೧೯೪೯ರ ಮಾರ್ಚ್ ೨೨ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು ೫ ಭಾರತೀಯ ಭಾಷೆಗಳ ತಲಾ ಒಬ್ಬೊಬ್ಬರು ಕವಿಗಳನ್ನು 'ರಾಷ್ಟ್ರಕವಿ' ಗಳೆಂದು ಘೋಷಿಸಿತು. ಇದುವರೆವಿಗೂ ಈ ಪ್ರಶಸ್ತಿಯನ್ನು ಪಡೆದವರು- ಎಂ. ಗೋವಿಂದ ಪೈ ಮೈಥಿಲಿ ಶರಣ್ ಗುಪ್ತ ಕುವೆಂಪು ರಾಮ್ ಧಾರಿಸಿಂಗ್ ದಿನಕರ್ ಕವಿ ಪ್ರದೀಪ್ ಜಿ.ಎಸ್. ಶಿವರುದ್ರಪ್ಪ ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. ೧೯೬೪ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು. ಅನಂತರ ದಿನಾಂಕ ೧-೧೧-೨೦೦೬ರಂದು ಕರ್ನಾಟಕ ಸರ್ಕಾರವು ಕನ್ನಡದ ಕವಿ ಡಾ||ಜಿ.ಎಸ್. ಶಿವರುದ್ರಪ್ಪ ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು.