ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ. == ಯೋಗವಾಹದ ವಿಧಗಳು == ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ. === ಅನುಸ್ವಾರ === ‘ಂ’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ. === ವಿಸರ್ಗ === ‘ಃ’ - ಉದಾ : ಅಃ, ಕಃ. ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ವಿಸರ್ಗವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ. === ಜಿಹ್ವಾಮೂಲೀಯ === ‘್ಕ’ – ೦ಃಕ. ಜಿಹ್ವಾಮೂಲೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪ್ರಾತ ಃಕಾಲ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ‘ಉಫ್’ ಎಂಬಲ್ಲಿ ಕೇಳಿ ಬರುವಧ್ವನಿಯೇ ಜಿಹ್ವಾಮೂಲೀಯ. ಉದಾ: ಅಂತ ಃಕರಣ, ಮನ ಃಕಷಾಯ. ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ. === ಉಪಾದ್ಮಾನೀಯ === (ಓಷ್ಠ್ಯ) ಪಿ - ಉಪದ್ಮಾನೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪಯ ಃಪಾನ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಉಪಾದ್ಮಾನೀಯಕ್ಕೆ ಉದಾ: ಃಪ / ಪಿ - ತಪ ಃಫಲ, ಪುನ ಃಪುನಃ . ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ. ಅನುಸ್ವಾರ, ವಿಸರ್ಗಗಳು ಸ್ವರಾಂಗ ವ್ಯಂಜನಾಂಗವಾದರೂ ಭಾಷಾಬಳಕೆಯಲ್ಲಿ ಅವುಗಳಿಗೆ ಸ್ವತಂತ್ರ ಧ್ವನಿಮಾ ವ್ಯವಸ್ಥೆಯಿಲ್ಲ. ಆದರೂ ಕೇಶಿರಾಜನ ಇವು ನಾಲ್ಕೂ ಯೋಗವಾಹಗಳು. == ಉಲ್ಲೇಖ ==