ಮ್ಯಾಡಾಕ್ ಅತೀಂದ್ರಿಯ ಬ್ರಹ್ಮಾಂಡ ಅನ್ನೋದು ಒಂದು ಕಾಲ್ಪನಿಕ ಬ್ರಹ್ಮಾಂಡ. ಇದನ್ನು ಹಿಂದಿ ಭಾಷೆಯ ಅಲೌಕಿಕ ಹಾಸ್ಯ ಮತ್ತು ಭಯಾನಕ ಕತೆಗಳ ಚಲನಚಿತ್ರಗಳಲ್ಲಿ ಬಳಸಲಾಗಿದೆ . ಅಮರ್ ಕೌಶಿಕ್ ನಿರ್ದೇಶನದ ಮತ್ತು ರಾಜ್ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟಿಸಿದ ಸ್ಟ್ರೀ ಚಿತ್ರದ ಬಿಡುಗಡೆಯೊಂದಿಗೆ ಚಲನಚಿತ್ರ ಸರಣಿಯು 2018 ರಲ್ಲಿ ಪ್ರಾರಂಭವಾಯಿತು. 2021 ರಲ್ಲಿ ಜಾನ್ವಿ ಕಪೂರ್ ಮತ್ತು ರಾವ್ ನಟಿಸಿದ ರೂಹಿ, ಮತ್ತು 2022 ರಲ್ಲಿ ವರುಣ್ ಧವನ್ ಮತ್ತು ಕೃತಿ ಸನೊನ್ ನಟಿಸಿದ ಭೇಡಿಯಾ ಚಲನಚಿತ್ರದ ಮೂಲಕ ಮುಂದುವರಿದವು. ಭೇಢಿಯಾ ಚಿತ್ರವು ಅರುಣಾಚಲ ಪ್ರದೇಶದ ದಂತಕತೆಗಳಲ್ಲಿರುವ ಆಕಾರವನ್ನು ಬದಲಾಯಿಸುವ ತೋಳ (ಯಪುಮ್) ಇಂದ ಪ್ರೇರಣೆ ಪಡೆದಿದೆ. ಇವು ಸ್ಥಳೀಯ ಕಾಡುಗಳನ್ನು ರಕ್ಷಿಸಲು ಪ್ರಯತ್ನಿಸುತ್ತವೆ. ಅವು ಕಾಡುಗಳ ರಕ್ಷಣೆಗಾಗಿ ಯಾರನ್ನಾದರೂ ಕೊಲ್ಲಬೇಕಾಗಿದ್ದರೂ ಸಹ ಹಿಂದೂ ಮುಂದೂ ನೋಡುವುದಿಲ್ಲ. ಭೇಡಿಯಾ ಚಿತ್ರದಲ್ಲಿ ವರುಣ್ ಧವನ್ ಅವರ ಭಾಸ್ಕರ್ ಪಾತ್ರವು ತೋಳವಾಗಿ ರೂಪಾಂತರಗೊಳ್ಳುತ್ತದೆ. ಈ ಯಪುಮ್ ಫ್ರ್ಯಾಂಚೈಸ್ ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು, ಒಟ್ಟು ₹ 94 ಕೋಟಿ ಬಜೆಟ್ನ ಹೂಡಿಕೆಗೆ ₹ 300 ಕೋಟಿ ಗಳಿಸಿದೆ. ಫ್ರ್ಯಾಂಚೈಸ್ನ ಚಿತ್ರಗಳು ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. == ಅವಲೋಕನ == === ಸ್ಟ್ರೀ (2018) === ಹಬ್ಬಗಳ ಸಮಯದಲ್ಲಿ ಸ್ಟ್ರೀ ಪುರುಷರ ಮೇಲೆ ದಾಳಿ ಮಾಡುವ ಮಹಿಳೆಯ ಆತ್ಮವಾದ ಸ್ತ್ರೀ ಎಂಬ ಆತ್ಮದ ಬಗ್ಗೆ ಚಂದೇರಿ ಗ್ರಾಮದ ಜನರು ನಿರಂತರ ಭಯದಿಂದ ಬದುಕುತ್ತಾರೆ. ವಿಕ್ಕಿ ತನ್ನ ಸ್ನೇಹಿತರೊಂದಿಗೆ ಈ ರಹಸ್ಯವನ್ನು ಬಿಚ್ಚಿಡಲು ನಿರ್ಧರಿಸುತ್ತಾನೆ. === ರೂಹಿ (2021) === ತನ್ನ ಕಕ್ಷಿದಾರನಿಗೆ ಅವಳನ್ನು ಮದುವೆ ಮಾಡಲು ಬಯಸುವ ಗುನಿಯಾ ಭಾಯ್ ಅವರ ಆದೇಶದ ಮೇರೆಗೆ ಭಾವ್ರಾ ಮತ್ತು ಕಟ್ಟನ್ನಿ ರೂಹಿಯನ್ನು ಅಪಹರಿಸುತ್ತಾರೆ. ಆದರೆ ರೂಹಿಯ ಶರೀರರಲ್ಲಿ ರಾಕ್ಷಸ ಇದ್ದಾನೆ ಎಂದು ಅವರು ಅರಿತುಕೊಂಡಾಗ ಕತೆ ವಿಪರೀತ ತಿರುವು ಪಡೆಯುತ್ತವೆ. === ಭೇಡಿಯಾ (2022) === ಭೇಡಿಯಾ ರಸ್ತೆ ನಿರ್ಮಾಣ ಗುತ್ತಿಗೆದಾರ ಭಾಸ್ಕರ್ ನ ಕಥೆಯ ಸುತ್ತ ಸುತ್ತುತ್ತದೆ. ಅವನು ತೋಳ(ಯಾಪುವ್)ಆಗಿ ರೂಪಾಂತರಗೊಳ್ಳುತ್ತಾನೆ. ಕಥೆಯು ಜನಪ್ರಿಯ ಜಾನಪದ ಕಥೆಗಳಲ್ಲಿ ತನ್ನ ಬೇರುಗಳನ್ನು ಹೊಂದಿದೆ ಮತ್ತು ಅರುಣಾಚಲ ಪ್ರದೇಶ ಪೌರಾಣಿಕ ಕಥೆಗಳಿಂದ ಸ್ಫೂರ್ತಿ ಪಡೆದಿದೆ. ಅರುಣಾಪ್ರದೇಶದಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಲಾಗಿದೆ. == ಈ ಸರಣಿಯ ಚಲನಚಿತ್ರಗಳು == === ಸ್ಟ್ರೀ (2018) === ಸರಣಿಯ ಮೊದಲ ಕಂತು ನಿಜ ಜೀವನದ ಘಟನೆಗಳನ್ನು ಕೇಂದ್ರೀಕರಿಸುತ್ತದೆ. ಹಬ್ಬಗಳ ಸಮಯದಲ್ಲಿ ರಾತ್ರಿ ಪುರುಷರ ಮೇಲೆ ದಾಳಿ ಮಾಡುವ ಮಹಿಳೆಯ ಆತ್ಮವಾದ ಸ್ತ್ರೀ ಬಗ್ಗೆ ಚಂದೇರಿಯ ಜನರು ನಿರಂತರ ಭಯದಿಂದ ಬದುಕುತ್ತಾರೆ. ವಿಕ್ಕಿ ತನ್ನ ಸ್ನೇಹಿತರೊಂದಿಗೆ ರಹಸ್ಯವನ್ನು ಬಿಚ್ಚಿಡಲು ನಿರ್ಧರಿಸುತ್ತಾನೆ. 1990ರ ದಶಕದಲ್ಲಿ ಕರ್ನಾಟಕ ವೈರಲ್ ಆದ ನಗರ ದಂತಕಥೆ "ನಾಳೆ ಬಾ". ಮಾಟಗಾತಿ ರಾತ್ರಿಯಲ್ಲಿ ಬೀದಿಗಳಲ್ಲಿ ತಿರುಗಿ ಬಾಗಿಲನ್ನು ತಟ್ಟುತ್ತಾಳೆ ಎಂಬ ದಂತಕಥೆ ಇದೆ. ಹಾಗಾಗಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಗೋಡೆಗಳ ಮೇಲೆ "ನಾಳೆ ಬಾ" ಎಂದು ಬರೆದಿರುವುದು ಈಗಲೂ ಕಂಡುಬರುತ್ತದೆ . ಸ್ತ್ರೀ 30 ಆಗಸ್ಟ್ 2018 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು 31 ಆಗಸ್ಟ್ 2018 ರಂದು ಭಾರತದಲ್ಲಿ ಬಿಡುಗಡೆಯಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ವಿಶ್ವಾದ್ಯಂತ ₹180 ಕೋಟಿ ಗಳಿಸಿತು ಆದರೆ ಬಜೆಟ್ ₹14 ಕೋಟಿ ಆಗಿತ್ತು. === ರೂಹಿ (2021) === ಮುಡಿಯಪೈರಿಯ ಮೂಲವನ್ನು ಕೇಂದ್ರೀಕರಿಸಿದ ಈ ಚಿತ್ರ ಮೊದಲ ಚಿತ್ರದಿಂದ ಸ್ವಲ್ಪ ತಿರುವನ್ನು ಪಡೆದ ಚಿತ್ರ ಮತ್ತು ಈ ಸರಣಿಯ ಎರಡನೇ ಚಿತ್ರ. ಕಥಾವಸ್ತುವು ಭಾವ್ರಾ ಮತ್ತು ಕಟ್ಟಣ್ಣಿಯ ಮೇಲೆ ಕೇಂದ್ರೀಕೃತವಾಗಿದ್ದು ತನ್ನ ಕಕ್ಷಿದಾರನಿಗೆ ಅವಳನ್ನು ಮದುವೆ ಮಾಡಲು ಬಯಸುವ ಗುನಿಯಾ ಭಾಯ್ ಅವರ ಆದೇಶದ ಮೇರೆಗೆ ರೂಹಿಯನ್ನು ಅಪಹರಿಸುತ್ತಾನೆ. ಆದರೆ ರೂಹಿಯ ಶರೀರದಲ್ಲಿ ರಾಕ್ಷಸ (ಮುಡಿಯಪೈರಿ) ಇದ್ದಾನೆ ಎಂದು ಅವರು ಅರಿತುಕೊಂಡಾಗ ವಿಷಯಗಳು ತಿರುವು ಪಡೆಯುತ್ತವೆ. ಈ ಚಿತ್ರವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ ಮತ್ತು ದಿನೇಶ್ ವಿಜನ್, ಮೃಗದೀಪ್ ಸಿಂಗ್ ಲಂಬಾ ನಿರ್ಮಿಸಿದ್ದಾರೆ. 2021ರ ಮಾರ್ಚ್ 11ರಂದು ಬಿಡುಗಡೆಯಾದ ರೂಹಿ, ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಒಂದು ತಿಂಗಳ ನಂತರ ಏಪ್ರಿಲ್ 8ರಂದು ಜಿಯೋಸಿನೇಮಾದಲ್ಲಿ ಬಿಡುಗಡೆಯಾಯಿತು ಮತ್ತು ಮರುದಿನ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು. === ಭೇಡಿಯಾ (2022) === ಭೇಡಿಯಾ ಈ ಕಥಾಸರಣಿಯಲ್ಲಿ ಮತ್ತೊಂದು ತಿರುವು ಪಡೆದ ಚಿತ್ರ ಮತ್ತು ಈ ಸರಣಿಯ ಮೂರನೇ ಕಂತು. ವರುಣ್ ಧವನ್, ಕೃತಿ ಸನೊನ್ ಮತ್ತು ದೀಪಕ್ ಡೊಬ್ರಿಯಾಲ್ ನಟಿಸಿದ ಈ ಚಿತ್ರವು 2022ರ ನವೆಂಬರ್ 25ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಅರುಣಾಚಲ ಪ್ರದೇಶದ ಪ್ರದೇಶಗಳಾದ ಜಿರೋ (ಲೋವರ್ ಸುಬನ್ಸಿರಿ ಸಾಗಲೀ) ಮತ್ತು ಸಾಗಲಿ(ಪಾಪುಮ್ ಪಾರೆ) ಜಿಲ್ಲೆಯ ಕೆಲವು ಭಾಗಗಳಲ್ಲಿ 2021ರ ಮಾರ್ಚ್ನಿಂದ ಏಪ್ರಿಲ್ ವರೆಗೆ ಎರಡು ತಿಂಗಳ ಅವಧಿಯಲ್ಲಿ ಚಿತ್ರೀಕರಣ ನಡೆಯಿತು. ಭೇಡಿಯಾದಲ್ಲಿನ ಶೇಕಡಾ 70ಕ್ಕೂ ಹೆಚ್ಚು ಕಲಾವಿದರು ಅರುಣಾಚಲ ಪ್ರದೇಶದವರು.