ರೋಜಾ ಸೆಲ್ವಮಣಿ ಅವರು ೧೭ ನವೆಂಬರ್ ೧೯೭೨ ರಲ್ಲಿ ಜನಿಸಿದ್ದಾರೆ. ಅವರು ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿಯಾಗಿದ್ದಾರೆ. ಅವರು ಪ್ರಸ್ತುತ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಜೋತೆ ಒಟ್ಟುಗೂಡಿದರು. ೨೦೧೪ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಗರಿಯಿಂದ ಶಾಸಕರಾಗಿ ಜಯ ಗಳಿಸಿದರು. == ಆರಂಭಿಕ ಜೀವನ == ರೋಜಾ ಅವರು ೧೯೭೨ ರಲ್ಲಿ ನಾಗರಾಜ ರೆಡ್ಡಿ ಮತ್ತು ಲಲಿತಾ ದಂಪತಿಗಳಿಗೆ ಆಂಧ್ರ ಪ್ರದೇಷ ರಾಜ್ಯದ ಚಿತ್ತೂರು ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು. ಅವಳ ಪೂರ್ಣ ಹೆಸರು ಶ್ರೀ ಲತಾ. ಅವರ ತಂದೆ-ತಾಯಿಗೆ ಮೂವರು ಮಕ್ಕಳು. ರೋಜಾ ಮತ್ತು ಇಬ್ಬರು ಸಹೋದರರು(ಕುಮಾರಸ್ವಾಮಿ ಮತ್ತು ರಾಮಪ್ರಸಾದ್).ನಂತರ ಕುಟುಂಬ ಹೈದರಾಬಾದ್ ಗೆ ತೆರಳಿದರು.ಅವರು ಶ್ರೀ ಪದ್ಮಾವತಿ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ತನ್ನ ಸನಾತಕ ಪದವಿ ಮಾಡಿದರು. ರೋಜಾ ಕುಚುಪುಡಿಯನ್ನು ಕಲಿತರು.ಅವರು ಚಿತ್ರರಂಗಕ್ಕೆ ಪ್ರವಾಶಿಸುವ ಮೊದಲು ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ರೋಜಾ ತೆಲುಗು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದರು.ಅವರ ಮೊದಲನೇ ಚಿತ್ರ ಪ್ರೇಮ ತಪಸ್ಸು. ಅದರಲ್ಲಿ ನಾಯಕ ರಾಜೇಂದ್ರ ಪ್ರಸಾದ್ ಗೆ ನಾಯಿಯಾಗಿ ನಟಿಸಿದರು. ಈ ಇಡೀ ಚಿತ್ರವನ್ನು ತಿರುಪತಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ನಿರ್ದೇಶಕ ಆರ್.ಕೆ.ಸೆಲ್ವಮಣಿ, ಚೆಂಬರುತಿ ಮತ್ತು ನಟ ಪ್ರಶಾಂತ್ ರವರು ತಮಿಳು ಚಿತ್ರೆರಂಗಕ್ಕೆ ರೋಜಾರವರನ್ನು ಪರಿಚಯಿಸಿದರು.ಆಕೆಯು ಮಮ್ಮುಟ್ಟಿಯ "ವೇಲೂರ್ ಮೆಮಾನ್" ಮತ್ತು ಪ್ರಭುದೇವ ಜೊತೆ "ಮಸ್ತಾನಾ ಮಸ್ತಾನಾ" ಎಂಬ ಹಾಡುಗಳು ಜನಪ್ರಿಯವಾದವು. ರಜನೀಕಾಂತ್(ವೀರ) ಮತ್ತು ಅರ್ಜುನ್ ಸರ್ಜ(ಅಯುಧ ಪೂಜ) ಮುಂತಾದವರ ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ. ವಿಕ್ರಮಾನ್ನ ನಿರ್ದೇಶನದ ಚಲನಚಿತ್ರ "ಉನ್ನಿದಯತಿಲ್ ಎನ್ನೈ ಕೊಡುತೇನ್"ದಲ್ಲಿ ರೋಜಾ ಪ್ರಮುಖ ವೃತ್ತಿ ಪ್ರಗತಿಯನ್ನು ಗಳಿಸಿದರು.