ರಸಾಬಲಿ ಭಾರತದ ರಾಜ್ಯವಾದ ಒಡಿಶಾದ ಒಂದು ಸಿಹಿ ಖಾದ್ಯವಾಗಿದೆ. ರಸಾಬಲಿಯನ್ನು ಬಲರಾಮ ದೇವರಿಗೆ ನೈವೇದ್ಯ ಮಾಡಲಾಗುತ್ತದೆ, ಮತ್ತು ಇದು ಕೇಂದ್ರಪಾಡಾದ ಬಲದೇವ್‍ಜಿ ದೇವಸ್ಥಾನದಲ್ಲಿ ಹುಟ್ಟಿಕೊಂಡಿತು. ಇದು ಜಗನ್ನಾಥ ದೇವಾಲಯದ ಛಪ್ಪನ್ ಭೋಗದ ಪೈಕಿ ಒಂದಾಗಿದೆ. ಇದು ಛೇನಾದ ಕರಿದ ಕೆಂಪು ಕಂದು ಬಣ್ಣದ ಕಡುಬಿನ ಗಾತ್ರದ ಚೂರುಗಳನ್ನು ಹೊಂದಿರುತ್ತದೆ. ಇವನ್ನು ಗಟ್ಟಿಯಾಗಿಸಿದ, ಸಿಹಿ ಹಾಲಿನಲ್ಲಿ (ರಬಡಿ) ನೆನೆಸಲಾಗುತ್ತದೆ. ಅವುಗಳು ಹಾಲನ್ನು ಹೆಚ್ಚು ಸರಾಗವಾಗಿ ಹೀರಿಕೊಳ್ಳಲು ಸಾಧ್ಯವಾಗಲು ಛೇನಾವನ್ನು ಅಂಗೈ ಗಾತ್ರದ ಚೂರುಗಳಾಗಿ ಚಪ್ಪಟೆಯಾಗಿಸಲಾಗುತ್ತದೆ. ಗಟ್ಟಿಯಾಗಿಸಿದ ಹಾಲಿಗೆ ಕೆಲವೊಮ್ಮೆ ಸಾಮಾನ್ಯವಾಗಿ ಸ್ವಲ್ಪ ಏಲಕ್ಕಿ ಚೂರನ್ನು ಸೇರಿಸಿ ರುಚಿಯಾಗಿಸಲಾಗುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ://..//story317. 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.