ರುಥೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಇದು ಮುಖ್ಯವಾಗಿ ಪ್ಲಾಟಿನಮ್ನ ಖನಿಜಗಳಲ್ಲಿ ದೊರೆಯುತ್ತದೆ. ಪ್ಲಾಟಿನಮ್ ಮತ್ತು ಪಲ್ಲಾಡಿಯಮ್ಗಳ ಜೊತೆ ಬೆರಿಸಿದಾಗ ಅವುಗಳಿಗೆ ಹೆಚ್ಚು ಗಡುಸುತನ ನೀಡುವುದರಿಂದ ಇದನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದನ್ನು ೧೮೪೪ರಲ್ಲಿ ರಷ್ಯಾದ ಕಾರ್ಲ್ ಕ್ಲೌಸ್ ಮೊದಲು ಪ್ರತ್ಯೇಕಿಸಿದನು. ಇದರ ಹೆಸರು ಪ್ರಸಕ್ತ ಪಶ್ಚಿಮ ರಷ್ಯಾ, ಯುಕ್ರೇನ್, ಬೆಲಾರೂಸ್ಗಳು ಇರುವ ರೂಸ್ ಪ್ರದೇಶದ ಲ್ಯಾಟಿನ್ ಹೆಸರಾದ "ರುಥೇನಿಯ" ಇಂದ ಬಂದಿದೆ.