ರೇಖಾ ವೇದವ್ಯಾಸ್ , ಅಕ್ಷರ ಎಂದೂ ಕರೆಯಲ್ಪಡುವ ರೇಖಾ ಅವರು ಭಾರತೀಯ ಚಲನಚಿತ್ರ ನಟಿ. ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿದ್ದ ಇವರು ೨೦೦೧ರಲ್ಲಿ ಚಿತ್ರಾ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪ್ರವೇಶಿಸಿದರು. ಇಲ್ಲಿಯವರೆಗೆ ಇವರು ವಿವಿಧ ದಕ್ಷಿಣ ಭಾರತೀಯ ಭಾಷೆಗಳಲ್ಲಿ ೩೦ ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. == ಆರಂಭಿಕ ಜೀವನ == ರೇಖಾ ಹುಟ್ಟಿ ಬೆಳೆದಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಇವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಕೆಂಗೇರಿಯ ಬಸವ ವಸತಿ ಬಾಲಕಿಯರ ಶಾಲೆಯಲ್ಲಿ ಮಾಡಿದರು. ನಂತರ ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ತನ್ನ ಬಿಬಿಎ ಅಂಚೆಶಿಕ್ಷಣ ಕೋರ್ಸನ್ನು, ಹವ್ಯಾಸಿ ಮಾಡೆಲಿಂಗ್ ಅನ್ನು ಮಾಡುತ್ತಾ ನಟನೆಯಲ್ಲಿ ಮುಂದುವರಿಯಲು ಪ್ರಯತ್ನಿಸಿದರು . == ವೃತ್ತಿ ಬದುಕು == ರಾಮೋಜಿ ರಾವ್ ನಿರ್ಮಿಸಿದ ಕಾಲೇಜು ನಾಟಕ ಚಿತ್ರಕ್ಕಾಗಿ ಇವರನ್ನು ಜಯಶ್ರೀ ದೇವಿ ಅವರು ಚಿತ್ರರಂಗಕ್ಕೆ ಕರೆತಂದರು. ಇದರಲ್ಲಿ ಅವರು ಅನಿವಾಸಿ ಭಾರತೀಯ ವಿದ್ಯಾರ್ಥಿಯಾಗಿ ನಟಿಸಿದರು. ಅದೇ ವರ್ಷ, ಅವರು ಸುದೀಪ್ ಜೊತೆಗೆ ಹುಚ್ಚ ಚಿತ್ರದಲ್ಲಿ ನಟಿಸಿದರು. ಅದೇ ವರ್ಷ ಶ್ರೀನು ವೈಟ್ಲರ ಆನಂದಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಮೂರೂ ಚಿತ್ರಗಳೂ ವಾಣಿಜ್ಯಿಕವಾಗಿ ಯಶಸ್ವಿಯಾದವು. ಇವರು ಅಭಿನಯದ ತೆಲುಗು ಚಿತ್ರ ಡೋಂಗೋಡು ನಲ್ಲಿ ರವಿತೇಜ ನಾಯಕನಾಗಿ ಕಾಣಿಸಿಕೊಂಡಿದ್ದರು. ಸಬಪತಿಯ ಪ್ರೇಮ ತ್ರಿಕೋನ ಆಧಾರಿತ ಚಿತ್ರ ಪುನ್ನಗೈ ಪೂವೆ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೨೦೦೩ರಲ್ಲಿ ಇವರು ತಮ್ಮ ಮೊದಲ ಮತ್ತು ಇಲ್ಲಿಯವರೆಗಿನ ಬಿಡುಗಡೆಯಾದ ಏಕೈಕ ಹಿಂದಿ ಚಿತ್ರ ಮುದ್ದಾದಲ್ಲಿ ಆರ್ಯ ಬಬ್ಬರ್ ಜೊತೆ ನಟಿಸಿದರು. ಇವರು ರಂಭಾ, ಜ್ಯೋತಿಕಾ ಮತ್ತು ಲೈಲಾ ಮೆಹ್ದಿನ್ ರನ್ನು ಒಳಗೊಂಡ ಸ್ತ್ರೀ-ಆಧಾರಿತ ಥ್ರೀ ರೋಸಸ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಮುಂದಿನ ವರ್ಷ ಚೆಲ್ಲಾಟ ಹಾಗೂ ಗಣೇಶ್ ಅವರ ಮೊದಲ ಚಲನಚಿತ್ರ ಹುಡುಗಾಟದಲ್ಲಿ ಕಾಣಿಸಿಕೊಂಡರು ಆ ನಂತರ ದ್ವಿಭಾಷಾ ಚಿತ್ರ ನಿನ್ನಾ ನೇಪು ರೇಪು / ನೇಟ್ರು ಇಂದ್ರು ನಾಲೈ ಮತ್ತು ರಮೇಶ್ ಅರವಿಂದ್ ನಿರ್ದೇಶನದ ಅಪಘಾತದಲ್ಲಿ ನಟಿಸಿದರು.ಇವರು ಮಸ್ತ್ ಮಜಾ ಮಾಡಿ, ರಾಜ್ ದಿ ಶೋಮ್ಯಾನ್ ಮತ್ತು ಯೋಗಿ ಚಲನಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ೨೦೧೦ ರಲ್ಲಿ, ಅವರ ಅಪ್ಪು ಪಪ್ಪು ಎಂಬ ಚಿತ್ರ ಬಿಡುಗಡೆಯಾಯ್ತು. ಇವರ ಇತ್ತೀಚೆಗೆ ಬಿಡುಗಡೆಯಾದ ಬಾಸ್ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದರು. ಅವರು ಪ್ರಸ್ತುತ ಸಬಪತಿ ನಿರ್ದೇಶನದ ಪ್ರೇಮಾ ಚಂದ್ರಮಾಮ, ದಿಗಂತ್ ಜೊತೆಗೆ ತುಳಸಿ ನಿರ್ದೇಶನದ ಜಾಲಿ ಬಾಯ್ ನಲ್ಲಿ ನಟಿಸಿದ್ದಾರೆ == ರೇಖಾ ಅಭಿನಯದ ಚಿತ್ರಗಳ ಪಟ್ಟಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರೇಖಾ(ಕನ್ನಡ) ಐ ಎಮ್ ಡಿ ಬಿನಲ್ಲಿ ರೇಖಾ(ಕನ್ನಡ) ಐ ಎಮ್ ಡಿ ಬಿನಲ್ಲಿ