ಅವರ 100ನೇಯ ಚಿತ್ರ ಪೊಟ್ಟು ಅಮ್ಮನ್ ಆಗಿತ್ತು. ನಂತರ ರೋಜಾ ಅರಸು(೨೦೦೩),ಪಾರಿಜಾತಂ(೨೦೦೬), ಶಂಭೋ ಶಿವ ಶಂಭೋ(೨೦೧೦), ಗೋಲಿಮಾರ್(೨೦೧೦),ಮೊಗುಡು(೨೦೧೧),ಕೋಡಿಪುಂಜು(೨೦೧೧),ವೀರಾ,ಕಾವಲನ್(೨೦೧೧),ಮತ್ತು ಸಗುನಿ(೨೦೧೨) ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರರಾಗಿ ಕಾಣಿಸಿಕೊಂಡರು. == ರಾಜಕೀಯ ಜೀವನ == ರೋಜಾ ತೆಲುಗು ದೇಶಂ ಪಾರ್ಟಿಗೆ (ಟಿಡಿಪಿ)ಸೇರಿದರು ಮತ್ತು ತೆಲುಗು ಮಹಿಳಾ ಪಕ್ಷದ ಮಹಿಳೆ ಪಾರ್ಶ್ವದ ಅಧ್ಯಕ್ಷರಾಗಿದ್ದರು.೨೦೦೯ರಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲಿ ರೋಜಾ ಸತತ ಎರಡನೇ ಬಾರಿಗೆ ಸೋಲನ್ನು ಅಪ್ಪಿದರು. ಇದರ ಅಂತಿಮವಾಗಿ ತನ್ನ ಪ್ರತಿಸ್ಪರ್ಧಿ ವಿರೋಧ ಪಕ್ಷದ ನಾಯಕರು, ಎದುರಿಸಿ ಮತ್ತು ರಾಜಕೀಯ ವರ್ತನೆಗಳನ್ನು ಒಳಗೊಂಡಿದ್ದರು. ಆಗಸ್ಟ್ 2009ರಲ್ಲಿ, ಅವರು ಟಿಡಿಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿದರು. ನಂತರ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ೧೬ ಮೇ ೨೦೧೪ರಂದು ಅವರು ನಗರಿಯಿಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜಯವನ್ನು ಗಳಿಸಿದರು. == ವಿಚಾರಗಳು == ರೋಜಾ ಮತ್ತು ಮೀನಾ ಪರಸ್ಪರ ಹೋಲಿಕೆಯ ಕಿರಿಯನ್ನು ಹೊಂದಿದ್ದರು, ಮತ್ತು ಹಲವಾರು ಚಿತ್ರಗಳಲ್ಲಿ ಮೀನಾ ರಜಾ ತಂಗಿಯಾಗಿ ನಟಿಸಿದರು. ರೋಜಾ ಡ್ರೆಸ್ಸಿಂಗ್ ಒಂದು ಒಲವು ಹೊಂದಿತ್ತು. ತಮ್ಮ ಸಹನಾಯಕಿಯರಾದ ದೇವಿಯಾನಿ, ಖುಷ್ಬೂ, ರಂಜಿತಾ, ಮುಮ್ತಾಜ್ ಇನ್ನಿತರರಿಗೆ ತಾವೇ ಸ್ವತಃ ಹೇರ್ ಡ್ರೆಸ್ಸಿಂಗ್ ಮಾಡುವುದು ಕಂಡು ಬಂದಿದೆ. ನಟಿ ರಮ್ಯ ಕ್ರಿಷ್ಣನ್ ಪ್ರಕಾರ, ತಮ್ಮ ಸ್ನೇಹಿತೆ ಹಾಗು ಸಹ ನಟಿಯಾದ ರೋಜಾ ಅವರು ತಮ್ಮ ಮೇಕಪ್ ತಾವೇ ಮಾಡಿಕೊಳ್ಳುತ್ತಿದ್ದರಂತೆ.ನಟಿ ಮುಮ್ತಾಜ್ ಅವರು ಒಂದು ಸಂದರ್ಶನದಲ್ಲಿ ಹೀಗೆ ಹೇಳಿದರು, ೨೦೦೩ರಲ್ಲಿ ನಡೆದ ಸಿಂಗಪುರ್ ಫಿಲ್ಮ್ ಶೋ ಸಂದರ್ಭದಲ್ಲಿ ರೋಜಾ ಅವರೇ ಅವರಿಗೆ ಹೇರ್ ಡ್ರೆಸ್ಸಿಂಗ್ ಮತ್ತು ಮೇಕ್-ಅಪ್ ಮಾಡುವಾಗ ಅವರಿಗಿದ್ದ ಉತ್ಸಾಹವನ್ನು ಹಾಗೂ ಅಹಂಕಾರವಿಲ್ಲದ ವರ್ತನೆಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಂಡರು. == ರಾಜಕೀಯ ವಿವಾದಗಳು == ಆರ.ಕೆ.ರೋಜಾ ಅವರು ಮಹಿಳಾ ಶಾಸಕರ ನಡುವೆ ಸಕ್ರಿಯ ಸ್ಪೀಕರ್ ಆದರು.ಅವರು ಅವರ ಪ್ರದೋಚನಕಾರಿ ಭಾಷೆಗೆ ಹೆಸರಾಗಿದ್ದಾರೆ, ಅನೇಕ ಸಂದರ್ಭಗಳಲ್ಲಿ ವಿಧಾನಸಭೆ ವಿಚಾರಣೆಯ ಸಮಯದಲ್ಲಿ ಅವರ ದುರ್ವರ್ತನೆಯ ಕಾರಣದಿಂದಾಗಿ ಅವರನ್ನು ವಿಧಾನಸಭೆಯಲ್ಲಿ ಹಾಜರಾಗದಂತೆ ನಿಷೇಧಿಸಲಾಗಿತ್ತು. ೧೮ ಡಿಸೆಂಬರ್ ೨೦೧೫ ರಂದು, ಶಾಸಕಾಂಗ ಸಭೆಯ ಎಲ್ಲಾ ಸದಸ್ಯರು ಹಾಗು ಮನೆಯ ಮುಖ್ಯಸ್ಥ-ಸ್ಪೀಕರ್ ಒಟ್ಟುಗೂಡಿ ಈ ನಿರ್ಧಾರವನ್ನು ತೆಗೆದುಕೊಂಡರು.