ಅರುಣಾಚಲ ಪ್ರದೇಶದಲ್ಲಿನ ಚಿತ್ರೀಕರಣ 19 ಏಪ್ರಿಲ್ 2021 ರಂದು ಪೂರ್ಣಗೊಂಡಿತು. ಈ ಚಲನಚಿತ್ರವು 10 ಜುಲೈ 2021 ರಂದು ಪೂರ್ಣಗೊಂಡಿತು. ಅಭಿಷೇಕ್ ಬ್ಯಾನರ್ಜಿ ಅವರು ಸ್ಟ್ರೀ (2018) ಚಿತ್ರದಲ್ಲಿನ ಜಾನಾ ಪಾತ್ರವನ್ನು ಭಾಸ್ಕರ್ ಅವರ ಸೋದರಸಂಬಂಧಿಯಾಗಿ ಪುನರಾವರ್ತಿಸಿದ್ದಾರೆ. ಸ್ತ್ರೀ ಚಿತ್ರದಲ್ಲಿನ ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್ ಮತ್ತು ಅಪಾರಶಕ್ತಿ ಖುರಾನಾ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಲ್ಲರೂ ಸ್ತ್ರೀ ಚಿತ್ರದ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಾರೆ. == ಮುಂಬರುವ ಚಿತ್ರಗಳು == === ಸ್ಟ್ರೀ 2 (2024) === ಈ ಸ್ಟ್ರೀ ನಾಲ್ಕನೇ ಕಂತು, ಮತ್ತು ಸ್ತ್ರೀ ಚಿತ್ರದ ಮುಂದಿನ ಭಾಗವೂ ಆಗಿದೆ. ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜನ್ ನಿರ್ಮಿಸಿದ್ದು ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಅಪಾರಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭೇಡಿಯಾ ಚಿತ್ರದ ಭಾಸ್ಕರ್ ಪಾತ್ರವನ್ನು ಪುನರಾವರ್ತಿಸುವ ಅತಿಥಿ ಪಾತ್ರದಲ್ಲಿ ವರುಣ್ ಧವನ್ ಸಹ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ಈ ಚಿತ್ರವು ಆಗಸ್ಟ್ 31,2024ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದರು. == ಪಾತ್ರವರ್ಗ ಮತ್ತು ಪಾತ್ರಗಳನ್ನು ಪುನರಾವರ್ತಿಸುವುದು == ಈ ಕೋಷ್ಟಕವು ಮ್ಯಾಡಾಕ್ ಅತೀಂದ್ರಿಯ ವಿಶ್ವದಲ್ಲಿ ಕಾಣಿಸಿಕೊಳ್ಳುವ ಮುಖ್ಯ ಪಾತ್ರಗಳನ್ನು ವರ್ಣಮಾಲೆಯ ಕ್ರಮದಲ್ಲಿ ಪಾತ್ರದ ಕೊನೆಯ ಹೆಸರಿನಿಂದ ಪಟ್ಟಿ ಮಾಡುತ್ತದೆ. == ಹೆಚ್ಚುವರಿ ಸಿಬ್ಬಂದಿ ಮತ್ತು ಉತ್ಪಾದನಾ ವಿವರಗಳು == == ಸ್ವಾಗತ == === ಸ್ಟ್ರೀ (2018) === ನ್ಯೂಸ್ 18 ರ ರಾಜೀವ್ ಮಸಂದ್ ಚಿತ್ರಕ್ಕೆ 5ರಲ್ಲಿ 4 ಅಂಕಗಳನ್ನು ನೀಡಿದರು. "ಸ್ತ್ರೀ ವಿಶೇಷವಾಗಿ ಮನರಂಜನೆ, ವಿನೋದ ಮತ್ತು ಉತ್ತಮ ಪಾತ್ರವರ್ಗದಿಂದ ತುಂಬಿದೆ. ಇದು ಈ ವರ್ಷದ ಅತ್ಯಂತ ಒಳ್ಳೆಯ ಚಲನಚಿತ್ರಗಳಲ್ಲಿ ಒಂದಾಗಿದೆ. ಹಾಗಾಗಿ ಆ ಚಿತ್ರವನ್ನು ನೋಡಲು ನೀವು ಸಮಯವನ್ನು ಮಾಡಿಕೊಳ್ಳಿ ಎಂದು ನಾನು ಶಿಫಾರಸು ಮಾಡುತ್ತೇನೆ" ಎಂದು ಬರೆದರು. ಟೈಮ್ಸ್ ಆಫ್ ಇಂಡಿಯಾದ ರಚಿತ್ ಗುಪ್ತಾ 5ರಲ್ಲಿ 4 ಅನ್ನು ನೀಡಿದರು. ಇವರು ಅತ್ಯುತ್ತಮ ಬರವಣಿಗೆ ಮತ್ತು ಸಂಭಾಷಣೆಗಳನ್ನು ಗಮನಿಸಿದರು, ಆದರೆ ಚಿತ್ರವು ಸ್ವಲ್ಪ ಹೆಚ್ಚು ಉದ್ದವಾಗಿದೆ ಮತ್ತು ಕೆಲವು 'ಅಸ್ಪಷ್ಟ ಆಲೋಚನೆಗಳನ್ನು' ಹೊಂದಿದೆ ಎಂದು ಭಾವಿಸಿದರು. ' ಹಿಂದೂಸ್ತಾನ್ ಟೈಮ್ಸ್ ರಾಜಾ ಸೇನ್ ಇದಕ್ಕೆ 5ರಲ್ಲಿ 4 ಅಂಕಗಳನ್ನು ನೀಡಿ, ನಟನಾ ಶಕ್ತಿ ಮತ್ತು ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದರು ಆದರೆ ಅವಸರದ-ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಮಧ್ಯಮ ಧ್ವನಿಯನ್ನು ಹೊಂದಿದ್ದರು. ಇಲ್ಲಿನ "ನಗುಗಳು ಅಸಮಂಜಸವಾಗಿವೆ, ಮತ್ತು ಕಥಾವಸ್ತುವಿನ ಆಳ ಮತ್ತು ಅವಸರದ ಅನುಭವವಾಗುತ್ತದೆ. ಆಲೋಚನೆಗಳು ಚೆನ್ನಾಗಿವೆ, ಆದರೆ ಬರವಣಿಗೆಯನ್ನು ಉತ್ತಮವಾಗಿಸಬೇಕಿತ್ತು " ಎಂದು ಇವರು ಅಭಿಪ್ರಾಯ ಪಡುತ್ತಾರೆ === ರೂಹಿ (2021) === ರೂಹಿ ವಿಮರ್ಶಕರಿಂದ ಸಾಮಾನ್ಯವಾಗಿ ನಕಾರಾತ್ಮಕ ಮತ್ತು ಸರಾಸರಿ ವಿಮರ್ಶೆಗಳನ್ನು ಪಡೆಯಿತು. ರೊಟನ್ ಟೊಮ್ಯಾಟೋಸ್ನಲ್ಲಿ ಇದು 10 ವಿಮರ್ಶಕರ ವಿಮರ್ಶೆಗಳ ಆಧಾರದ ಮೇಲೆ 10% ಅನುಮೋದನೆಯ ರೇಟಿಂಗ್ ಅನ್ನು ಹೊಂದಿದೆ. ಟೈಮ್ಸ್ ಆಫ್ ಇಂಡಿಯಾ ಇದಕ್ಕೆ 5ಕ್ಕೆ 3.5 ಸ್ಟಾರ್ ರೇಟಿಂಗ್ ನೀಡಿ, "ರೂಹಿ ಹಾಸ್ಯ ಮತ್ತು ರೋಮಾಂಚನಗಳ ಒಂದು ಮನರಂಜನಾ ಮಿಶ್ರಣವಾಗಿದೆ" ಎಂದು ಹೇಳಿದೆ. ಕೊಯ್ಮೊಯಿ ಉಮೇಷ್ ಪುನ್ವಾನಿ ಈ ಚಿತ್ರಕ್ಕೆ 2.5/5 ರೇಟಿಂಗ್ ನೀಡಿದರು ಮತ್ತು "ರೂಹಿ ತನ್ನದೇ ಆದ ಕ್ಷಣಗಳನ್ನು ಹೊಂದಿದೆ, ಆದರೆ ಒಟ್ಟಾರೆಯಾಗಿ ಇದನ್ನು ಮನರಂಜನಾ ಉತ್ಪನ್ನವೆಂದು ಲೇಬಲ್ ಮಾಡಲು ಅವು ಬಹಳ ಕಡಿಮೆ. ನಟನಾ ವಿಭಾಗವು ಹೊಳೆಯುತ್ತದೆ, ಮತ್ತು ಇತರರು ಕೆಟ್ಟದರಿಂದ ಮಧ್ಯಮ ಒಳ್ಳೆಯದರ ನಡುವೆ ಉಳಿದಿದ್ದಾರೆ" ಎಂದು ಹೇಳಿದರು. ಹಿಂದೂಸ್ತಾನ್ ಟೈಮ್ಸ್ ಮೋನಿಕಾ ರಾವಲ್ ಕುಕ್ರೇಜಾ ಅವರು ರೂಹಿ ಅನ್ನು "ಸುರುಳಿಯಾಕಾರದ ಚಿತ್ರ" ಎಂದು ಬಣ್ಣಿಸಿದ್ದಾರೆ. ಚಲನಚಿತ್ರದಲ್ಲಿನ ರಾವ್ ಮತ್ತು ಶರ್ಮಾ ಅವರ ಸಮೀಕರಣವನ್ನು ಶ್ಲಾಘಿಸಿದರು ಆದರೆ ಕಪೂರ್ ಅವರ ಅಭಿನಯವನ್ನು ಸರಾಸರಿ ಎಂದು ಕರೆಯುವ ಮೂಲಕ ಟೀಕಿಸಿದರು. === ಭೇಡಿಯಾ (2022) === ಭೇಡಿಯಾ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಎಬಿಪಿ ನ್ಯೂಸ್ ಅಮನ್ದೀಪ್ ನಾಂಗ್ ಈ ಚಿತ್ರಕ್ಕೆ 5ರಲ್ಲಿ 4 ಸ್ಟಾರ್ಗಳನ್ನು ನೀಡಿ, "ಭೇಡಿಯಾ ಒಂದು ಭಯಾನಕ-ಹಾಸ್ಯದ ಹುಚ್ಚು ಸವಾರಿಯಾಗಿದ್ದು, ಇದು ರಿಮೇಕ್ಗಳು, ಥ್ರಿಲ್ಲರ್ಗಳು ಮತ್ತು ಅವಧಿಯ ನಾಟಕಗಳ ಪ್ರಸ್ತುತ ವಾತಾವರಣದಲ್ಲಿ ವಿಭಿನ್ನವಾಗಿದೆ" ಎಂದು ಬರೆದಿದ್ದಾರೆ. ಬಾಲಿವುಡ್ ಹಂಗಾಮಾ ಈ ಚಿತ್ರಕ್ಕೆ 5ಕ್ಕೆ 3.5 ಸ್ಟಾರ್ ರೇಟಿಂಗ್ ನೀಡಿತು ಮತ್ತು "ಭೇಡಿಯಾ ತನ್ನ ಹೊಸ ಕಲ್ಪನೆ, ಸ್ಮರಣೀಯ ಅಭಿನಯ, ಆಕರ್ಷಕ ಕ್ಲೈಮ್ಯಾಕ್ಸ್ ಮತ್ತು