ಮೂಲತಃ ರಿಕ್ಷಾ ಶಬ್ದವು ಎರಡು ಅಥವಾ ಮೂರು ಚಕ್ರಗಳ ಪ್ರಯಾಣಿಕ ಗಾಡಿಯನ್ನು ಸೂಚಿಸುತ್ತಿತ್ತು. ಈಗ ಇದು ಎಳೆಯಲ್ಪಡುವ ರಿಕ್ಷಾ ಎಂದು ಪರಿಚಿತವಾಗಿದೆ. ಒಬ್ಬ ಪ್ರಯಾಣಿಕನನ್ನು ಹೊರುವ ಇದನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಎಳೆಯುತ್ತಾನೆ. ಈ ಪದದ ಮೊದಲ ಪರಿಚಿತ ಬಳಕೆಯು ೧೮೭೯ರಲ್ಲಿ ಆಯಿತು. ಕಾಲ ಕಳೆದಂತೆ, ಸೈಕಲ್ ರಿಕ್ಷಾಗಳು, ಆಟೊರಿಕ್ಷಾಗಳು ಮತ್ತು ವಿದ್ಯುತ್ ರಿಕ್ಷಾಗಳನ್ನು ಆವಿಷ್ಕರಿಸಲಾಯಿತು. ಪ್ರವಾಸೋದ್ಯಮದಲ್ಲಿ ಬಳಕೆಗಾಗಿ ಕೆಲವು ಅಪವಾದಗಳನ್ನು ಬಿಟ್ಟರೆ, ಇವು ಮೊದಲಿನ ಎಳೆಯಲ್ಪಟ್ಟ ರಿಕ್ಷಾಗಳ ಸ್ಥಾನವನ್ನು ತುಂಬಿವೆ. ಎಳೆಯಲ್ಪಟ್ಟ ರಿಕ್ಷಾಗಳು ಜನಪ್ರಿಯ ಸಾರಿಗೆಯ ರೂಪವನ್ನು ಸೃಷ್ಟಿಸಿದವು, ಮತ್ತು ಏಷ್ಯಾದ ನಗರಗಳೊಳಗೆ ೧೯ನೇ ಶತಮಾನದಲ್ಲಿ ಪುರುಷ ಶ್ರಮಿಕರಿಗೆ ಉದ್ಯೋಗದ ಮೂಲವಾದವು. ಅವುಗಳ ನೋಟ ಹೊಸದಾಗಿ ಪಡೆದ ಗುಂಡು ಮಣಿಗಳ ವ್ಯವಸ್ಥೆಗಳ ಜ್ಞಾನಕ್ಕೆ ಸಂಬಂಧಿತವಾಗಿತ್ತು. ಕಾರುಗಳು, ಟ್ರೈನುಗಳು ಮತ್ತು ಸಾರಿಗೆಯ ಇತರ ರೂಪಗಳು ವ್ಯಾಪಕವಾಗಿ ಲಭ್ಯವಾದಾಗ ಅವುಗಳ ಜನಪ್ರಿಯತೆ ಕಡಿಮೆಯಾಯಿತು. == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == , (1990). - : . . 978-8185195278. , (2005). : , 1874-1954. . . 978-9622097346. (1962). - . .. , (2010). - . . , (2003). : ' , 1880-1940. . 978-9971692667.