ರೇಡಿಯಮ್ ಒಂದು ಲೋಹ. ಇದು ಅತ್ಯಂತ ವಿಕಿರಣಶೀಲ ಲೋಹ. ಇದು ಮುಖ್ಯವಾಗಿ ಯುರೇನಿಯಮ್ ಹಾಗೂ ಥೋರಿಯಮ್ ಅದಿರಿನೊಂದಿಗೆ ದೊರೆಯುತ್ತದೆ. ಇದನ್ನು ಫ್ರಾನ್ಸ್‌ನ ಮೇರಿ ಕ್ಯೂರಿ, ಪಿಯರೆ ಕ್ಯೂರಿ ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ ೧೮೯೮ರಲ್ಲಿ ಸಂಶೋಧಿಸಿದರು. ರೇಡಿಯಮ್ ಪ್ರಕೃತಿಯಲ್ಲಿ ಯುರೇನಿಯಮ್ ನ ವಿಕಿರಣ ಸವೆತ ( ) ದಿಂದ ರಚಿಸಲ್ಪಡುತ್ತದೆ. ಇದು ಸತತ ವಿಕಿರಣ ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ. ಇದು ಆವರ್ತಕೋಷ್ಟಕದ 2ಎ ಗುಂಪಿನ 7ನೆಯ ಆವರ್ತದ ಕ್ಷಾರಲೋಹೀಯ ಭಸ್ಮಧಾತು. ಪ್ರತೀಕ . ರಾಸಾಯನಿಕವಾಗಿಯೂ ಪಟುವಾಗಿರುವ ಬೆಳ್ಳಿಬಿಳುಪಿನ ಲೋಹ. ಪರಮಾಣು ಸಂಖ್ಯೆ 88. ಪರಮಾಣು ತೂಕ 226. ದ್ರವನಬಿಂದು 697o ಸೆ. ಕುದಿಬಿಂದು 11370 ಸೆ. ಸಾಪೇಕ್ಷ ಸಾಂದ್ರತೆ 5. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d10 6s2 6p6 7s2. ವೇಲೆನ್ಸಿ 0, +2. ನಾಲ್ಕು ನೈಸರ್ಗಿಕ ವಿಕಿರಣಪಟು ಸಮಸ್ಥಾನಿಗಳಿವೆ. ಬೈಜಿಕ ಕ್ರಿಯೆ ಮುಖೇನ ಇನ್ನೂ 9 ಸಮಸ್ಥಾನಿಗಳು ಲಭ್ಯ. ಇವುಗಳ ಪೈಕಿ ವಿಕಿರಣಪಟು ರೇಡಿಯಮ್-226 ಬಲು ಮುಖ್ಯವಾದದ್ದು (ಅರ್ಧಾಯು 1620 ವರ್ಷ). ಪಿಚ್‌ಬ್ಲೆಂಡ್ (1 ಟನ್ ಅದುರಿನಲ್ಲಿ 0.4 ಗ್ರಾಮ್ ರೇಡಿಯಮ್) ಮತ್ತು ಕಾರ್ನೊಟೈಟ್ ಪ್ರಮುಖ ಅದುರುಗಳು. ಆಮ್ಲ ಅವಿಲೇಯ ಶೇಷವಾಗಿ ಸಲ್ಫೇಟುಗಳ ರೂಪದಲ್ಲಿ ಬೇರಿಯಮಿನೊಂದಿಗೆ ರೇಡಿಯಮನ್ನು ಅದುರಿನಿಂದ ಆಹರಿಸುತ್ತಾರೆ. == ಗುಣಗಳು == ರೇಡಿಯಮ್ ವಾಯುವಿನಿಂದ ಬಲು ವೇಗವಾಗಿ ಉತ್ಕರ್ಷಿತವಾಗಿ ಕಪ್ಪಾಗುತ್ತದೆ. ಎಂದೇ, ರೇಡಿಯಮ್ ಕ್ಲೋರೈಡ್ ಅಥವಾ ರೇಡಿಯಮ್ ಬ್ರೋಮೈಡ್ ರೂಪದಲ್ಲಿ ಮಾತ್ರ ಬಳಕೆ. ರಾಸಾಯನಿಕ ಗುಣಗಳಲ್ಲಿ ಬೇರಿಯಮ್ ಧಾತುವಿಗೂ ರೇಡಿಯಮ್ ಧಾತುವಿಗೂ ಬಲು ಸಾಮ್ಯವಿದೆ. ನೀರಿನೊಂದಿಗೆ ಸುಲಭವಾಗಿ ವರ್ತಿಸುತ್ತದೆ; ಹೈಡ್ರೊಜನ್ ಮತ್ತು ಹೈಡ್ರಾಕ್ಸೈಡ್ ದ್ರಾವಣ ಉತ್ಪನ್ನಗಳು. ಎಲುಬುಗಳಲ್ಲಿ ಕ್ಯಾಲ್ಸಿಯಮಿನ ಬದಲು ರೇಡಿಯಮ್ ಸಂಚಯಿಸಬಲ್ಲದು. ತನ್ಮೂಲದ ದೀರ್ಘಕಾಲೀನ ವಿಕಿರಣನದ ಪರಿಣಾಮವೇ ರಕ್ತಹೀನತೆ ಮತ್ತು ಕ್ಯಾನ್ಸರ್ (ಸಹಿಷ್ಣುತಾ ಮಿತ 1 ಮಿಲಿಗ್ರಾಮ್). ರೇಡಾನ್ ಅನಿಲಧಾತು ರೇಡಿಯಮಿನ ವಿಕಿರಣಕ್ಷಯದ ಉತ್ಪನ್ನ. == ಉಪಯೋಗಗಳು == ರೇಡಿಯಮಿನ ನಿಯಂತ್ರಿತ ವಿಕಿರಣವನ್ನು ಕ್ಯಾನ್ಸರ್ ಕೋಶಗಳ ನಾಶಕ್ಕೆ ಬಳಸುವುದುಂಟು. ಔದ್ಯಮಿಕ ರೇಡಿಯೊರೇಖನದಲ್ಲಿ (ರೇಡಿಯೊಗ್ರಫಿ) ರೇಡಿಯಮ್ ಸಲ್ಫೇಟ್ ಬಳಕೆ ಇದೆ. ಸಂಶೋಧನೆ ಹಾಗೂ ನ್ಯೂಟ್ರಾನ್ ಪಟುಕರಣದಿಂದ ಪದಾರ್ಥ ವಿಶ್ಲೇಷಣೆಯಲ್ಲಿ ನ್ಯೂಟ್ರಾನ್ ಆಕರವಾಗಿಯೂ ಬಳಕೆ ಉಂಟು. ದೀಪ್ತಿಶೀಲ ಬಣ್ಣಗಳ ತಯಾರಿಯಲ್ಲಿ ಬಳಕೆ ಇತ್ತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == " : ". 8, 2012. 9, 2016. 13 2017. – , 25 2019 ವೇಬ್ಯಾಕ್ ಮೆಷಿನ್ ನಲ್ಲಿ. ( )