ರಾತ್ರಿರಾಣಿ ಸೊಲನೇಸಿಯೀ (ಆಲೂಗಡ್ಡೆ ಕುಟುಂಬ) ಸಸ್ಯ ಕುಟುಂಬದಲ್ಲಿನ ಸೆಸ್ಟ್ರಮ್‍ನ ಒಂದು ಪ್ರಜಾತಿ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿದೆ, ಆದರೆ ದಕ್ಷಿಣ ಏಷ್ಯಾದಲ್ಲಿ ದೇಶೀಕರಿಸಲ್ಪಟ್ಟಿದೆ. == ವಿವರಣೆ == ರಾತ್ರಿರಾಣಿಯು ಮರದಂಥ ನಿತ್ಯಹರಿದ್ವರ್ಣ ಪೊದೆಯಾಗಿದ್ದು ೪ ಮೀ.ವರೆಗೆ ಎತ್ತರವಿರುತ್ತದೆ. ಹೂವುಗಳು ಹಸಿರು ಬಿಳಿ ಬಣ್ಣ ಹೊಂದಿರುತ್ತವೆ, ಮತ್ತು ತೆಳ್ಳನೆಯ ಕೊಳವೆಯಾಕಾರದ ೨-೨.೫ ಸೆ.ಮೀ. ಉದ್ದದ ಎಸಳು ಇರುತ್ತದೆ, ಮತ್ತು ರಾತ್ರಿಯಲ್ಲಿ ತೆರೆದುಕೊಂಡಾಗ ಐದು ಕಿರಿದಾದ ಹಾಲೆಗಳಿರುತ್ತವೆ. ರಾತ್ರಿಯ ವೇಳೆ ಪ್ರಬಲವಾದ, ಸಿಹಿ ಸುಗಂಧ ಬಿಡುಗಡೆಯಾಗುತ್ತದೆ. == ಬೇಸಾಯ == ರಾತ್ರಿರಾಣಿಯನ್ನು ಉಪೋಷ್ಣವಲಯದ ಪ್ರದೇಶಗಳಲ್ಲಿ ರಾತ್ರಿಯಲ್ಲಿ ಭಾರೀ ಸುಗಂಧ ಬೀರುವ ಅದರ ಹೂವುಗಳಿಗಾಗಿ ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ. ಇದು ಹಗುರ ಹಾಗೂ ಮರಳನ್ನು ಹೊಂದಿರುವ ಸಾಧಾರಣದಿಂದ ತೇವದ ಮಣ್ಣಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆ. == ಅತಿಕ್ರಮಣಶೀಲ ಸಾಮರ್ಥ್ಯ == ರಾತ್ರಿರಾಣಿಯು ಆಸ್ಟ್ರೇಲಿಯಾ, ನ್ಯೂ ಜ಼ೀಲಂಡ್, ದಕ್ಷಿಣ ಆಫ಼್ರಿಕಾ, ದಕ್ಷಿಣ ಚೀನಾ ಮತ್ತು ಅತ್ಯಂತ ದಕ್ಷಿಣದ ಅಮೇರಿಕ ಸೇರಿದಂತೆ ವಿಶ್ವದಾದ್ಯಂತದ ಉಷ್ಣ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಇದನ್ನು ನಿರ್ಮೂಲ ಮಾಡುವುದು ಕಠಿಣವಾಗಿದೆ. ಕೆಲವು ದೇಶಗಳಲ್ಲಿ ಇದನ್ನು ಕಳೆಯೆಂದು ವರ್ಗೀಕರಿಸಲಾಗಿದೆ. == ಉಲ್ಲೇಖಗಳು ==