ರಾಮು ಕನ್ನಡ ಚಲನಚಿತ್ರ ರಂಗದ ನಿರ್ಮಾಪಕರಲ್ಲಿ ಒಬ್ಬರು. ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದ ಇವರನ್ನು ಕೋಟಿ ರಾಮು ಎಂದು ಕರೆಯುತ್ತಾರೆ. == ಪ್ರಾರಂಭಿಕ ದಿನಗಳು == ಕುಣಿಗಲ್ ತಾಲೂಕು ಕೊಡಿಗೆಹಳ್ಳಿ ಗ್ರಾಮದಲ್ಲಿ ಇವರು ಜನಿಸಿದರು. ಸಂತ ಶಿಶುನಾಳ ಶರೀಫ ಚಿತ್ರವನ್ನು ಹಂಚಿಕೆ ಮಾಡುವ ಮೂಲಕ ವಿತರಕರಾಗಿ ವೃತ್ತಿ ಪ್ರಾರಂಭಿಸಿದ ಇವರು ಚೈತ್ರದ ಪ್ರೇಮಾಂಜಲಿ ಚಿತ್ರದ ವಿತರಣೆಯಿಂದ ಪ್ರವರ್ಧಮಾನಕ್ಕೆ ಬಂದರು. ಗೋಲಿಬಾರ್ ಎಂಬ ಕನ್ನಡ ಚಿತ್ರ ಇವರ ನಿರ್ಮಾಣದ ಮೊದಲ ಚಿತ್ರ. ಬಳಿಕ ತಮ್ಮ ಚಿತ್ರ ನಿರ್ಮಾಣ ಸಂಸ್ಥೆ ರಾಮು ಎಂಟರ್ಪೈಸಸ್ ಲಾಂಛನದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದರು ಹಾಗೂ ಹಲವಾರು ಚಿತ್ರಗಳಿಗೆ ವಿತರಕರಾಗಿ ಜವಬ್ದಾರಿ ನಿರ್ವಹಿಸಿದರು. == ಚಲನಚಿತ್ರಗಳ ಪಟ್ಟಿ == ರಾಮು ಅವರ ನಿರ್ಮಾಣದ "ಅರ್ಜುನ್ ಗೌಡ" ಬಿಡುಗಡೆಗೆ ಸಿದ್ದವಿದೆ. == ಮರಣ == ಇವರು ಏಪ್ರಿಲ್ ೨೬, ೨೦೨೧ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ - ೧೯ ಸೋಂಕಿಗೆ ತುತ್ತಾಗಿ ನಿಧನರಾದರು. == ಉಲ್ಲೇಖಗಳು ==