ಲಕ್ನೋ, ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಒ೦ದಾಗಿದೆ, ಲಕ್ನೋ ನಾಮಸೂಚಕ ರಾಜ್ಯದ ಆಡಳಿತ ಕೇಂದ್ರದ ಮುಖ್ಯ ಕಛೇರಿಯಾಗಿದೆ ಮತ್ತು ನಾಮಸೂಚಕ ಜಿಲ್ಲಾ ಮತ್ತು ವಿಭಾಗವಾಗಿದೆ . ಭಾರತದ ೮ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಮತ್ತು ಉತ್ತರ ಪ್ರದೇಶದ ದೊಡ್ಡ ನಗರವಾಗಿದೆ . ಲಕ್ನೋ ಯಾವಾಗಲೂ ೧೮ ಮತ್ತು ೧೯ ನೇ ಶತಮಾನಗಳಲ್ಲಿ ನವಾಬ್ ಅಧಿಕಾರದ ಸ್ಥಾನವಾಗಿ ಉತ್ತರ ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಹಬ್ ಆಗಿ ಮತ್ತು ಬಹುಸಂಸ್ಕೃತಿಯ ನಗರವಾಗಿದೆ. ಇದು ಸರ್ಕಾರ, ಶಿಕ್ಷಣ , ವಾಣಿಜ್ಯ, ಅಂತರಿಕ್ಷಯಾನ, ಹಣಕಾಸು, ಔಷಧ , ತಂತ್ರಜ್ಞಾನ , ವಿನ್ಯಾಸ , ಸಂಸ್ಕೃತಿ, ಪ್ರವಾಸೋದ್ಯಮ, ಸಂಗೀತ ಮತ್ತು ಕವನಗಳ ಪ್ರಮುಖ ಕೇಂದ್ರವಾಗಿದೆ. ನಗರವು ಸಮುದ್ರ ಮಟ್ಟದಿಂದ ಸುಮಾರು ೧೨೩ ಮೀಟರ್ ( ೪೦೪ ಅಡಿ) ಎತ್ತರದಲ್ಲಿ ನಿಂತಿದೆ ಮತ್ತು ೨,೫೨೮ಚದರ ಕಿಲೋಮೀಟರ್ ( ೯೭೬ಚ ಮೈಲಿ ) ನಷ್ಟು ಪ್ರದೇಶವನ್ನು ಒಳಗೊಂಡಿದೆ. ಇದು ಪಶ್ಚಿಮಕ್ಕೆ ಬಾರಾಬಂಕಿ ಜಿಲ್ಲೆ, ಪೂರ್ವಕ್ಕೆ ಉನ್ನಾವೋ ಜಿಲ್ಲ, ಉತ್ತರ ದಕ್ಷಿಣದಲ್ಲಿ ರಾಯ್‍ಬರೇಲಿ ಮತ್ತು ಸೀತಪುರ ಮತ್ತು ಹಾರ್ಡೋಯ್ ಜಿಲ್ಲೆಗಳಿ೦ದ ಸುತ್ತುವರಿದಿದೆ, ಲಕ್ನೋ ಗೋಮತಿ ನದಿಯ ವಾಯವ್ಯ ತೀರದಲ್ಲಿ ಕೂರುತ್ತದೆ . ಹಿಂದಿ ನಗರದ ಪ್ರಮುಖ ಭಾಷೆಯಾಗಿದೆ ಮತ್ತು ಉರ್ದು ಸಹ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ . ಇದನ್ನು ರೈಲು ಮತ್ತು ರಸ್ತೆಯ ಮೂಲಕ ಭಾರತದ ಪ್ರತಿಯೊಂದು ಭಾಗದಿ೦ದ ಪ್ರವೇಶಿಸಬಹುದು. ಐತಿಹಾಸಿಕವಾಗಿ ಅವಧ್ ರಾಜಧಾನಿಯಾಗಿ ಮತ್ತು ದೆಹಲಿ ಸುಲ್ತಾನರಿ೦ದ ನಿಯಂತ್ರಿಸಲ್ಪಟ್ಟ , ಇದು ನಂತರ ಅವಧ್ ನವಾಬರಿಗೆ ವರ್ಗಾಯಿಸಲಾಯಿತು. ಬಂಗಾಳ, ಅವಧ್ ಮತ್ತು ಮೊಘಲ್ ನವಾಬರ ಲಾರ್ಡ್ ಕ್ಲೈವ್ನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟಿತು ಮತ್ತು ೧೮೫೭ ರಲ್ಲಿ ಬ್ರಿಟಿಷ್ ರಾಜ್ ಗೆ ವರ್ಗಾಯಿಸಲಾಯಿತು. ಇದು ಉಳಿದ ಭಾರತದ ಜೊತೆಗೆ , ಲಕ್ನೋ ೧೫ ಆಗಸ್ಟ್ ೧೯೪೭ ರಂದು ಬ್ರಿಟನ್ನಿಂದ ಸ್ವತಂತ್ರವಾಯಿತು. ಇದು ವಿಶ್ವದ ೭೪ ನೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಲಕ್ನೋ ನಗರದ ಎಲ್ಲಾ ಕಡೆ ೪೦೦೦ ಸಿಸಿಟಿವಿ ಕ್ಯಾಮರಾಗಳನ್ನು ಇನ್ಸ್ಟಾಲ್ ಮಾಡುವ ಮುಲಖ ಭಾರತದ ಮೊದಲ ಸಿಸಿಟಿವಿ ನಗರವಾಗಿದೆ. ಈ ಸಂಖ್ಯೆ ಏಪ್ರಿಲ್ ೨೦೧೫ ನೊಳಗೆ ೯೦೦೦ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಲಕ್ನೋ ಪೊಲೀಸ್ ಈ ಕ್ಯಾಮೆರಾಗಳನ್ನು ಬಳಸಿ ಅಪರಾಧಗಳ ಮೇಲೆ ಕಣ್ಣೀಟ್ಟಿರುತ್ತರೆ. ಇದಲ್ಲದೆ, ಆಧುನಿಕ ಪೊಲೀಸ್ ಕಂಟ್ರೋಲ್ ರೂಂ ಡ್ರೋನ್ಸ್ ಗಳನ್ನು ಬಳಸಿ ಪ್ರಮುಖ ಪ್ರದೇಶಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ, ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿ ಮೇಲ್ವಿಚಾರಣೆಗಾಗಿ ಬಳಸಿಕೊಳ್ಳುತ್ತರೆ . == ಬಾಹ್ಯ ಸಂಪರ್ಕಗಳು == , , : 25 1990