ರತ್ನಗಂಧಿ ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‌ಪಿನೇ ಉಪಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ (ಪೀಕಾಕ್ ಕೋಂಬ್ ಫ್ಲವರ್). ಕೆಂಜಿಗೆಗಿಡ್ಡ ಪರ್ಯಾಯ ನಾಮ. ಸೀಸಾಲ್‌ಪಿನಿಯ ಪಲ್ಚರೈಮ ಇದರ ವೈಜ್ಞಾನಿಕ ಹೆಸರು. ಇದು ಅಮೇರಿಕಾ ಖಂಡಗಳ ಉಷ್ಣವಲಯ ಮತ್ತು ಉಪೋಷ್ಣವಲಯಗಳಿಗೆ ಸ್ಥಳೀಯವಾಗಿದೆ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿರಬಹುದು, ಆದರೆ ವ್ಯಾಪಕ ಬೇಸಾಯದ ಕಾರಣದಿಂದ ಇದರ ನಿಖರವಾದ ಮೂಲ ಗೊತ್ತಿಲ್ಲ. ಭಾರತವೂ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಇದನ್ನು ಕಾಣಬಹುದು. == ಗುಣಲಕ್ಷಣಗಳು == ಇದು ಸುಮಾರು ೩.೭ ಮೀಟರ್ ಎತ್ತರ ಬೆಳೆಯುವ ಪೊದೆರೂಪದ ಮರ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದು ಎಲೆಯಲ್ಲೂ ೮.೧೬ ಕಿರುಎಲೆಗಳಿರುವುವು. ಹೂಗಳು ರೆಂಬೆಗಳ ತುದಿಗಳಲ್ಲಿ ರೇಸಿಮೋಸ್ ಮಾದರಿಯ ಗೊಂಚಲುಗಳಲ್ಲಿ ಅರಳುವುವು. ದಳಗಳು ಕೆಂಪು ಇಲ್ಲವೆ ಹಳದಿ ಬಣ್ಣದವಾಗಿದ್ದು ಹೂಗಳ ಆಕರ್ಷಕ ಗುಣಕ್ಕೆ ಕಾರಣವಾಗಿದೆ. == ಕೃಷಿ == ರತ್ನಗಂಧಿ ಗಿಡವನ್ನು ಬೀಜಗಳಿಂದ ವೃದ್ಧಿಸಬಹುದು. == ಉಪಯೋಗಗಳು == ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲದೆ ಈ ಸಸ್ಯವನ್ನು ಔಷಧಿಗಾಗಿಯೂ ಬಳಸುವುದುಂಟು. ಸೊಪ್ಪಿನ ಕಷಾಯ ಗರ್ಭಸ್ರಾವಕಾರಕ. ಆಮಶಂಕೆ, ಚರ್ಮರೋಗ ಚಿಕಿತ್ಸೆಯಲ್ಲೂ ಕಷಾಯವನ್ನು ಉಪಯೋಗಿಸುವುದಿದೆ. ಹೂವಿನಲ್ಲಿ ಗ್ಯಾಲಿಕ್ ಆಮ್ಲ, ಟ್ಯಾನಿನ್ ಮುಂತಾದ ರಾಸಾಯನಿಕಗಳು ಸಮೃದ್ಧಿಯಾಗಿದೆ. ಹೂವಿನಿಂದ ಕೆಂಪು ಬಣ್ಣವನ್ನು ತಯಾರಿಸುವುದುಂಟು. == ಛಾಯಾಂಕಣ == == ಉಲ್ಲೇಖಗಳು ==