ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. (ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ) ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. == ರಾಜಕೀಯ ಪ್ರವೇಶ == ರಮ್ಯ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ೨೩ ಆಗಸ್ಟ್ ೨೦೧೩ ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರನ್ನು ೬೭,೬೧೧ ಮತಗಳ ಅಂತರದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರು. === ೨೦೧೪ರ ಚುನಾವಣೆ === ಲೋಕಸಭೆಗೆ ಏಪ್ರಿಲ್ ೧೭, ೨೦೧೪ರಲ್ಲಿ ಜರುಗಿದ ಚುನಾವಣೆಯಲ್ಲಿ ರಮ್ಯಾ ಅವರು ಸೋಲನ್ನನುಭವಿಸಿದರು. ಅವರನ್ನು ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರು ಸೋಲಿಸಿದರು. == ಚಿತ್ರಗಳು == === ಕನ್ನಡ === == ಹೊರಕೊಂಡಿಗಳು == ಐಎಂಡಿಬಿಯಲ್ಲಿ ದಿವ್ಯ ಸ್ಪಂದನ ಕಾಂಗ್ರೆಸ್ಸಿನ 'ಸೋಷಿಯಲ್ ಪವರ್' ರಮ್ಯಾ == ಉಲ್ಲೇಖಗಳು ==