ರೇಡಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಬಣ್ಣರಹಿತ, ವಾಸನೆರಹಿತವಾದ ಈ ಅನಿಲ ವಿಕಿರಣಶೀಲತೆಯನ್ನು ಹೊಂದಿದೆ. ಇದು ಅತ್ಯಂತ ಭಾರವಾದ ಅನಿಲಗಳಲ್ಲಿ ಒಂದು. ಅರ್ಬುದ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ೧೮೯೮ರಲ್ಲಿ ಇದನ್ನು ಫ್ರೆಡೆರಿಕ್ ಅರ್ನ್ಸ್ಟ್ ಡೋರ್ನ್ ಪರಿಶೋಧಿಸಿದನು. ವಿಕಿರಣಶೀಲ ಧಾತುಗಳಲ್ಲಿ ಪತ್ತೆಯಾದ ಮೂರನೆಯದು ಇದು. ರೇಡಿಯಮ್ ಧಾತು ನಶಿತವಾದಂತೆ ಇದು ಉದ್ಭವವಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ.