ರಜಾಯಿಯು ಅಫ಼್ಘಾನಿಸ್ತಾನ, ಪಾಕಿಸ್ತಾನ, ಉತ್ತರ ಭಾರತ, ನೇಪಾಳ ಮುಂತಾದ ಕಡೆ ಬಳಸಲಾದ ಹಾಸಿಗೆಯ ಕ್ವಿಲ್ಟ್. ಇದು ತೂಲತಲ್ಪ ಅಥವಾ ಹಂಸತೂಲಿಕಾತಲ್ಪವನ್ನು ಹೋಲುವ ಒಂದು ಬಗೆಯ ಹಾಸಿಗೆ ವಸ್ತು. ರಜಾಯಿಗಳು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಮಖಮಲ್ ಬಟ್ಟೆಯ ಹೊದಿಕೆಯನ್ನು ಹೊಂದಿದ್ದು, ಒಳಗೆ ಕಚ್ಚಾ ಹತ್ತಿಯನ್ನು ತುಂಬಿರಲಾಗಿರುತ್ತದೆ. ಇವು ಈ ಪ್ರದೇಶಗಳಲ್ಲಿ ಆಗಬಹುದಾದ ಬಹಳ ತಂಪನೆಯ ಹವಾಮಾನದಲ್ಲಿ ಕೂಡ ಬಹಳಷ್ಟು ಬೆಚ್ಚಗಿರುವಂತೆ ಶಾಖವನ್ನು ಒದಗಿಸಬಲ್ಲದು. ಮುಖ್ಯವಾಗಿ ಕಚ್ಚಾ ಹತ್ತಿಯಲ್ಲಿ ಸಿಲುಕಿರುವ ದೊಡ್ಡ ಪ್ರಮಾಣದ ಗಾಳಿಯ ನಿರೋಧಕ ಪರಿಣಾಮಗಳು ಈ ಶಾಖಕ್ಕೆ ಕಾರಣವಾಗಿರುತ್ತದೆ. == ಉಲ್ಲೇಖಗಳು ==