ರಾಮಪತ್ರೆ(ಕನಾಗಿ)ಇದು ಭಾರತಕ್ಕೆ ಸೀಮಿತವಾಗಿರುವ ಮರ.ಮುಖ್ಯವಾಗಿ ಪಶ್ಚಿಮಘಟ್ಟಗಳಲ್ಲಿ ಕಂಡು ಬರುತ್ತದೆ.ಆಗುಂಬೆ,ವರಾಹಿ ಮುಂತಾದ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಮೈರಿಸ್ಟಿಕಾಸಿ ಕುಟುಂಬಕ್ಕೆ ಸೇರಿದ್ದು,ಮೈರಿಸ್ಟಿಕ ಮಲಬಾರಿಕ ( )ಎಂದು ಸಸ್ಯಶಾಸ್ತ್ರೀಯ ಹೆಸರು. == ಸಸ್ಯದ ಗುಣಲಕ್ಷಣಗಳು == ಇದು ದೊಡ್ಡಪ್ರಮಾಣದ ನಿತ್ಯಹರಿದ್ವರ್ಣದ ಮರ.ಇದರ ಕಾಯಿಯ ಸಿಪ್ಪೆ ಜಾಪತ್ರೆಯೊಂದಿಗೆ ಕಲಬೆರಕೆಯಾಗುವ ಸಂಭವವಿದೆ.ದಾರುವು ಸಾಧಾರಣ ಗಡುಸಾಗಿದೆ. == ಉಪಯೋಗಗಳು == ಇದರ ಬೀಜವನ್ನು ಕುದಿಸಿದಾಗ ಹಳದಿ ಬಣ್ಣದ ಎಣ್ಣೆ ಸಿಗುತ್ತದೆ.ಇದು ಔಷಧಗಳಲ್ಲಿ ಹಾಗೂ ಉರಿಸುವುದಕ್ಕೂ ಬಳಕೆಯಾಗುತ್ತದೆ. == ಅಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