"ರಾಯಲಸೀಮೆ"( :రాయలసీమ ) ಆಂಧ್ರ ಪ್ರದೇಶದ ಭೌಗೋಳಿಕ ವಿಭಾಗಗಳಲ್ಲೊಂದು. ಇದು ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲ್ ಜಿಲ್ಲೆಗಳನ್ನೊಳಗೊಂಡಿದೆ. ಕರ್ನೂಲು ಪಟ್ಟಣವು ಆಂಧ್ರರಾಷ್ಟ್ರದ ಮೊದಲ ರಾಜಧಾನಿಯಾಗಿತ್ತು. ಈ ಪ್ರಾಂತ್ಯವನ್ನಾಳಿದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥ ’ರಾಯಲಸೀಮ’ ಎಂಬ ಹೆಸರು ಪ್ರದೇಶಕ್ಕೆ ಬಂದಿತು. ಈ ಭಾಗವನ್ನು ಚಾಲುಕ್ಯರು ಆಳುವ ಮೊದಲು(ಸುಮಾರು ಕ್ರಿ.ಶ ೭ನೇ ಶತಮಾನ) ಇದು "ಹಿರಣ್ಯಕ ರಾಷ್ಟ್ರ’ವೆಂದು ಹೆಸರಾಗಿತ್ತು. ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಈ ಭಾಗವನ್ನಾಳಿದ್ದರೆಂಬ ನಂಬಿಕೆಯಿದೆ. ವಿಜಯನಗರ ಕಾಲದ ನಂತರವಷ್ಟೇ ಈ ಭಾಗ ರಾಯಲಸೀಮೆಯೆಂಬ ಹೆಸರು ಪಡೆದುಕೊಂಡಿತು. == ಪ್ರೇಕ್ಷಣೀಯ ಸ್ಥಳಗಳು == ತಿರುಮಲ. ಶ್ರೀಶೈಲ. ಅಹೋಬಿಲಮ್. ಶ್ರೀಕಾಳಹಸ್ತಿ. ಲೇಪಾಕ್ಷಿ. ಮಂತ್ರಾಲಯ. ಪುಟ್ಟಪರ್ತಿ. ಕದಿರಿ. ಕಾನಿಪಾಕಮ್. ತಾಡಪತ್ರಿ. ನಂದ್ಯಾಲ. ಅದೋನಿ. ಪೆನುಕೊಂಡ. ನಾಗನಾಥಾನಹಲ್ಲಿ