾರಾಜ ಹೈಸ್ಕೂಲ್‌ನಲ್ಲಿ ಶಾಲಾಶಿಕ್ಷಣವನ್ನು ಪಡೆದು, ಬಾಲ್ಯದ ದಿನಗಳನ್ನು ಮೈಸೂರಿನ ಪಡವಾರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾಶಿಕ್ಷಣದ ನಂತರ, ಅವರು ನಾಟಕಕಾರ ಬಿ.ವಿ ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯನ್ನು ಸೇರಿದರು. ಯಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. == ವೈಯಕ್ತಿಕ ಜೀವನ == ಯಶ್ ತಮ್ಮ ಬಹುಕಾಲದ ಪ್ರೇಯಸಿ ರಾಧಿಕಾ ಪಂಡಿತ್ ಅನ್ನು ೨೦೧೬ ರಲ್ಲಿ ವಿವಾಹವಾದರು. ದಂಪತಿಗಳಿಗಿಬ್ಬರಿಗೆ ೨೦೧೮ ಡಿಸೆಂಬರ್ ೨ ರಲ್ಲಿ ಜನಿಸಿದ ಹೆಣ್ಣು ಮಗು ಮತ್ತು ೨೦೧೯ ಅಕ್ಟೋಬರ್ ೩೦‌‌ ರಲ್ಲಿ ಜನಿಸಿದ ಗಂಡು ಮಗನಿದ್ದಾನೆ. == ನಟನಾಗಿ == ಯಶ್ ಈಟಿವಿ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ ಗೋಕುಲ ಧಾರವಾಹಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅಂತಹ ಮಳೆಬಿಲ್ಲು ಮತ್ತು ಪ್ರೀತಿ ಇಲ್ಲದ ಮೇಲೆ ಹಾಗೂ ಇನ್ನೂ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಇವರು ಪ್ರಿಯಾ ಹಾಸನ್ ನಿರ್ದೇಶನದ ಜಂಭದ ಹುಡುಗಿ (೨೦೦೭) ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಅವನು ನಂದ ಗೋಕುಲ ಧಾರಾವಾಹಿಯ ಸಹನಟಿ ರಾಧಿಕಾ ಪಂಡಿತ್ ಜೊತೆ ಪೋಷಕ ಪಾತ್ರದಲ್ಲಿ, ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಅಭಿನಯಿಸಿದ್ದಾರೆ. ಅವರು ಇದರಲ್ಲಿನ ಅಭಿನಯಕ್ಕಾಗಿ ಪೋಷಕ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದರು. ಯಶ್ ನಂತರ ಚಿತ್ರಗಳಲ್ಲಿ ರಾಕಿ (೨೦೦೮), ಕಳ್ಳರ ಸಂತೆ (೨೦೦೯), ಗೋಕುಲ (೨೦೦೯) ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು. == ಮಾಧ್ಯಮ ಚಿತ್ರ == 2022 ರಲ್ಲಿ, ಯಶ್ ಸಂದರ್ಶನವೊಂದರಲ್ಲಿ ನಟ ವಿಜಯ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಆದರ್ಶಗಳಲ್ಲಿ ಒಬ್ಬರು ಎಂದು ಬಹಿರಂಗಪಡಿಸಿದರು. == ಚಲನಚಿತ್ರಗಳು == == ಕಿರುತೆರೆ ಧಾರಾವಾಹಿಗಳು == ನಂದ ಗೋಕುಲ (ಈಟಿವಿ) ಮಳೆಬಿಲ್ಲು (ಈಟಿವಿ) ಉತ್ತರಾಯಣ (ಉದಯ ಟಿವಿ) ಪ್ರೀತಿ ಇಲ್ಲದ ಮೇಲೆ (ಈಟಿವಿ) ಶಿವ (ಡಿಡಿ೯) == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==