ವಿಎಫ್ಎಕ್ಸ್ನಿಂದಾಗಿ ಕೆಲಸ ಮಾಡುತ್ತದೆ" ಎಂದು ಬರೆದಿದೆ. ಟೈಮ್ಸ್ ಆಫ್ ಇಂಡಿಯಾ ಧವಲ್ ರಾಯ್ ಈ ಚಲನಚಿತ್ರವನ್ನು 5ಕ್ಕೆ 3.5 ನಕ್ಷತ್ರಗಳೆಂದು ರೇಟ್ ಮಾಡಿದರು ಮತ್ತು "ನಿರ್ದೇಶಕ ಅಮರ್ ಕೌಶಿಕ್ ತಮ್ಮ ಇತ್ತೀಚಿನ ಪ್ರವಾಸದಲ್ಲಿ ಎರಡೂ ಪ್ರಕಾರಗಳನ್ನು ಕೌಶಲ್ಯದಿಂದ ನಿರ್ವಹಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಬೆನ್ನೆಲುಬು ತಣ್ಣಗಾಗುವ, ಬಹುತೇಕ ಎಲ್ಲದರಲ್ಲೂ ಪಕ್ಕೆಲುಬು-ಚುಚ್ಚುವ ಮತ್ತು ನಿಮಗೆ ಯೋಚಿಸಲು ಏನನ್ನಾದರೂ ಬಿಟ್ಟುಹೋಗುವ ಚಲನಚಿತ್ರವನ್ನು ನೀಡಲು ಪ್ರಯತ್ನಿಸಿದ್ದಾರೆ" ಎಂದು ಬರೆದಿದ್ದಾರೆ. ಫಸ್ಟ್ ಪೋಸ್ಟ್ನ ಅನ್ನಾ ಎಂ. ಎಂ. ವೆಟ್ಟಿಕಾಡ್ ಇದನ್ನು 5 ರಲ್ಲಿ 2.5 ನಕ್ಷತ್ರಗಳೆಂದು ರೇಟಿಂಗ್ ನೀಡಿದರು ಮತ್ತು ಬರೆದಿದ್ದಾರೆ, "ಭೇಡಿಯಾ ಈ ಜಗತ್ತಿನಲ್ಲಿ ಸಾಮಾಜಿಕ ಗುಂಪುಗಳ ಪಾತ್ರಗಳನ್ನು ವಾಸ್ತವಿಕವಾಗಿ ಬದಿಗಿಟ್ಟ ಮೊದಲ ಚಿತ್ರವಲ್ಲ, ಆ ಸಮುದಾಯಗಳ ಬಗ್ಗೆ ಹೇಳಲಾಗುತ್ತದೆಯಾದರೂ... ವಿಶ್ವದ ಎಲ್ಲಾ ಉದಾತ್ತ ಉದ್ದೇಶಗಳು ಮತ್ತು ಅಭಿಷೇಕ್ ಬ್ಯಾನರ್ಜಿಯವರ ಹಾಸ್ಯ ಪ್ರತಿಭೆ ಸಹ ಅಂತಹ ಬುದ್ಧಿಹೀನತೆಯನ್ನು ಸರಿದೂಗಿಸಲು ಸಾಧ್ಯವಿಲ್ಲ" ಎನ್ನುತ್ತಾರೆ == ಬಾಕ್ಸ್ ಆಫೀಸ್ == ಟೈಮ್ಸ್ ಪ್ರಕಾರ, ಈ ಫ್ರ್ಯಾಂಚೈಸ್ ತನ್ನ ಲಾಭಕ್ಕಾಗಿ ಗಮನಾರ್ಹವಾಗಿದೆ, ಸ್ಟ್ರೀ ಮತ್ತು ಅದರ ನಂತರ ಬಂದ ಚಿತ್ರಗಳು ಒಟ್ಟು ₹300 ಕೋಟಿ ಗಳಿಸಿದೆ. == ಇದನ್ನೂ ನೋಡಿ == ವೈಆರ್ಎಫ್ ಸ್ಪೈ ಯೂನಿವರ್ಸ್ ಕಾಪ್ ಯೂನಿವರ್ಸ್ < ="">ಧೂಮ್</> (ಫ್ರ್ಯಾಂಚೈಸ್) < ="">ರೇಸ್</> (ಚಲನಚಿತ್ರ ಸರಣಿ) < ="">ಬಾಘಿ</> (ಚಲನಚಿತ್ರ ಸರಣಿ) == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == @ ಐ ಎಮ್ ಡಿ ಬಿ @ ಐ ಎಮ್ ಡಿ ಬಿ @ ಐ ಎಮ್ ಡಿ ಬಿ