ವಿಧಾನಸಭೆ ಚಟುವಟಿಕೆಗಳು ಮತ್ತು ಮನೆಯ ಶಿಸ್ತು ಸಂಬಂಧಿಸಿದಂತೆ ವರ್ತನೆಯನ್ನು ತನ್ನ ಭಾಷೆಯ ಆಯ್ಕೆ ಹಾಗೂ ಹೆಚ್ಚು ವಿವಿಧ ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು ಮತ್ತು ಕಾರ್ಯಕರ್ತರು ಟೀಕಿಸಿದರು.ಇದೆಲ್ಲಾ ಹೊರತಾಗಿಯೂ ..ಜಗನ್ ಮೋಹನ್ ರೆಡ್ಡಿ, ವಿರೋಧ ಪಕ್ಷದ ಗೌರವಾನ್ವಿತ ನಾಯಕ, ಅವರ ಬೆಂಬಲಿತನಾಗಿ ಹಾಗು ಅವರ ನಡತೆಗೆ ಬೆಂಬಲ ನೀಡಿದರು. ಅಂತಹ ನಡವಳಿಕೆಯನ್ನು ಬೆಂಬಲಿಸಲು ಕಾರಣವೇನೆಂದು ಹಲವು ವಿಶ್ಲೇಷಕರು ಪ್ರಶ್ನಿಸಿ, ಇದನ್ನು ರಾಜ್ಯ ಚೆನ್ನಾಗೆ ಎಂದು ಪರಿಗಣಿಸಲಾಯಿತು. ..ರೋಜಾ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿತ್ತು.ಇಂತಹ ಅನುಮಾನಗಳು ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಮಾಡಿತು.ಅಸೆಂಬ್ಲಿಯ (ಅಥವಾ ವಿಧಾನಸಭೆಯ) ಆಸ್ತಿಯಾದ ವೀಡಿಯೋ ವಿವರಗಳನ್ನು ಮಾಧ್ಯಮದವರು ಸಭಾಪತಿಯವರ ಅನುಮತಿಯಿಲ್ಲದೆ ಹೇಗೆ ಮಾಧ್ಯಮದಲ್ಲಿ ಪ್ರಕಟಿಸಿದರು? ಎಂಬುದನ್ನು ಸಭಾಸದಸ್ಯರೆಲ್ಲರೂ ಪ್ರತಿಭಟಿಸಿದಾಗ ಸಭಾಪತಿಯವರು ಇದನ್ನು ವಿಚಾರಿಸಲು ಒಂದು ಆಯೋಗವನ್ನು ರಚಿಸಿ ಅವರ ವರದಿಯನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸುವವುದಾಗಿ ಭರವಸೆಯಿತ್ತರು. == ಇತರ ಕಾರ್ಯಗಳು == ಮೋಡರ್ನ್ ಮಹಾಲಕ್ಷ್ಮಿ ಎಂಬ ಕಾರ್ಯಕ್ರಮದಲ್ಲಿ ಅನುಸೂಯರವರ ಬದಲು ನಿರೂಪಕಿಯಾಗಿ ರೋಜಾ ಅವರು ಕಾರ್ಯ ನಿರ್ವಹಿಸಿದರು.ಈ ಕಾರ್ಯಕ್ರಮವು ಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಜಬರ್ದಸ್ತ್ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು.ಈ ಕಾರ್ಯಕ್ರಮವು ಈ ಟಿವಿಯಲ್ಲಿ ಪ್ರಸಾರವಾಗುತಿತ್ತು. ಜೀ ತಮಿಳ್ ನಲ್ಲಿ ಲಕ್ಕಾ-ಕಿಕ್ಕಾ ಎಂಬ ಕಾರ್ಯಕ್ರಮವನ್ನು ನಿರ್ವಹಿಸಿದರು. == ವಯಕ್ತಿಕ ಜೀವನ == ರೋಜಾ ಅವರು ಆರ್.ಕೆ.ಸೆಲ್ವಮಣಿ ಅವರನ್ನು ೧೦ ಆಗಸ್ಟ್ ೨೦೦೨ ರಂದು ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗ ಹಾ ಒಬ್ಬ ಮಗಳು ಇದ್ದಾರೆ. == ಚಲನಚಿತ್ರಗಳ ಪಟ್ಟಿ == === ತೆಲುಗು ಚಿತ್ರಗಳು === === ತಮಿಳು ಚಿತ್ರಗಳು === === ಮಲಯಾಲಮ್ ಚಿತ್ರಗಳು === === ಕನ್ನಡ ಚಿತ್ರಗಳು === == ದೂರದರ್ಶನ == == ಉಲ್ಲೇಖಗಳು ==