ಯೋಜನವು ಹಿಂದಿನ ಸಂಸ್ಕೃತದವರು ಬಳಸಲ್ಪಡುತ್ತಿದ್ದ ದೂರದ ಒಂದು ಮಾಪನವಾಗಿತ್ತು. ಒಂದು ಯೋಜನವು ಸುಮಾರು 12–15 ಕಿ.ಮಿ. ನಷ್ಟಿರುತ್ತದೆ. (ಅಂದರೆ 4 ಕೋಶ = 1 ಯೋಜನ ಮತ್ತು 1 ಕೋಶ 3 - 3.75 ಕಿ.ಮಿ. ನಷ್ಟಾಗಿರುತ್ತದೆ) == ಉದ್ದದಲ್ಲಿ ಬದಲಾವಣೆಗಳು == ವಿಭಿನ್ನ ಖಗೋಳಶಾಸ್ತ್ರಜ್ಞರು ಅಳವಡಿಸಿಕೊಂಡ ವಿಭಿನ್ನ ಮಾನದಂಡಗಳನ್ನು ಅವಲಂಬಿಸಿ ಯೋಜನದ ಉದ್ದವು ಬದಲಾಗುತ್ತದೆ. ಉದಾಹರಣೆಗೆ, ಸೂರ್ಯ ಸಿದ್ಧಾಂತದಲ್ಲಿ (ಕ್ರಿ.ಶ. ೪ನೇ ಶತಮಾನದ ಕೊನೆ-ಕ್ರಿ.ಶ. ೫ನೇ ಶತಮಾನದ ಮುಂಚಿನ ಭಾಗ) ಒಂದು ಯೋಜನವು ೮ ಕಿ.ಮಿ ಗೆ (೫ ಮೈಲಿ) ಸಮಾನವಾಗಿತ್ತು, ಮತ್ತು ಇದು ಆರ್ಯಭಟನ ಆರ್ಯಭಟೀಯಕ್ಕೂ (೪೯೯) ಸತ್ಯವಾಗಿತ್ತು. ಆದರೆ, ೧೪ನೇ ಶತಮಾನದ ಗಣಿತಜ್ಞನಾದ ಪರಮೇಶ್ವರನು ಯೋಜನವು ಸುಮಾರು ೧.೫ ಪಟ್ಟು ಹೆಚ್ಚು ದೊಡ್ಡದು ಎಂದು, ಮತ್ತು ಸುಮಾರು ೧೩ ಕಿ.ಮಿ. ಗೆ (೮ ಮೈಲಿ) ಸಮವೆಂದು ವ್ಯಾಖ್ಯಾನಿಸಿದನು. ಶ್ರೀಲ ಭಕ್ತಿವೇದಂತ ಸ್ವಾಮಿ ಪ್ರಭುಪಾದರು ಭಾಗವತ ಪುರಾಣದ ತಮ್ಮ ಅನುವಾದಗಳಾದ್ಯಂತ ಯೋಜನದ ಸಮಾನವಾದ ಉದ್ದವನ್ನು ಸುಮಾರು ೧೩ ಕಿ.ಮಿ. ಎಂದು ನೀಡುತ್ತಾರೆ. == ಉಲ್ಲೇಖಗಳು ==