ಲಕ್ಸೆಂಬರ್ಗ್ ಪಶ್ಚಿಮ ಯುರೋಪ್‌ನಲ್ಲಿನ ಒಂದು ಪುಟ್ಟ ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಸೆಂಬರ್ಗ್ ಜರ್ಮನಿ, ಫ್ರಾನ್ಸ್‌ ಮತ್ತು ಬೆಲ್ಜಿಯಂಗಳ ನಡುವೆ ಹುದುಗಿದೆ. ಲಕ್ಸೆಂಬರ್ಗ್ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ತಲಾವಾರು ಆಂತರಿಕ ಉತ್ಪನ್ನ ಹೊಂದಿದೆ.