ರಾಯಚೂರು ಭಾರತದ ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಜಿಲ್ಲಾ ಕೇಂದ್ರವಾಗಿದೆ. ರಾಯಚೂರು ನಗರವು ಕೃಷ್ಣ ಮತ್ತು ತುಂಗಭದ್ರಾ ನದಿಗಳ ತೀರದಲ್ಲಿದೆ. ಇದು ರಾಜ್ಯ ರಾಜಧಾನಿ ಬೆಂಗಳೂರಿನಿಂದ 409 ಕಿ.ಮಿ ಅಂತರದಲ್ಲಿ ಇದೆ == ಭೂಗೋಳ == ರಾಯಚೂರು ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇರುವ ನಗರವಾಗಿದೆ. ಇದು ಸರಾಸರಿ 407 ಮೀಟರ್ (1335 ಅಡಿ) ಎತ್ತರದಲ್ಲಿ ಇದೆ. ಬೇಸಿಗೆಯಲ್ಲಿ ಈ ಪ್ರದೇಶವು ಅತ್ಯಂತ ಬಿಸಿಯಾಗಿರುತ್ತದೆ ಮತ್ತು ಇದರ ಗರಿಷ್ಠ ತಾಪಮಾನವು 40° ಕ್ಕಿಂತ ಹೆಚ್ಚಾಗುತ್ತದೆ. ಈ ನಗರದ ಮಳೆಗಾಲದ ಅವಧಿಯು ಮೇ ಯಿಂದ ಆಗಸ್ಟ್ ತಿಂಗಳುಗಳು ಆಗಿವೆ . ಒಟ್ಟಾರೆಯಾಗಿ, ಈ ಪ್ರದೇಶವು ವರ್ಷದ ಬಹುಪಾಲು ಬಿಸಿಯಾದ ವಾತಾವರಣವನ್ನು ಹೊಂದಿದೆ. == ಜನಸಂಖ್ಯೆ == 2001 ರ ಭಾರತದ ಜನಗಣತಿಯ ಪ್ರಕಾರ, ರಾಯಚೂರಿನಲ್ಲಿ 57.61% ರಷ್ಟು ಜನ ಹಿಂದೂ ಧರ್ಮದವರಾಗಿದ್ದಾರೆ. ಮತ್ತು ಶೇಕಡಾ 39.87% ರಷ್ಟು ಜನರು ಇಸ್ಲಾಂ ಧರ್ಮದವರಾಗಿದ್ದಾರೆ. ರಾಯಚೂರಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು 1.18%, ಜೈನ ಧರ್ಮವನ್ನು 0.94%, ಸಿಖ್ ಧರ್ಮವನ್ನು 0.08% ಮತ್ತು ಬೌದ್ಧ ಧರ್ಮವನ್ನು 0.08% ಅನುಸರಿಸುತ್ತಿದ್ದಾರೆ. ಸರಿಸುಮಾರು 0.29% 'ನಿರ್ದಿಷ್ಟ ಧರ್ಮವಿಲ್ಲ' ಎಂದು ಹೇಳಿದ್ದಾರೆ. ಈ ನಗರದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನ ಮಾತನಾಡುತ್ತಾರೆ. == ಉಲ್ಲೇಖ ==