ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ. ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು(ಸದ್ಯ, ಎಂ.ವೆಂಕಯ್ಯ ನಾಯ್ಡು). ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ ೧೩, ೧೯೫೨ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು. == ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ == ೧) ಭಾರತದ ಪ್ರಜೆಯಾಗಿರಬೇಕು ೨) 30 ವರ್ಷ ವಯೋಮಿತಿ ಹೊಂದಿರಬೇಕು ೩) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು ೪) ಮತಿಭ್ರಮಣೆಯುಳ್ಳವರಾಗಿರಬಾರದು ೫) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು. == ಪ್ರಸ್ತುತ ರಾಜ್ಯಸಭಾ ಸದಸ್ಯರ ಪಟ್ಟಿ == === ನಾಮಕರಣ === ವಿವರ: ಭಾರತೀಯ ಜನತಾ ಪಕ್ಷ (8) ನಾಮನಿರ್ದೇಶನ (4) === ಆಂಧ್ರಪ್ರದೇಶ === ವಿವರ: ಬಿಜೆಪಿ (4) ವೈಎಸ್ಆರ್ ಕಾಂಗ್ರೆಸ್ (2) ಟಿಡಿಪಿ (2) ಐಎನ್‌ಸಿ (2) ಟಿಆರ್‌ಎಸ್ (1) === ಅರುಣಾಚಲ ಪ್ರದೇಶ === ವಿವರ: ಐಎನ್‌ಸಿ (1) === ಅಸ್ಸಾಂ === : (2) (2) (1) (1) (1) === ಬಿಹಾರ === : () (5) (5) (3) (1) (1) (1) === ಛತ್ತೀಸ್‌ಘಡ === : (3) (2) === ಗೋವಾ === : (1) === ಗುಜರಾತ್ === : (7) (4) === ಹರಿಯಾಣ === : (3) (1) (1) === ಹಿಮಾಚಲ ಪ್ರದೇಶ === : (2) (1) === ಜಮ್ಮು ಮತ್ತು ಕಾಶ್ಮೀರ === : (2) (1) (1) === ಜಾರ್ಖಂಡ್ === : (3) (1) === ಕರ್ನಾಟಕ === ವಿವರ: ಐಎನ್‌ಸಿ (7) ಬಿಜೆಪಿ (4) ಜೆಡಿಎಸ್ (1) === ಕೇರಳ === : () (3) (2) (1) () (1) (1) (1) === ಮಧ್ಯಪ್ರದೇಶ === : (8) (3) === ಮಹಾರಾಷ್ಟ್ರ === : (8) (4) (3) (3) () (1) === ಮಣಿಪುರ === : (1) === ಮೇಘಾಲಯ === : (1) === ಮಿಜೋರಾಂ === : (1) === ನಾಗಾಲ್ಯಾಂಡ್ === : (1) === ನವದೆಹಲಿ === : (3) === ಒಡಿಶಾ === : (9) (1) === ಪುದುಚೇರಿ === : (1) === ಪಂಜಾಬ್ === : (3) (3) (1) === ರಾಜಸ್ಥಾನ === : (9) (1) === ಸಿಕ್ಕಿಂ === : (1) === ತಮಿಳುನಾಡು === : (8) (7) (1) (1) (1) === ತೆಲಂಗಾಣ === ವಿವರ: ಟಿಆರ್‌ಎಸ್ (7) === ತ್ರಿಪುರ === : () (1) === ಉತ್ತರ ಪ್ರದೇಶ === : (15) (9) (4) (2) (1) === ಉತ್ತರಾಖಂಡ === : (2) (1) === ಪಶ್ಚಿಮ ಬಂಗಾಳ === : (13) (2) () (1) == ಆಕರಗಳು == ರಾಜ್ಯ ಸಭೆಯ ರೀತಿ ನೀತಿಗಳು 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. == ಪೂರಕ ಓದಿಗೆ == ದಿ ನಾಮಿನೇಟಡ್ ಮೆಂಬರ್ಸ್ ಆಫ್ ಇಂಡಿಯಾ'ಸ್ ಕೌನ್ಸಿಲ್ ಆಫ್ ಸ್ಟೇಟ್ಸ್: ಏ ಸ್ಟಡಿ ಆಫ್ ರೋಲ್ ಡೆಫಿನಿಷನ್ (ರಾಜ್ಯಸಭೆಯ ನಾಮಕರಣ ಸದಸ್ಯರ ಅಧಿಕಾರದ ಬಗ್ಗೆ ಒಂದು ಅಧ್ಯಯನ) ಜೆ. ಎಚ್. ಪ್ರೊಕ್ಟರ್ (. . ), , . 10, . 1, ., 1985), ಪುಟ ಸಂಖ್ಯೆ. 53-70. == ಇವನ್ನೂ ನೋಡಬಹುದು == ಲೋಕಸಭೆ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರ ಸಂಪೂರ್ಣ ಪಟ್ಟಿ == ಬಾಹ್ಯ ಸಂಪರ್ಕ ಕೊಂಡಿಗಳು == ರಾಜ್ಯಸಭೆ ಭಾರತ ಭಾರತ ಸರಕಾರದ ರಾಜ್ಯಸಭೆಯ ಅಂತರಜಾಲ ಪುಟ 2016-08-29 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತ ಸರಕಾರದ ರಾಜ್ಯಸಭೆಯ ಬಗ್ಗೆ ಅನೇಕ ಬಾರಿ ಕೇಳಲಾಗುವ ಪ್ರಶ್ನೋತ್ತರಗಳು 2009-06-21 ವೇಬ್ಯಾಕ್ ಮೆಷಿನ್ ನಲ್ಲಿ. ನಾಮಕರಣ ಸದಸ್ಯರ ಪಟ್ಟಿ 2009-04-19 ವೇಬ್ಯಾಕ್ ಮೆಷಿನ್ ನಲ್ಲಿ. ಸದಸ್ಯರ ರಾಜ್ಯವಾರು ಪಟ್ಟಿ 2009-04-19 ವೇಬ್ಯಾಕ್ ಮೆಷಿನ್ ನಲ್ಲಿ.