ಯೂರಿಪ್ಟರಿಡ ಎಂಬುದು ಆರ್ತ್ರಾಪೊಡ ವಿಭಾಗದ ಅರ‍್ಯಾಕ್ನಿಡ ವರ್ಗಕ್ಕೆ ಸೇರಿದ ಗತವಂಶಿ ಜೀವಿಗಳ ಗಣ. ಸೈಲ್ಯೂರಿಯನ್ ಕಾಲದಲ್ಲಿ ಇವು ಜೀವಿಸಿದ್ದುವೆನ್ನಲಾಗಿದೆ. ತಮ್ಮ ದೇಹದಲ್ಲಿರುವ ಖಂಡಗಳ ಸಂಖ್ಯೆಯಲ್ಲೂ ಜೋಡಣೆಯಲ್ಲೂ ಇವು ಆಧುನಿಕ ಚೇಳುಗಳನ್ನು ಹೋಲುತ್ತವಾದರೂ ಚೇಳುಗಳು ನೆಲದ ಮೇಲೆ ಮತ್ತು ಒಳಗೆ ವಾಸಿಸುವಂಥವು. ಈ ಗುಂಪಿನ ಜೀವಿಗಳು ಜಲವಾಸಿಗಳಾಗಿದ್ದವು. ಈ ಗಣದಲ್ಲಿ ಯೂರಿಪ್ಟರಸ್, ಟೆರಿಗೋಟಸ್, ಸ್ಲಿಮೋನಿಯ ಮತ್ತು ಸೈಲನ್ಯೂರ ಎಂಬ ಮುಖ್ಯ ಜಾತಿಗಳುಂಟು. ಆರ್ತ್ರಾಪೊಡ ಗುಂಪಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಈ ಗಣದ ಸದಸ್ಯಗಳೇ ಅತ್ಯಂತ ದೊಡ್ಡ ಗಾತ್ರವೆನ್ನಲಾಗಿದೆ. ಟೆರಿಗೋಟಸ್ ಸು 2 ಮೀ ಉದ್ದವಿತ್ತಲೆನ್ನಲಾಗಿದೆ. == ದೇಹರಚನೆ == ದೇಹ ಅನೇಕ ಉಂಗುರ/ಖಂಡಗಳಿಂದ ರಚಿತವಾಗಿದ್ದು ಪ್ರೋಸೋಮ (ತಲೆ), ಮೀಸೊಸೋಮಾ (ಎದೆ) ಮತ್ತು ಮೆಟಸೋಮ (ಕಿಬ್ಬೊಟ್ಟೆ) ಎಂಬ ಮೂರು ಪ್ರಧಾನ ಭಾಗಗಳನ್ನು ಪಡೆದಿದೆ. ತಲೆಯಲ್ಲಿ ಬಾಯಿ, ಸಂಯುಕ್ತ ಹಾಗೂ ಸರಳ ರೀತಿಯ ಕಣ್ಣು, ಆಹಾರವನ್ನು ಹಿಡಿಯಲು ಅನುಕೂಲವಾಗುವ ಚೆಲಿಸೆರಿ, ಕಾಲುಗಳು ಮತ್ತು ಈಜಲು ಅನುಕೂಲವಾಗಿರುವ ದೋಣಿ ಹುಟ್ಟಿನಂಥ ರಚನೆಗಳಿವೆ. ಎದೆ ಭಾಗದಲ್ಲಿ ಜನನೇಂದ್ರಿಯ ಮತ್ತು ಎಲೆಯಾಕಾರದ ಕಿವಿರುಗಳಿವೆ. ಕಿಬ್ಬೊಟ್ಟೆ ಉದ್ದಬಾಲದಂತೆ ಇದ್ದು ತುದಿಯಲ್ಲಿ ಟೆಲ್ಸನ್ ಎಂಬ ಕೊಂಡಿಯನ್ನು ಪಡೆದಿದೆ. ಯೂರಿಪ್ಟರಿಸ್ ಮತ್ತು ಟೆರಿಗೋಟಸ್ ಜಾತಿಯ ಪ್ರಾಣಿಗಳಲ್ಲಿ ಟೆಲ್ಸನ್ ಈಜುವುದಕ್ಕೂ ಸಮುದ್ರ ತಳದ ಮಣ್ಣನ್ನು ಕೊರೆಯುವುದಕ್ಕೂ ಸಹಾಯಕವಾಗಿತ್ತು. ಈ ಗುಂಪಿನ ಪ್ರಾಣಿಗಳು ಚೇಳುಗಳ ಪೂರ್ವಜಗಳಾಗಿದ್ದು ಇವುಗಳಿಂದ ಚೇಳುಗಳು ವಿಕಾಸಗೊಂಡವೆನ್ನಲಾಗಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == .. – .