ರಿಷಭಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೨ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ರತಿಪ್ರಿಯ ಎಂದು ಹೆಸರಿಸಿದ್ದಾರೆ. . == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹನ್ನೊಂದನೆಯ ರುದ್ರ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಶ್ರೀ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೨ ಸ ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೨೫ನೆಯ ಮೇಳಕರ್ತ ರಾಗವಾದ ಚಾರುಕೇಶಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ರಿಷಭಪ್ರಿಯ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು ಗಾನ ನಯ ದೇಶಿಕ- ಕೋಟೀಶ್ವರ ಐಯ್ಯರ್ ಮಾರ ರತಿಪ್ರಿಯಮ್- ಮುತ್ತುಸ್ವಾಮಿ ದೀಕ್ಷಿತರು ನಂದೀಶಮ್ ವಂದೇ- ಎಂ. ಬಾಲಮುರಳಿ ಕೃಷ್ಣ ಇಂತಾ ಶೋಧನಮುಲಕು- ವೀಣೆ ಶೇಷಣ್ಣ ಮಾಹಿಮಾ ದಕ್ಕಿಂಚು- ತ್ಯಾಗರಾಜ ಪನ್ನೀರು ಕೈಯನೆ- ಡಿ.ಕೆ.ಪಟ್ಟಮ್ಮಾಳ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ರಿಷಭಪ್ರಿಯ ರಾಗಕ್ಕೆ ಅನ್ವಯಿಸಿದಾಗ ಕೋಕಿಲಪ್ರಿಯ ಎಂಬ ಒಂದು ರಾಗ ದೊರೆಯುತ್ತದೆ. == ಉಲ್ಲೇಖಗಳು ==