ರುವಾಂಡ ಗಣರಾಜ್ಯ ಪೂರ್ವ ಆಫ್ರಿಕಾದಲ್ಲಿ ಉಗಾಂಡ, ಬುರುಂಡಿ, ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಟಾಂಜೇನಿಯಗಳಿಂದ ಆವೃತವಾಗಿರುವ ಒಂದು ಪುಟ್ಟ ದೇಶ. ೯ ಮಿಲಿಯನ್ ಜನಸಂಖ್ಯೆಯುಳ್ಳ ಈ ದೇಶ ಆಫ್ರಿಕಾದ ಖಂಡ ಭಾಗದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ. ಹಸಿರಾಗಿ ಫಲವತ್ತಾಗಿರುವ ಈ ದೇಶವನ್ನು "ಸಾವಿರ ಬೆಟ್ಟಗಳ ನಾಡು" ( , ' ) ಎಂದು ಕರೆಯಲಾಗುತ್ತದೆ. ೧೯೯೪ರ ರುವಾಂಡ ನರಹತ್ಯೆಕಾಂಡವು ಈ ದೇಶದ ಮೇಲೆ ಪ್ರಪಂಚದ ಗಮನ ಸೆಳೆಯಿತು.