ಯೆರ್ಕಾಡ್ ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟಗಳ ಶೆವರಾಯ್ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟದ ಮೇಲೆ ೧೫೧೫ ಮೀಟರ್ ಎತ್ತರದಲ್ಲಿ ಸ್ಥಿತವಾಗಿದೆ. ಯೆರ್ಕಾಡ್‍ನಲ್ಲಿನ ಸೆರ್ವರಾಯನ್ ದೇವಸ್ಥಾನವು ಅತಿ ಎತ್ತರದ ಬಿಂದುವಾಗಿದೆ. ಯೆರ್ಕಾಡ್ ತಾಲ್ಲೂಕಿನ ಒಟ್ಟು ವಿಸ್ತೀರ್ಣ ೩೮೨.೬೭ ಚದರ ಕಿ.ಮಿ. ನಷ್ಟಿದೆ. ಇದು ಮೀಸಲು ಅರಣ್ಯಪ್ರದೇಶವನ್ನು ಒಳಗೊಂಡಿದೆ. ಇಡೀ ತಾಲ್ಲೂಕನ್ನು ಉಪನಗರದಂತೆ ನಿರ್ವಹಿಸಲಾಗುತ್ತಿದೆ. ಯೆರ್ಕಾಡ್ ಗ್ರಾಮ ಪರಿಷತ್ತನ್ನು ಕೂಡ ಹೊಂದಿದೆ. == ಇತಿಹಾಸ == (ಶೆವರಾಯನ್ ಗುಡ್ಡಗಳು ಎಂದೂ ಪರಿಚಿತವಿರುವ) ಶೆವರಾಯ್ ಗುಡ್ಡಗಳ ಹತ್ತಿರದ ಪ್ರಾಚೀನ ದೇಗುಲದಿಂದ ಶಿಲಾಯುಗದ ಉಪಕರಣಗಳು ಸಿಕ್ಕಿವೆ. ಇದು ಯೆರ್ಕಾಡ್ ಕೆರೆಯಿಂದ ಸುಮಾರು ೫ ಕಿ.ಮಿ. ದೂರದಲ್ಲಿದೆ. == ಸಾರಿಗೆ == ಯೆರ್ಕಾಡ್‍ಗೆ ಅತಿ ಹತ್ತಿರದ ನಗರವೆಂದರೆ ಸೇಲಂ. ಇದು ೩೨ ಕಿ.ಮಿ. ದೂರದಲ್ಲಿದೆ. ತಮಿಳುನಾಡು ರಾಜ್ಯ ಸಾರಿಗೆ ನಿಗಮವು (ಟಿಎನ್ಎಸ್‍ಟಿಸಿ) ಯೆರ್ಕಾಡ್‍ನಿಂದ ಪ್ರಮುಖ ನಗರಗಳಿಗೆ ಬಸ್ಸುಗಳನ್ನು ನಡೆಸುತ್ತದೆ. ಪರ್ಯಾಯವಾಗಿ ಇದನ್ನು ಧರ್ಮಪುರಿಯಿಂದ ಕಣವೈಪುಡೂರ್ ಮೂಲಕ ಕೂಡ ಪ್ರವೇಶಿಸಬಹುದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಟೆಂಪ್ಲೇಟು:-