ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ.ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ.ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ೫ ವರ್ಷಗಳು.ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ. == 7ನೇ ಸಂವಿಧಾನದ ತಿದ್ದುಪಡಿ == ಗವರ್ನರ್ ಭಾರತದಲ್ಲಿ ಒಂದು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಾಮಾನ್ಯವಾಗಿ, ಗವರ್ನರ್ ಅನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ, ಆದರೆ 7 ನೇ ಸಂವಿಧಾನದ ತಿದ್ದುಪಡಿಯ ನಂತರ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬ ರಾಜ್ಯಪಾಲರನ್ನು ಹೆಚ್ಚುವರಿಯಾಗಿ ನೇಮಕ ಮಾಡಬಹುದು. == ಭಾರತದ ರಾಜ್ಯಗಳ ರಾಜ್ಯಪಾಲರ ಪಟ್ಟಿ == == ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರ / ಆಡಳಿತಾಧಿಕಾರಿಗಳ ಪಟ್ಟಿ == == ಉಲ್ಲೇಖಗಳು ==