ರುಬಿಡಿಯಮ್ ಒಂದು ಕ್ಷಾರ ಲೋಹ ಮೂಲಧಾತು. ಮೃದುವಾಗಿ, ಬಿಳಿಯಾಗಿ ಹೊಳೆಯುವ ಈ ಲೋಹ ಬಹಳ ಸುಲಭವಾಗಿ ರಾಸಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಈ ಧಾತು ಬೋಸ್-ಐನ್‍ಸ್ಟೈನ್ ದ್ರವದ ತಯಾರಿಕೆ, ಅಣು ಗಡಿಯಾರಗಳಲ್ಲಿ ಮತ್ತು ಕೆಲವು ಆಧುನಿಕ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ೧೮೬೧ರಲ್ಲಿ ರಾಬರ್ಟ್ ಬನ್ಸನ್ ಮತ್ತು ಗುಸ್ತಾವ್ ಕಿರ್ಕಾಫ್ ಕಂಡುಹಿಡಿದರು.