ಯಾನೈಮಲೈ (ಎಲಿಫೆಂಟ್ ಹಿಲ್) ಭಾರತದ ತಮಿಳುನಾಡಿನ ಸಂರಕ್ಷಿತ ಸ್ಮಾರಕ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ.ಇದು ಜೈನ ಶಿಲ್ಪಗಳು, ಶೈವ ದೇವಾಲಯ ಮತ್ತು ವೈಷ್ಣವ ದೇವಾಲಯ ನರಸಿಂಗಂ ಯೋಗ ನರಸಿಂಹ ಪೆರುಮಾಳ್ ದೇವಾಲಯ ಇದೆ. == ವ್ಯುತ್ಪತ್ತಿ == ಬೆಟ್ಟದ ಹೆಸರು ತಮಿಳು ಪದ ಯಾನೈ ಅಂದರೆ ಆನೆ ಮತ್ತು ಮಲೈ ಅಂದರೆ ಬೆಟ್ಟ ದಿಂದ ಬಂದಿದೆ. ಈ ಬೆಟ್ಟವು ಆನೆಯು ಕುಳಿತ ಭಂಗಿಯಲ್ಲಿರುವಂತೆ ಕಾಣುತ್ತದೆ. ಈ ಸ್ಥಳವು ೨೦೦೦ ವರ್ಷಗಳಿಂದ ಈ ಹೆಸರನ್ನು ಹೊಂದಿದೆ. == ಸ್ಥಳ == ಯಾನೈಮಲೈ ಭಾರತದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿದೆ. ಇದು ಮಧುರೈ ಮಟ್ಟುತಾವನಿ ಬಸ್ ನಿಲ್ದಾಣದಿಂದ ೧೦ಕಿ.ಮೀ ದೂರದಲ್ಲಿದೆ. ಬೆಟ್ಟವು ೩ಕಿ.ಮೀ ಉದ್ದ ಮತ್ತು ೯೦ ಮೀ ಎತ್ತರ ಇದೆ. == ಬಗ್ಗೆ == ಯಾನೈಮಲೈ ಅನ್ನು ತಮಿಳು ಜೈನರು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಪಾಂಡ್ಯ ರಾಜವಂಶದ ಅವಧಿಯಲ್ಲಿ ಜೈನ ಸನ್ಯಾಸಿಗಳು ಇಲ್ಲಿ ವಾಸಿಸುತ್ತಿದ್ದರು. ಬೆಟ್ಟದ ತುದಿಯಲ್ಲಿ ಮಹಾವೀರ, ಗೋಮಟೇಶ್ವರ ಮತ್ತು ಜೈನ ಸನ್ಯಾಸಿಗಳು ವಿನ್ಯಾಸಗೊಳಿಸಿದ ಇತರ ತೀರ್ಥಂಕರರ ಜೈನ ಬಾಸ್ ಉಬ್ಬು ಶಿಲ್ಪಗಳನ್ನು ಹೊಂದಿರುವ ಗುಹೆಗಳನ್ನು ಕಾಣಬಹುದು. ಸನ್ಯಾಸಿಗಳು ವಿಶ್ರಾಂತಿಗಾಗಿ ಬಳಸುತ್ತಿದ್ದ ಕಲ್ಲಿನ ಹಾಸಿಗೆಗಳೂ ಇವೆ. ಬೆಟ್ಟದ ಮೇಲೆ ತಮಿಳು-ಬ್ರಾಹ್ಮಿ ಮತ್ತು ವಟ್ಟೆಲೆಟ್ಟು ಶಾಸನಗಳನ್ನು ಕಾಣಬಹುದು. ಎರಡು ಹಿಂದೂ ದೇವಾಲಯಗಳು ತಪ್ಪಲಿನಲ್ಲಿವೆ ಒಂದು ಲಾಡನ್ ಗುಹೆ ದೇವಾಲಯ (ಲಡಾನ್ ಕೊಯಿಲ್), ಮುರುಗನಿಗೆ ಸಮರ್ಪಿತವಾದ ಶೈವ ದೇವಾಲಯ ಮತ್ತು ಇನ್ನೊಂದು ಯೋಗ ನರಸಿಂಹ ದೇವಾಲಯ, ವಿಷ್ಣುವಿಗೆ ಸಮರ್ಪಿತವಾದ ವೈಷ್ಣವ ದೇವಾಲಯ. ಇವೆರಡೂ ೮ನೇ ಶತಮಾನಕ್ಕೆ ಸೇರಿದ ಪಾಂಡ್ಯರು ನಿರ್ಮಿಸಿದ ಬಂಡೆಯಿಂದ ಕತ್ತರಿಸಿದ ದೇವಾಲಯಗಳಾಗಿವೆ. ಉಗ್ರ ನರಸಿಂಹ ದೇವಾಲಯವಿರುವ ಸ್ಥಳವನ್ನು ನರಸಿಂಗಂ ಎಂದು ಕರೆಯಲಾಗುತ್ತದೆ. ದೇವಾಲಯಗಳಲ್ಲಿನ ತಮಿಳು-ಬ್ರಾಹ್ಮಿ ಮತ್ತು ವಟ್ಟೆಲೆಟ್ಟು ಶಾಸನಗಳು ಅವುಗಳ ಇತಿಹಾಸವನ್ನು ತೋರಿಸುತ್ತವೆ. ಜೈನ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಬೆಟ್ಟವು ಗ್ರಾನೈಟ್‌ನಿಂದ ಸಮೃದ್ಧವಾಗಿದೆ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯಿಂದ ಹಾನಿಯಾಗಿದೆ. ೨೦೧೦ ರಲ್ಲಿ ತಮಿಳುನಾಡು ಸರ್ಕಾರವು ಬೆಟ್ಟದ ಮೇಲೆ ಶಿಲ್ಪಕಲಾ ಉದ್ಯಾನವನ್ನು ಸ್ಥಾಪಿಸಲು ಪ್ರಯತ್ನಿಸಿತು ಆದರೆ ಸ್ಥಳೀಯರು ಮತ್ತು ಕಾರ್ಯಕರ್ತರು ಈ ಕಲ್ಪನೆಯನ್ನು ವಿರೋಧಿಸಿದ ನಂತರ ಈ ಕಾರ್ಯ ಸ್ಥಗಿತಗೊಂಡಿತು. == ಗ್ಯಾಲರಿ == == ಉಲ್ಲೇಖಗಳು ==