ರಿಕ್ತ ೨೦೧೭ರಲ್ಲಿ ಬಿಡುಗಡೆಯಾದ, ಅಮೃತ್‌ ಕುಮಾರ್ ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಜಿ. ಅರುಣ್ ಕುಮಾರ್ ನಿರ್ಮಿಸಿದ್ದಾರೆ. ಸಂಚಾರಿ ವಿಜಯ್ ಕುಡುಕ, ಪ್ರೇಮಿ, ಮಗು, ಹಾಸ್ಯ ನಟ , ಹೀಗೆ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಗ್ದೇವಿ ಅಧ್ವಿಕ ಮತ್ತು ರಮ್ಯಾ ವರ್ಷಿಣಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಕಿ ಸೋನು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಮುರಳಿಧರ್ ರವರ ಛಾಯಾಗ್ರಹಣವಿದೆ.‍‌‍‌ == ಮತ್ತು ==